ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ವಿನೋದ: ಪಂಕು ಪುರಾಣವು ...

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪ್ರೊಫೆಸರ್ ಪಂಕಜ ಗೊತ್ತಿಲ್ಲವೇ? ನೋಡಿರ್ತೀರಿ. ಮರೆತಿರಬಹುದು. ಅವಳೆರೀ ಪಂಕ್ಚರ್ ಪಂಕು. ಆಕ್ಯುಪಂಕ್ಚರ್‌ನಿಂದ ಹಿಡಿದು ಟೈರು ಪಂಕ್ಚರ್‌ವರೆಗೆ ಎಲ್ಲೆಲ್ಲೂ ಅವಳದೇ ಹೆಸರು.

ಅವಳದೇ ನೆನಪು, ಎ-ದಾಸರಹಳ್ಳಿಯಿಂದ ಟಿ-ದಾಸರಹಳ್ಳಿಯವರೆಗೆ, ಕತ್ರಿಗುಪ್ಪೆಯಿಂದ ಕೋಣನಕುಂಟೆಯವರೆಗೆ ಎಲ್ಲರೂ ಕೇಳುವವರೇ. ಇಡೀ ಬಡಾವಣೆಯಲ್ಲಿ ಹದಿಹರೆಯದ ಮುಗುದೆಯರು, ಹಲ್ಲುಕಿತ್ತ ಮುದಿಯರು ಯಾರನ್ನೆ ಕೇಳಿ- `ಗಂಡಸು ಅಂದ್ರೆ ಅವಳೆ ಸ್ವಾಮಿ ಆ ಪಂಕ್ಚರ್ ಪಂಕು~ ಎಂದು ಮೂಗಿನ ತುದಿಯ ಮೇಲೆ ಬೆರಳಿಡುವರು.

 `ವೈಫು ಅಂದ್ರೆ ಇಷ್ಟೇನೆ?~ ರಿಯಾಲಿಟಿ ಶೋ ನಲ್ಲಿ ಮುಖ ತೋರಿಸಿ ಮಾಯವಾದ ಈ ಸಂಸ್ಕೃತ ಪ್ರಾಧ್ಯಾಪಕಿ. ಮೊನ್ನೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾಣಿಸಿಕೊಂಡಳು.

ಮುಂದಿನ ಕ.ಸಾ.ಪ ಅಲ್ಲ-ಕ.ಸಾ.ಪದಲ್ಲಿ ಮುಂದಿನ ಅಧ್ಯಕ್ಷೆ ತಾನಾಗಲು ಲಾಬಿ ಮಾಡ ಬಂದಿಹಳೆ ಈಯಮ್ಮ? ಹೌದೂ-ಕ.ಸಾ.ಪದಲ್ಲಿ ಇದುವರೆಗೆ ಮಹಿಳಾ ಅಭ್ಯರ್ಥಿಗಳಿಗೆ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುವ ಉಮೇದಿಲ್ಲವೋ, ಅಥವಾ ಠೇವಣಿ ಕಳೆದುಕೊಂಡಿದ್ದಾರೋ ಹೇಗೆ?
`ಛೆ! ಅವರು ಅದಕ್ಕೆ ಬಂದಿಲ್ಲ. ನನ್ನ ಪುಸ್ತಕದ ಬಿಡುಗಡೆಗೆ ಕರೆದಿದ್ದೆ. ಬಂದಿದ್ದಾರೆ~. ಎಂದ ನನ್ನ ಗೆಳೆಯ ಅ.ಚಂ.ತೇ (ಅರ್ಧಚಂದ್ರ ತೇಜಸ್ವಿ).

`ಅಲ್ಲೋ ಅಚಂತೇ. ಇವತ್ತು ನಿನ್ನ ಪುಸ್ತಕದ ಬಿಡುಗಡೆ ಅಂದ್ರೆ, ಇಷ್ಟು ದಿನವೂ ಅದು ಪರಪ್ಪನ ಅಗ್ರಹಾರದಲ್ಲಿತ್ತೆ? ಆ ಪದಬಿಡು. ಲೋಕಾರ್ಪಣೆ ಅಂತ ಬರೆಸು~ ಎಂದೆ. ಪಂಕು ಬಂದಳು. ನನ್ನ ಮುಂದೆ ನಿಂತಳು. ಹುಬ್ಬೇರಿಸಿದಳು. ಕಣ್ಣರಳಿಸಿದಳು. ಗಲ್ಲ ಇದ್ದ ಜಾಗದಲ್ಲೆ ಇತ್ತು.

`ಹರಿ ಓಂ! ನೀವು ಆಚಾರ್ ಅಲ್ಲವೆ?.... ಅಲ್ಲ....~
ನಾನು ಮೌನ, ಮತ್ತೆ ಅವಳು ಕುಕಿಲಿದಳು.
`ಅಚಾರ್ ಅಂದ್ರೆ ನೀವೇನೇ?~

`ಒಂದು ದಿನ ಟೈಂ ಕೊಡಿ. ನಾಳೆ ಕೇಳಿಕೊಂಡು ಬಂದು ಹೇಳ್ತೀನಿ. ಅಲ್ರಿ, ನಾಡಿನ ಷಟ್ಕೋಟಿ ಜನ ನನ್ನ ಹೆಸರು ಕೇಳಿರ‌್ತಾರೆ. ಚತುಷ್ಕೋಟಿ ವೀಕ್ಷಕರು ನನ್ನ ಸುಂದರಾನನವನ್ನು ಲಾಗಾಯ್ತಿನಿಂದ ನೋಡುತ್ತ ಬಂದಿದಾರೆ. ಇವತ್ತು ನೀವು ಬಂದು `ಆಚಾರ್ ನೀವೇನಾ~ ಅಂತ ಕೇಳ್ತೀರಿ. ನಿನ್ನೆ `ವೈಫ್ ಅಂದ್ರೆ ಇಷ್ಟೇನೆ?~ ರಿಯಾಲಿಟಿ ಶೋನಲ್ಲಿ ಮುಖ ತೋರಿಸಿ ಮಾಯವಾಗಿದ್ದೀರಿ. ನಿಮಗೇ ಈಸೊಂದು ಪಬ್ಲಿಸಿಟಿ ಸಿಕ್ಕಿರಬೇಕಾದರೆ, ನನಗೆ ಏಸೊಂದು ಸಿಕ್ಕಿರಬೇಡ. ಅಂದಹಾಗೆ ನೀವು ಯಾವತ್ನಿಂದ ಪಂಕ್ಚರ್ ಪಂಕು ಆದಿರಿ~.

`ಸಾರ್! ನಿಮಗೆ ನನ್ನ ಮೇಲೆ ಜೋಕ್ ಮಾಡೋಕ್ಕೆ ಒಂದು ನವೆ~
`ನವೆ ಅಲ್ಲ ನೆವ, ಅದಿರಲಿ ಪಂಕ್ಚರ್ ಪಂಕು ಹೇಗಾದಿರಿ?~
`ಓ! ಅದಾ? ನಮ್ಮ ಕುಟುಂಬದಲ್ಲಿ ಹೀಗೆ ಸಾರ್. ನಮ್ಮ ಚಿಕ್ಕಪ್ಪ ಷರಾಫ್ ಕೊಟ್ರಬಸಪ್ಪ ಪಟಾಕಿ ಮಾರ‌್ತಿದ್ರು. ಹಾಗಾಗಿ ಅವರ ಮಗಳು, ಮತ್‌ಲಬ್, ನನ್ನ ತಂಗಿಗೆ ಪಟಾಕಿ ಪರಿಮಳ ಅಂತ್ಲೆ ಹೆಸರಿಟ್ಟರು~.

`ಡ್ಯಾಮ್ ಇಟ್. ಗಿವ್ಸ್ ಅ ಬ್ಯಾಡ್ ಕನೋಟೇಷನ್. ಮತ್ತೆ ನೀವು?~.
`ನಮ್ಮಪ್ಪ ಚನ್ನಬಸಪ್ಪ ಸೈಕಲ್ ರಿಪೇರಿ ಮಾಡ್ತಿದ್ರು, ಪಂಕ್ಚರ್ ಹಾಕ್ತಿದ್ರು. ನಮ್ಮಮ್ಮ ಆಕ್ಯುಪಂಕ್ಚರ್ ಥಿರಪಿಸ್ಟ್ ಪಂಕ್ಚರ್ ಹಾಕ್ತಾ ಲವ್ ಮಾಡಿದ್ದು. ಅದರಿಂದ ನಾನು ಪಂಕ್ಚರ್ ಪಂಕು. ಬಟ್ ಕಾಲೇಜಿನಲ್ಲಿ ಪ್ರೊಫೆಸರ್ ಪಂಕಜ ಅಂತಲೆ ಅಟೆಂಡೆನ್ಸ್ ರಿಜಿಸ್ಟರ್‌ನಲ್ಲಿ ದಾಖಲಾತಿ ಇದೆ~.

`ಏನಂಥ ಗಂಡಸ್ತನ ತೋರಿಸಿದಿರಿ ಅಂತ ರಾತ್ರೋರಾತ್ರಿ ನೀವೊಂದು ಸೆನ್‌ಸೇಷನ್ ಆಗಿಬಿಟ್ಟಿರಿ~?

`ನನ್ನ ಗಂಡ. ಟಿ.ವಿ. ಆರ್ಟಿಸ್ಟ್. ಅವನಿಗೊಂದು ಚಿನ್ನವೀಡು ಇದೆ ಅಂತ ಹೋದವಾರ ಫೋನ್‌ಕಾಲ್ ಬಂತು ಡೈವೋರ್ಸ್‌ಗೆ ಮೂವ್ ಮಾಡಿದೀನಿ. ಕೊಟ್ಟಮೇಲೂ ನನ್ನ ಮರುಮದುವೆ ತನಕ ನೀನು ನಂಜೊತೇನೇ ಲಿವಿಂಗ್ ಪಾರ್ಟನರ್ ಆಗಿರೋ ಅಂದಿದೀನಿ. ಇರ್ತಾನೆ ನನ್ಮಗ ಎಲ್ಲಿಗ್ಹೋಗ್ತಾನೆ~.

`ಸಂಸ್ಕೃತ ಪ್ರಾಧ್ಯಾಪಕಿಗೆ ಈಸೊಂದು ಜೂರತ್ತೆ?!~
`ಜ್ಯೂರತ್ ಕಲಿಸೋಕ್ಕೇ ಅಂತಲೆ ಸಂಸ್ಕೃತ ಇರೋದು. ಅಹಲ್ಯಾ, ದ್ರೌಪದಿ ತಾರಾ, ತಾರಾ ಮಂಡೋದರಿ ತಥಾ~ ಇರ‌್ಲಿಲ್ವೆ? ಅದು ಬಿಡಿ ಸಾರ್. ನನ್ನ ನಫ್ತಾಟಾಲ್ ಗಂಡ ನಿರಂಜನ್‌ಬಾಬು ಜೊತೆ-ಅಂದ್ರೆ ಡೈವೋರ್ಸ್ ಆದಮೇಲೆ ಸೋಮಯಾಗ ಮಾಡಿಸೋಣ ಅಂತ. ಏನಂತೀರಿ? ನಾನು ಹೋಮದಲ್ಲಿ ಅಕ್ಕಿ ಕೊಡಬಹುದೆ?~

`ಬಹುದು. ಗರ್ಲ್‌ಫ್ರೆಂಡ್ಸ್‌ನ ಕೂರಿಸ್ಕೊಂಡು ಯಾಗ ಮಾಡೋ ಕಾಲ. `ತೊಂದ್ರೆ ಇಲ್ಲಾ ಪಂಕಜ~. ಹಂಗೆ ನಾನೂ ರಾಮನಾಥಪುರದಲ್ಲಿ ಮಡೆಸ್ನಾನ ಮಾಡೋಣ ಅಂತ ಇದೀನಿ. ಸಫರಿಂಗ್ ಫ್ರಮ್ ಸೋರಿಯಾಸಿಸ್~.

`ಮಾಡಿ~
`ಅಲ್ಲಿ ಬ್ರಾಹ್ಮಣರ ಎಲೆ ಮೇಲೆ ಬ್ರಾಹ್ಮಣರೆ ಉರುಳುತ್ತಾರೆ~
`ಸಲೀಸಾಯ್ತಾ.... ನೀವು?~
`ನಾನು ಬ್ರಾಹ್ಮಣ ಅಲ್ಲವೆ!~ ಅದೇ ಸಮಸ್ಯೆ.
`ಮತ್ತೆ?~
`ಅಯ್ಯಂಗಾರ್! ಒಳಗಡೆ ಬಿಡ್ತಾರೋ ಇಲ್ಲವೋ~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT