ಲಾಸ್ ಏಂಜಲೀಸ್ (ಎಎಫ್‌ಪಿ): ವಲಸೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂಥ `ಡ್ರೀಮ್ ಆ್ಯಕ್ಟ್~ಗೆ ಕ್ಯಾಲಿಫೊರ್ನಿಯಾ ಗವರ್ನರ್ ಜೆರಿ ಬ್ರೌನ್ ಸಹಿ ಹಾಕಿದ್ದಾರೆ.
ಇದು ಅಕ್ರಮ ವಲಸಿಗರು ಅಮೆರಿಕದ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಹಣಕಾಸು ನೆರವಿಗೆ ಅನುವು ಮಾಡಿಕೊಡಲಿದೆ ಎಂದು ಬ್ರೌನ್ ಕಚೇರಿ ಮೂಲಗಳು ತಿಳಿಸಿವೆ.
ಕ್ಯಾಲಿಫೊರ್ನಿಯಾದಲ್ಲಿ ಪ್ರೌಢಶಿಕ್ಷಣ ಕಲಿತ ಅಕ್ರಮ ವಲಸಿಗರು ಈ ಕಾಯ್ದೆ ಅಡಿಯಲ್ಲಿ ಕಾಲೇಜು ಶಿಕ್ಷಣದ ನೆರವು ಪಡೆಯಲಿದ್ದಾರೆ. ಕಳೆದ ವರ್ಷ ಸುಮಾರು 3.70 ಲಕ್ಷ ಬಡ ವಿದ್ಯಾರ್ಥಿಗಳು ತಲಾ ಸರಾಸರಿ 4,500 ಡಾಲರ್ ನೆರವು ಪಡೆದಿದ್ದರು.
ನೂತನ ಕಾಯ್ದೆ ಅಡಿಯಲ್ಲಿ ಸುಮಾರು 2,500 ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ನೆರವು ಪಡೆಯಲಿದ್ದಾರೆ.