ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಡರ್ ಲಾ ಲೇಸರ್ ಶೋ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಚ್ಚುಮೆಚ್ಚಿನ ಮನರಂಜನಾ ಪಾರ್ಕ್ ವಂಡರ್ ಲಾ ಈಗ ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಲು ಸಜ್ಜುಗೊಂಡಿದೆ. ಉಸಿರು ಬಿಗಿ ಹಿಡಿಯುವ ಅಸಂಖ್ಯಾತ ಕೌತುಕಮಯ ರೈಡ್‌ಗಳನ್ನು ಒಳಗೊಂಡಿದ್ದ  ವಂಡರ್‌ಲಾಗೆ ಈಗ ಹೊಸ ಸೇರ್ಪಡೆ ಮಲ್ಟಿಕಲರ್ ಲೇಸರ್ ಶೋ.

15 ನಿಮಿಷಗಳ ಈ ಲೇಸರ್ ಶೋ, ಅತ್ಯಾಧುನಿಕ ಲೇಸರ್ ದೃಶ್ಯಗಳ ಜತೆಗೆ ಡಿಜಿಟಲ್ ಗ್ರಾಫಿಕ್ಸ್‌ನಿಂದಾಗಿ ಜನರನ್ನು ಮೋಡಿ ಮಾಡಲಿದೆ. ಥೀಮ್ ಆಧಾರಿತ ಲೇಸರ್ ಶೋ ಲೇಸರ್ ಲೈಟ್‌ಗಳ ಚಿತ್ತಾಕರ್ಷಕ ಚಿತ್ರಗಳನ್ನು ಬಿಡಿಸುವುದಲ್ಲದೆ, ಸಂಗೀತ, ಜೀವನ ಮತ್ತು ಭವಿಷ್ಯದ ಕಥೆಗಳನ್ನು ವಿವರಿಸುತ್ತದೆ. ಇವೆಲ್ಲವನ್ನೂ `ಮ್ಯೂಸಿಕ್ ಆಫ್ ಲೈಫ್~ನ ಜನಪ್ರಿಯ ಟ್ಯೂನ್‌ಗಳಿಗೆ ಅನುಗುಣವಾಗಿ ಕೊರಿಯೋಗ್ರಫಿ ಮಾಡಲಾಗಿದೆ.

ಈ ಆಕರ್ಷಕ ಪ್ರದರ್ಶನಕ್ಕೆ ಡಿಜಿಟಲ್ ಸ್ಪರ್ಶವಿದ್ದು `ತ್ರೀ ಡಿ ಎಫೆಕ್ಟ್~ ಸಂಗೀತ ಪರಿಕರಗಳಿಗೆ ಜೀವ ತುಂಬಿದೆ. ವಂಡರ್ ಲಾದ ಮ್ಯೂಸಿಕ್ ಫೌಂಟೇನ್ ಒಳಾಂಗಣದಲ್ಲಿ ಈ ಪ್ರದರ್ಶನ ನಡೆಯುತ್ತದೆ. ಒಮ್ಮೆಲೆ 750 ಮಂದಿ ಕುಳಿತು ಲೇಸರ್ ಶೋ ವೀಕ್ಷಿಸಬಹುದು.
 
ಗಾಳಿಯಲ್ಲಿ ವೈವಿಧ್ಯಮಯ ಮ್ಯೋಜಿಕ್ ಸೃಷ್ಟಿಸುವ ಈ ಲೇಸರ್ ಶೋ ಜರ್ಮನ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ರೋಮಾಂಚಕಾರಿ ಹಾಗೂ ಸಾಹಸಮಯ ರೈಡ್‌ಗಳು, ಉಲ್ಲಾಸಭರಿತ ಜಲ ಕ್ರೀಡೆಗಳ ಜತೆಗೆ ಮಕ್ಕಳ ಭ್ರಾಮಕ ಆಕರ್ಷಣೆಗಳು, ಅತ್ಯಾಕರ್ಷಕ ಮ್ಯೂಸಿಕಲ್ ಫೌಂಟೇನ್ ಒಳಗೊಂಡಿರುವ ವಂಡರ್ ಲಾ ಇಡೀ ಕುಟುಂಬದ ಮನೆರಂಜನೆಯ ಹೆಬ್ಬಾಗಿಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT