ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣ ರೇಖೆ ದಾಟಿದ ಮಮತಾ: ಜೇಟ್ಲಿ

Last Updated 10 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಪಶ್ಚಿಮ­ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲಕ್ಷ್ಮಣರೇಖೆ ದಾಟುತ್ತಿದ್ದಾರೆ’ ಎಂದು ಬಿಜೆಪಿ ಶನಿವಾರ ಆಕ್ಷೇಪಿಸಿದೆ.

‘ಮೋದಿ ಅವರನ್ನು ಟೀಕಿಸಲು ‘ದೀದಿ’ ಕೆಟ್ಟ ವಿಶೇಷಗಳನ್ನು ಬಳಸುತ್ತಿ­ದ್ದಾರೆ. ಅವರ ಬದಲಾವಣೆ ಮಂತ್ರ ಅರಾಜಕತೆಯನ್ನು ಸೃಷ್ಟಿಮಾಡಿದೆಯೇ ಹೊರತು ಅಭಿವೃದ್ಧಿ ಅಥವಾ ಉತ್ತಮ ಆಡಳಿತವನ್ನಲ್ಲ’ ಎಂದು ಬಿಜೆಪಿ ಹಿರಿಯ ನಾಯಕ ಅರುಣ್‌್ ಜೇಟ್ಲಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ರಾಜ್ಯವನ್ನು ಬದಲಾವಣೆಯತ್ತ  ಕೊಂಡೊ­ಯ್ಯುವ ಭರವಸೆ ಮೇಲೆ ಮಮತಾ ಅವರು 34 ವರ್ಷಗಳ ಎಡರಂಗದ ಆಡಳಿತವನ್ನು ಧೂಳೀಪಟ ಮಾಡಿ ಅಧಿಕಾರ ಗದ್ದುಗೆ ಏರಿದ್ದರು.

ಜೇಟ್ಲಿ ಹೇಳಿದ್ದೇನು...?: ‘ಪಶ್ಚಿಮ­ಬಂಗಾಳ­ದಲ್ಲಿ ಮಮತಾ ಹಾಗೂ ಅವರ ಪಕ್ಷಕ್ಕೆ ಸಾಂಪ್ರದಾಯಿಕ ಎದುರಾಳಿ­ಗ­ಳೆಂದರೆ ಎಡ ಪಕ್ಷಗಳು. ಆದರೂ ‘ದೀದಿ’ ಬಿಜೆಪಿ ಮೇಲೆ ಹರಿಹಾಯುವುದು ಏಕೆ? ಮಮತಾ ಬುದ್ಧಿವಂತ ರಾಜಕಾರಣಿ.  ಆದರೆ, ರಾಜ್ಯದಲ್ಲಿ ಅಭಿವೃದ್ಧಿ ಕೊರತೆ ಕಾರಣ ಮಧ್ಯಮವರ್ಗದ ಮತದಾರರು ಅವರಿಂದ ದೂರವಾಗಿದ್ದಾರೆ. ಅವರಿಗೆ ಈಗ ಬೇಕಾಗಿರುವುದು ಮೋದಿ’ ಎಂದು ಹೇಳಿದ್ದಾರೆ.

‘ತೃಣಮೂಲ ಕಾಂಗ್ರೆಸ್‌ ಬೆಂಬಲಿ­ಗರು ಮಾತ್ರವಲ್ಲ, “ಗೂಂಡಾಗಳು’’ ಎಡ ಪಕ್ಷದಿಂದ ಮಮತಾ ಕಡೆ ವಾಲಿ­ದ್ದಾರೆ.  ಇದರ ಜತೆಗೆ ಮಮತಾ  ಅವ­ರಿಗೆ ಬಾಂಗ್ಲಾದೇಶದ ಅಕ್ರಮ ವಲಸಿಗರ ಬೆಂಬಲ ಇದೆ’ ಎಂದಿದ್ದಾರೆ.

‘ಈ ಎಲ್ಲ ಕಾರಣಗಳಿಗಾಗಿ ಮಮತಾ ಅಕ್ರಮ ವಲಸಿಗರನ್ನು ಬೆಂಬಲಿಸ­ಬೇಕಾ­ಗಿದೆ ಮತ್ತು ಮೋದಿ ಅವರನ್ನು ನಿಂದಿಸ­ಬೇಕಾಗಿದೆ. ಇಂಥ ನಡವಳಿಕೆ ಮಿತಿ ಮೀರಿ­ದಂತೆಲ್ಲ  ‘ದೀದಿ’ ತಮ್ಮನ್ನು ಅಧಿಕಾರಕ್ಕೆ ತಂದು ಕೂರಿಸಿದ ಪ್ರಮುಖ ವರ್ಗದ­ವರಿಂದ ದೂರವಾಗುತ್ತಾ ಹೋಗುತ್ತಾರೆ. ಅಕ್ರಮವಾಗಿ ಆಮದು ಮಾಡಿಕೊಂಡ ಮತಗಳನ್ನು ಅವರು ಎಷ್ಟು ಕಾಲ ನೆಚ್ಚಿಕೊಂಡಿರಲು ಸಾಧ್ಯ’ ಎಂದು ಜೇಟ್ಲಿ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT