ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂನಾರ್ ರ‌್ಯಾಂಡ್ ರೋನಾರ್ ಸಂಶೋಧಕ ಭೇಟಿ

Last Updated 19 ಡಿಸೆಂಬರ್ 2012, 10:33 IST
ಅಕ್ಷರ ಗಾತ್ರ

ಸಿಂಧನೂರು: ಚಂದ್ರಲೋಕದಲ್ಲಿ ವಿಹರಿಸುವ ಲೂನಾರ್ ರ‌್ಯಾಂಡ್ ರೋನಾರ್ ಯಂತ್ರದ ಸಂಶೋಧಕ ಡಾ.ನಜೀರ್ ಅಹ್ಮದ್ ಗುಲ್ಬರ್ಗಕ್ಕೆ ಖಾಸಗೀ ಕಾರ್ಯಕ್ರಮಕ್ಕೆ ಹೋಗುವ ಹಾದಿ ಮಧ್ಯದಲ್ಲಿ ಸಿಂಧನೂರಿನ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯಕರ್ತ ಮಹರೂಫ್ ಅವರ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 52 ವರ್ಷಗಳಿಂದ ಅಮೇರಿಕಾದಲ್ಲಿ ವಾಸುತ್ತಿದ್ದು, ಹಲವಾರು ಸಂಶೋಧನೆಗಳನ್ನು ನಡೆಸಿರುವುದಾಗಿ ತಿಳಿಸಿದರು.

ವಿಶ್ವದಲ್ಲೇ ಅತಿಹೆಚ್ಚು ಬಳಸುವ ಹಬಲ್ ಸ್ಪೇಸ್ ಟೆಲಿಸ್ಕೋಪನ್ನು ಸಹ ತಾವೇ ಸಂಶೋಧಿಸಿರುವುದಾಗಿ ತಿಳಿಸಿದರು. ವಿಜ್ಞಾನಿ ಆಗಬೇಕೆನ್ನುವ ಕನಸು ಹೊತ್ತ ಯುವಕರಿಗೆ ತಮ್ಮ ಸಲಹೆ ಏನು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹೊಸದನ್ನು ಹುಡುಕುವ ಕುತೂಹಲ, ಸತತ ಪರಿಶ್ರಮ ಮತ್ತು ಅಧ್ಯಯನದಿಂದ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬಹುದು ಎಂದರು.

ಸುಂದರ ಭಾರತ ಕನಸು: ತಮ್ಮ ಜೀವಿತದ ಅತಿ ಹೆಚ್ಚು ಅವಧಿಯನ್ನು ವಿದೇಶದಲ್ಲಿ ಕಳೆದಿದ್ದರೂ ಭಾರತ ವಿಶ್ವದಲ್ಲಿಯೇ ಅತಿ ಸುಂದರವಾಗಿ ಕಾಣಬೇಕೆನ್ನುವ ಕನಸು ಕಟ್ಟಿಕೊಂಡಿರುವುದಾಗಿ ಹೇಳಿದ ಅವರು ಅದಕ್ಕೆ ಪರಿಹಾರವೆಂದರೆ ನಗರಗಳ ಮಧ್ಯದಲ್ಲಿರುವ ಕಂದಕ ತೊಲಗಬೇಕಾಗಿದೆ. ಶ್ರೀಮಂತ-ಬಡವ, ಉಚ್ಚ-ನೀಚ, ಶ್ರೇಷ್ಠ ಮತ್ತು ಕನಿಷ್ಠ ಧರ್ಮ ಇಂತಹ ಸಂಕುಚಿತ ಮನೋಭಾವನೆ ತೊಲಗಬೇಕಾದರೆ ಕ್ರಾಂತಿಕಾರಿಯಾದ ಸ್ವರೂಪದ ಡಿಜಿಟಲ್ ಟೆಕ್ನಾಲಜಿಯನ್ನು ಗ್ರಾಮೀಣ ಮಟ್ಟದಲ್ಲಿ ಬೆಳೆಸುವ ವಿನೂತನ ಪ್ರಯತ್ನವನ್ನು ತಾವು ಕೈಗೊಂಡಿರುವುದಾಗಿ ತಿಳಿಸಿದರು.

ಈ ಆಲೋಚನೆಯಿಂದ ಪ್ರತಿಯೊಂದು ಹೋಬಳಿ ಮತ್ತು ತಾಲ್ಲೂಕಾ ಮಟ್ಟದಲ್ಲಿ ಪಿಯುಸಿ ಮತ್ತು ಪದವಿ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯಗಳನ್ನು ಕಲಿಸಿಕೊಡುವ ಜೊತೆಯಲ್ಲಿ ಉದ್ಯೋಗವಕಾಶಗಳನ್ನು ಪಡೆಯುವ ಅರ್ಹತೆಯನ್ನು ತಂದುಕೊಡಲಾಗುವುದು ಎಂದು ವಿವರಿಸಿದರು. ಅವರೊಂದಿಗೆ ಬೀದರ್ ಶಾಹೀನ್ ಕಾಲೇಜ್ ಸಂಸ್ಥಾಪಕ ಅಬ್ದುಲ್ ಖದೀರ್, ಕರ್ನಾಟಕ ಮುಸ್ಲಿಂ ಪತ್ರಿಕೆಯ ಸಂಪಾದಕ ಸೈಯ್ಯದ್ ತನ್ವೀರಾ ಅಹ್ಮದ್, ಸ್ಥಳೀಯ ಜಮಾತೆ ಇಸ್ಲಾಮಿ ಹಿಂದ್ ಕಾರ್ಯಕರ್ತರಾದ ಮಹ್ಮದ್ ಮಹರೂಫ್, ದಿಲಾವರ್ ಅಂಬರ್‌ಖಾನ್, ಖಾದರ್ ಸುಭಾನಿ, ಸೈಯದ್ ಉಮರ್ ರುಜ್ವಿ ಮತ್ತಿತರರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT