ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋವರ್ಸ್ ಶುಭಾರಂಭ

ರಾಜ್ಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್
Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಶಿವಮೊಗ್ಗ: ಧಾರವಾಡದ ರೋವರ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್‌ನವರು ಇಲ್ಲಿ ಶಿವಮೊಗ್ಗ ಯೂತ್ಸ್ ಆಶ್ರಯದಲ್ಲಿ ನಡೆಯುತ್ತಿರುವ ಅಸೋಸಿಯೇಷನ್ ಕಪ್ ರಾಜ್ಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು.

ಮಂಗಳವಾರ ನಡೆದ ತಮ್ಮ ಮೊದಲ ಪಂದ್ಯದಲ್ಲಿ ರೋವರ್ಸ್ 47-32ರಿಂದ ದಾವಣಗೆರೆಯ ಗ್ರೀನ್ಸ್ ವಿರುದ್ಧ ಗೆದ್ದಿತು. ವಿಜಯೇ ತಂಡದ ಪರ ನವೀನ್ ಮತ್ತು ಮೋಸಿನ್ ಕ್ರಮವಾಗಿ 16 ಮತ್ತು 13 ಪಾಯಿಂಟ್ಸ್ ಗಳಿಸಿ ಗೆಲುವಿನ ರೂವಾರಿ ಎನಿಸಿದರು.

ಇತರ ಪಂದ್ಯಗಳಲ್ಲಿ ಪಟ್ಟಾಭಿರಾಮ್ ಕ್ಲಬ್‌ನವರು 47-24ರಿಂದ ಬಿಸಿವೈಎ ವಿರುದ್ಧ ಗೆದ್ದರೆ, ಆತಿಥೇಯ   ಶಿವಮೊಗ್ಗ ಯೂತ್ಸ್ 40-24ರಿಂದ ಚಿತ್ರದುರ್ಗದ ದುರ್ಗನ್ಸ್ ವಿರುದ್ಧ ಜಯ ಸಾಧಿಸಿತು.

ಎಸ್‌ಬಿಐ ತಂಡದವರು 43-20ರಿಂದ ಹಾಸನದ ಒಮೆಗಾ ವಿರುದ್ಧ ಗೆದ್ದರು. ಎಸ್‌ಬಿಐ ಪರ ಶ್ರೀಧರ್ 19 ಪಾಯಿಂಟ್ಸ್ ಗಳಿಸಿ ತಮ್ಮ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT