ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ: ಯುದ್ಧ ಅಪರಾಧ ಎತ್ತಿಹಿಡಿದ ವಿಶ್ವಸಂಸ್ಥೆ

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ಲಿಬಿಯಾದಲ್ಲಿ ನಡೆಯುತ್ತಿರುವ ದಂಗೆಯ ಬಗ್ಗೆ ತನಿಖೆ ನಡೆಸುತ್ತಿರುವ ವಿಶ್ವಸಂಸ್ಥೆಯ ಸಮಿತಿಯು, ಅಧ್ಯಕ್ಷ ಮುಅಮ್ಮರ್ ಗಡಾಫಿ ಹಾಗೂ ಅವರ ವಿರುದ್ಧ ಹೋರಾಡುತ್ತಿರುವ ಬಂಡುಕೋರರು ಇಬ್ಬರೂ ಯುದ್ಧ ಅಪರಾಧಗಳನ್ನು ಎಸಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

ಕಳೆದ 15 ವಾರಗಳಿಂದ ನಡೆಯುತ್ತಿರುವ ಉಭಯತ್ರರ ನಡುವಿನ ಕಾಳಗದಲ್ಲಿ ಸಾಕಷ್ಟು ಯುದ್ಧ ಮತ್ತು ಮಾನವತಾ ವಿರೋಧಿ ಅಪರಾಧಗಳನ್ನು ಎಸಗಲಾಗಿದೆ. ಎರಡೂ ಕಡೆಯವರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದೆ. ಸರ್ಕಾರಿ ಪಡೆಗಳಂತೂ ನಾಗರಿಕರ ವಿರುದ್ಧ ಹತ್ಯೆ, ಬಂಧನ, ದೌರ್ಜನ್ಯ, ಲೈಂಗಿಕ ದೌರ್ಜನ್ಯದಂತಹ ವ್ಯವಸ್ಥಿತ ದಾಳಿ ನಡೆಸಿ ಅಂತರ ರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿವೆ. ಈವರೆಗೆ ಸುಮಾರು 10ರಿಂದ 15 ಸಾವಿರ ಜನ ಇಂತಹ ಕೃತ್ಯಗಳಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT