ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮಾಂಚಕ ಕಸರತ್ತು...

Last Updated 8 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ಬಾನಂಗಳದಲ್ಲಿ ವಿಮಾನ ಯಾನ ಮಾಡುವುದೆಂದರೆ ನನಗೆ ಅಚ್ಚುಮೆಚ್ಚು. ಅತಿ ವೇಗವಾಗಿ ವಿಮಾನ ಹಾರಾಟ ನಡೆಸುವಾಗ ಮನಸ್ಸಿಗೆ ಏನೋ ಖುಷಿ. ಅಪಾಯಕಾರಿ ಕಸರತ್ತು ನಡೆಸಿದಾಗ ಉಂಟಾಗುವ ಅನುಭವ ನಿಜಕ್ಕೂ ರೋಮಾಂಚನ...

ಜೆಕ್ ಗಣರಾಜ್ಯದ ‘ಫ್ಲೈಯಿಂಗ್ ಬುಲ್ಸ್’ ಏರೊಬಾಟಿಕ್ಸ್ ತಂಡದ 62ರ ಹರೆಯದ ಮಹಿಳಾ ಕ್ಯಾಪ್ಟನ್ ರಾಡ್ಕಾ ಮಚೊವಾ ಅವರ ಭರವಸೆಯ ನುಡಿಗಳಿವು.
‘ಏರೊ ಇಂಡಿಯಾ 2011’ರಲ್ಲಿ ವೈಮಾನಿಕ ಪ್ರದರ್ಶನ ನೀಡಲಿರುವ ‘ಫ್ಲೈಯಿಂಗ್ ಬುಲ್ಸ್’ ತಂಡದ ಸದಸ್ಯರು ನಗರದ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ‘ಜೀವನದಲ್ಲಿ ಮೊದಲ ಬಾರಿಗೆ ವಿಮಾನ ಯಾನ ಮಾಡಿದಾಗ ಉಂಟಾದ ಅನುಭವ ರೋಚಕ. ಆ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಹಂತ ಹಂತವಾಗಿ ಅಭ್ಯಾಸ ನಡೆಸಿದ ನಂತರ ಕಸರತ್ತು ನಡೆಸಲು ಆರಂಭಿಸಿದೆ’ ಎಂದು ರಾಡ್ಕಾ ಹೇಳಿದರು.

‘ಒಂದೊಂದು ವಿಮಾನಗಳು ಒಂದೊಂದು ರೀತಿಯಲ್ಲಿರುತ್ತವೆ. ಅವುಗಳ ಸಾಮರ್ಥ್ಯ ಅರಿತು ಚಾಲನೆ ಮಾಡಬೇಕಾಗುತ್ತದೆ. ನಿರಂತರ ಅಭ್ಯಾಸ ಮಾಡಬೇಕು. ಏಕಾಗ್ರತೆ, ಆತ್ಮವಿಶ್ವಾಸದಿಂದ ವಿಮಾನ ಯಾನ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದೇ ಸಂದರ್ಭದಲ್ಲಿ ತಂಡದ ಸದಸ್ಯರಾದ ಜಿರಿ ಸಲ್ಲೆರ್, ಜಿರಿ ವೆಪ್ರೆಕ್ ಹಾಗೂ ಮಿರೊಸ್ಲವ್ ಕ್ರೆಸಿ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಅತ್ಯುತ್ತಮ ಪ್ರಶ್ನೆ ಕೇಳಿದ ಮೂವರು ವಿದ್ಯಾರ್ಥಿಗಳಿಗೆ ಏರೊ ಇಂಡಿಯಾ ಪ್ರದರ್ಶನದ ಉಚಿತ ಪಾಸ್ ನೀಡಲಾಯಿತು. ತಂಡದ ವ್ಯವಸ್ಥಾಪಕ ಮಾರ್ಟಿನ್ ನೆಪೋವಿಮ್ ಉಪಸ್ಥಿತರಿದ್ದರು.

 ‘ಏರೊ ಇಂಡಿಯಾ 2011’ ಪ್ರದರ್ಶನದಲ್ಲಿ ಈ ತಂಡ ಝಿನ್ 50 ಎಲ್‌ಎಕ್ಸ್ ಪುಟ್ಟ ವಿಮಾನ ಬಳಸಿ ಕಸರತ್ತು ಪ್ರದರ್ಶಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT