ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಮ್ಕಾ ದಾಖಲೆ ಬರೆದ ರಿಂಗ್‌ಚೈನ್

Last Updated 22 ಜನವರಿ 2013, 12:40 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಕಡವಾಡ ನಿವಾಸಿ ಮಿಲಿಂದ ಅಣ್ವೇಕರ 22 ಕ್ಯಾರೆಟ್‌ನ 970 ಮಿಲಿ ಗ್ರಾಂ. ಚಿನ್ನದಲ್ಲಿ 19.75 ಇಂಚು ಉದ್ದದ `ರಿಂಗ್‌ಚೈನ್' ತಯಾರಿಸಿದ್ದು, ಅವರ ಹೆಸರು ಲಿಮ್ಕಾ ದಾಖಲೆಗೆ ಸೇರಿದೆ.

ಈ ಕುರಿತು ಅಣ್ವೇಕರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. `ಒಟ್ಟು 354 ರಿಂಗ್ ಒಳಗೊಂಡಿರುವ ಚೈನ್ ಸಿದ್ಧಪಡಿಸಲು 18 ಗಂಟೆ ಬೇಕಾಯಿತು' ಎಂದು ಅಣ್ವೇಕರ್ ಹೇಳಿದರು.

`2003ರಲ್ಲಿ 960 ಮಿಲಿ ಗ್ರಾಂ. ಚಿನ್ನದಲ್ಲಿ ಮುತ್ತಿನ ಹರಳಿನ ನೆಕ್ಲೇಸ್ ನಿರ್ಮಿಸಿದ್ದು, ನೋಡಿ ದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಹೇಳಿದರ.

ಹೀಗೆ ಕುತೂಹಲಕ್ಕಾಗಿ ಪ್ರಯೋಗ ಮಾಡುತ್ತ ಹೋದಾಗ ಈ ಸಾಧನೆ ಸಾಧ್ಯ ವಾಯಿತು' ಎಂದು ಅವರು ಸಂತಸ ವ್ಯಕ್ತಪಡಿಸಿದರು.
`ಮುಂದಿನ ದಿನಗಳಲ್ಲಿ ಆಭರಣ ತಯಾರಿಕೆಯಲ್ಲಿಯೇ ಗಿನ್ನಿಸ್ ದಾಖಲೆ ಬರೆಯುವ ಉದ್ದೇಶ ಹೊಂದಿದ್ದೇನೆ. ಅದಕ್ಕೆ ಪ್ರಯತ್ನ ಸಾಗುತ್ತಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT