ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಬಂದ್ ಸಂಪೂರ್ಣ ಯಶಸ್ವಿ, ಬಸ್ ಸ್ಥಗಿತ

Last Updated 7 ಅಕ್ಟೋಬರ್ 2012, 9:50 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ರಾಜ್ಯದ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ಪಕ್ಷಾತೀತ ರೈತಪರ ಹೋರಾಟ ವೇದಿಕೆ, ಕನ್ನಡ ರಕ್ಷಣಾ ವೇದಿಕೆ, ಭಾರತ ಕೃಷಿಕ ಸಮಾಜ ಸೇರಿದಂತೆ ಹಲವಾರು ಸಂಘಟನೆಗಳು ನಡೆಸಿದ ಬಂದ್ ಸಂಪೂರ್ಣ ಯಶಸ್ವಿ ಆಯಿತು.

ಸ್ಥಳೀಯ ಬಜಾರದಲ್ಲಿನ ಹಾವಳಿ ಹನುಮಪ್ಪನ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಸಂಘಟನೆಗಳ ಸದಸ್ಯರು ಬಜಾರ, ಪಾದಗಟ್ಟಿ, ಪುರಸಭೆ, ಶಿಗ್ಲಿ ಕ್ರಾಸ್ ಮೂಲಕ ಸಂಚರಿಸಿ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದರು. ಮಾರ್ಗ ಮಧ್ಯ ಟೈರ್‌ಗಳಿಗೆ ಬೆಂಕಿ ಹಚ್ಚಿ ಘೋಷಣೆ ಕೂಗಿದರು.

ನಂತರ ಜರುಗಿದ ಸಾರ್ವಜನಿಕ ಸಭೆ ಉದ್ದೇಶಿಸಿ ತಾಲ್ಲೂಕು ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ಗೋಡಿ, ಬಿ.ಎಸ್. ಬಾಳೇಶ್ವರಮಠ, ಪೂರ್ಣಾಜಿ ಖರಾಟೆ, ಬಸವರಾಜ ಬೆಂಡಿಗೇರಿ, ನೀಲಪ್ಪ ಕರ್ಜೆಕಣ್ಣವರ, ವರ್ತೂರ್ ಪ್ರಕಾಶ ಯುವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ, ಮಾತನಾಡಿ ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಇದ್ದು ಹನಿ ಹನಿ ನೀರಿಗೂ ರೈತರು ಪರದಾಡುತ್ತಿದ್ದಾರೆ. ರಾಜ್ಯದ ಜನರು ಹೋರಾಟ ಮಾಡುತ್ತಿದ್ದರೆ ಶಾಸಕರು, ಸಂಸದರು ತಮ್ಮ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿರುವುದು ಸರಿ ಅಲ್ಲ. ಕಾರಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಬರಬೇಕು ಎಂದು ಆಗ್ರಹಿಸಿದರು.

ಮುದಕಪ್ಪ ಹಾದಿಮನಿ, ತಾಲ್ಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕೃಷ್ಣಾ ಕುಲಕರ್ಣಿ ಮಾತನಾಡಿದರು. ನಂತರ ಉಪತಹಶೀಲ್ದಾರ ಬಿ.ಬಿ. ಬೆಳ್ಳುಬ್ಬಿ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕು ಭಾರತ ಕೃಷಿಕ ಸಮಾಜದ ಅಧ್ಯಕ್ಷ ಸೋಮಶೇಖರ ಪಾಟೀಲ, ಸಿದ್ದನಗೌಡ ಬಳ್ಳೊಳ್ಳಿ, ಶಂಕ್ರಪ್ಪ ಮ್ಯಾಗೇರಿ, ಭರಮಣ್ಣ ಗುಡಗೇರಿ, ಸ್ನೇಹಲೋಕ ಬಳಗದ ಅಧ್ಯಕ್ಷ ಪ್ರೇಮ ಶೇಠ, ರಾಮಣ್ಣ ರಿತ್ತಿ, ರಂಗು ಬದಿ, ಬಸವರಾಜ ಅರಳಿ, ಜಗದೀಶ ಪುರಾಣಿಕಮಠ, ಚೇತನ ಹೆಬ್ಬಳ್ಳಿ, ಬಸವರಾಜ ಚಕ್ರಸಾಲಿ, ಸೋಮಪ್ಪ ಗೌರಿ, ಅಶೋಕ ಹಳ್ಳಿಕೇರಿ, ಸಂತೋಷ ಪೂಜಾರ, ಪರಶುರಾಮ ಗೋಡಿ, ಗಂಗಾಧರ ಕರ್ಜೆಕಣ್ಣವರ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಸ್ ಸಂಚಾರ ಸ್ಥಗಿತ: ಬಂದ್ ನಿಮಿತ್ತ ಪಟ್ಟಣದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಜಾರದಲ್ಲಿನ ಅಂಗಡಿಗಳ ಬಾಗಿಲು ತೆರೆದಿರಲಿಲ್ಲ. ಅಲ್ಲದೆ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲಿಲ್ಲ.

ಸಂಘಟನೆಗಳ ಬೆಂಬಲ: ಸವಿತಾ ಸೇವಾ ಸಂಘ, ವಕೀಲರ ಸಂಘ, ಎಕ್ಕಾಗಾಡಿ ಹಮಾಲರ ಸಂಘ, ಸ್ನೇಹಲೋಕ ಬಳಗ, ಔಷಧ ಮಾರಾಟಗಾರರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಶನಿವಾರದ ಬಂದ್‌ಗೆ ಬೆಂಬಲ ನೀಡಿದ್ದವು. ಔಷಧ ವ್ಯಾಪಾರಸ್ಥರು ಕೈಗೆ ಕಪ್ಪು ಪಟ್ಟಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT