ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ಗೆ ಭರ್ಜರಿ ಜಯ; ಅಲ್ಪ ಮೊತ್ತಕ್ಕೆ ಕುಸಿದ ಶಕೀಬ್ ಬಳಗ.ಬಲ ಕಳೆದುಕೊಂಡ ಬಾಂಗ್ಲಾ.

Last Updated 4 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮೀರ್‌ಪುರ: ಒಟ್ಟು 31.1 ಓವರ್‌ಗಳಲ್ಲೇ ಪಂದ್ಯದ ಫಲಿತಾಂಶ ಹೊರಬಿದ್ದಿತ್ತು. ವೆಸ್ಟ್‌ಇಂಡೀಸ್ ಬೌಲರ್‌ಗಳ ಅದ್ಭುತ ಪ್ರದರ್ಶನ ಹಾಗೂ ಬಾಂಗ್ಲಾದೇಶ ತಂಡದ ಅತ್ಯಂತ ಕಳಪೆ ಆಟ ಇದಕ್ಕೆ ಕಾರಣ. ವಿಶ್ವಕಪ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಶುಕ್ರವಾರ ವಿಂಡೀಸ್ ತಂಡ ಬಾಂಗ್ಲಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಮಾತ್ರವಲ್ಲ ಎದುರಾಳಿ ತಂಡಕ್ಕೆ ಸುಲಭದಲ್ಲಿ ಮರೆಯಲಾಗದಂತಹ ಪೆಟ್ಟು ನೀಡಿತು.

ಮೊದಲು ಬ್ಯಾಟ್ ಮಾಡಿದ ಶಕೀಬ್ ಅಲ್ ಹಸನ್ ಬಳಗ 18.5 ಓವರ್‌ಗಳಲ್ಲಿ ಕೇವಲ 58 ರನ್‌ಗಳಿಗೆ ಆಲೌಟಾಯಿತು! ವಿಂಡೀಸ್ 12.2 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಹೊನಲು ಬೆಳಕಿನ ಪಂದ್ಯ ಇದಾಗಿತ್ತು. ಆದರೆ ‘ಫ್ಲಡ್‌ಲೈಟ್’ ಸ್ವಿಚ್ ಆನ್ ಮಾಡುವ ಮುನ್ನವೇ ಪಂದ್ಯ ಕೊನೆಗೊಂಡಿತ್ತು!

ಟೆಸ್ಟ್ ಆಡುವ ಮಾನ್ಯತೆ ಹೊಂದಿರುವ ತಂಡವೊಂದು ವಿಶ್ವಕಪ್ ಟೂರ್ನಿಯಲ್ಲಿ ಇಷ್ಟು ಸಣ್ಣ ಮೊತ್ತಕ್ಕೆ ಕುಸಿತ ಕಂಡಿರುವುದು ಇದೇ ಮೊದಲು. ಅದೇ ರೀತಿ ವಿಶ್ವಕಪ್‌ನಲ್ಲಿ ತಂಡವೊಂದು ಗಳಿಸಿದ ನಾಲ್ಕನೇ ಕನಿಷ್ಠ ಮೊತ್ತ ಇದಾಗಿದೆ. ಗೆಲುವಿನ ಗುರಿಯನ್ನು ಬೆನ್ನಟ್ಟುವ ಹಾದಿಯಲ್ಲಿ ವಿಂಡೀಸ್ ತಂಡ ಡೆವೊನ್ ಸ್ಮಿತ್ (6) ಅವರ ವಿಕೆಟ್ ಕಳೆದುಕೊಂಡಿತು. ಡರೆನ್ ಬ್ರಾವೊ (9) ಮತ್ತು ಕ್ರಿಸ್ ಗೇಲ್ (37, 36 ಎಸೆತ, 6 ಬೌಂ) ಅಜೇಯ ಆಟದ ಮೂಲಕ ಗೆಲುವಿನ ವ್ಯವಹಾರ ಪೂರೈಸಿದರು.

ಮೀರ್‌ಪುರದ ಷೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಸುಮಾರು 25 ಸಾವಿರ ಮಂದಿ ಪಂದ್ಯದ ಮಜಾ ಅನುಭವಿಸಲು ಆಗಮಿಸಿದ್ದರು. ಅದರೆ ಅಂಗಳದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಆರ್ಥಮಾಡಿಕೊಳ್ಳುವಷ್ಟರಲ್ಲೇ ಪಂದ್ಯಕ್ಕೆ ತೆರೆಬಿದ್ದಿತ್ತು.

ಪೆವಿಲಿಯನ್ ಪರೇಡ್: ಟಾಸ್ ಗೆದ್ದ ಬಾಂಗ್ಲಾ ನಾಯಕ ಬ್ಯಾಟಿಂಗ್ ಆಯ್ದುಕೊಂಡರು. ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ ಕೂಡಾ ಅದನ್ನೇ ಬಯಸಿತ್ತು. ಪ್ರೇಕ್ಷಕರ ಅಬ್ಬರದ ಬಲದೊಂದಿಗೆ ಬಾಂಗ್ಲಾ ತನ್ನ ಇನಿಂಗ್ಸ್ ಆರಂಭಿಸಿತು. ಆದರೆ ಕೆಮರ್ ರೋಚ್ (19ಕ್ಕೆ 3), ಸುಲೆಮಾನ್ ಬೆನ್ (18ಕ್ಕೆ 4) ಮತ್ತು ಡರೆನ್ ಸಾಮಿ (21ಕ್ಕೆ3) ಅವರು ಅಲ್ಪ ಸಮಯದಲ್ಲೇ ಪ್ರೇಕ್ಷಕರ ಸದ್ದಡಗಿಸಿದರು.

ತನ್ನ ಸ್ಪಿನ್ ಬಲದಿಂದ ವಿಂಡೀಸ್ ತಂಡವನ್ನು ಮಣಿಸಬಹುದು ಎಂಬ ಲೆಕ್ಕಾಚಾರ ಶಕೀಬ್ ಬಳಗ ಹೊಂದಿತ್ತು. ಆದರೆ ವಿಂಡೀಸ್ ಬೌಲರ್‌ಗಳು ಬಾಂಗ್ಲಾದ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿದರು. ಇನಿಂಗ್ಸ್‌ನ ಮೂರನೇ ಎಸೆತದಿಂದಲೇ ಬಾಂಗ್ಲಾ ಕುಸಿತಕ್ಕೆ ಚಾಲನೆ ಲಭಿಸಿತು.

ಅಬ್ಬರದ ಆರಂಭ ನೀಡುವ ತಮೀಮ್ ಇಕ್ಬಾಲ್ ಅವರನ್ನು ಕೆಮರ್ ರೋಚ್ ಶೂನ್ಯಕ್ಕೆ ಪೆವಿಲಿಯನ್‌ಗಟ್ಟಿದರು. ಅಲ್ಪ ಸಮಯದ ಬಳಿಕ ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಇಮ್ರುಲ್ ಕಯೇಸ್ (5) ಕೂಡಾ ಮರಳಿದರು. ಬಳಿಕ ನಡೆದದ್ದು ಬಾಂಗ್ಲಾ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪೆರೇಡ್. 

1992 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 74 ರನ್‌ಗಳಿಗೆ ಆಲೌಟಾಗಿತ್ತು. ಇದುವರೆಗೆ ವಿಶ್ವಕಪ್‌ನಲ್ಲಿ ಟೆಸ್ಟ್ ಆಡುವ ತಂಡದ ಕನಿಷ್ಠ ಮೊತ್ತ ಇದಾಗಿತ್ತು. ಇನ್ನು ಮುಂದೆ ಈ ಅವಮಾನವನ್ನು ಬಾಂಗ್ಲಾ ಹೊತ್ತುಕೊಂಡಿದೆ.

 ಐಸಿಸಿ ವಿಶ್ವಕಪ್ 2011 ಪಾಯಿಂಟ್ ಪಟ್ಟಿ
‘ಎ’ ಗುಂಪು
ತಂಡ ಪಂದ್ಯ ಜಯ ಸೋಲು ಟೈ ರದ್ದು ಪಾಯಿಂಟ್ ರನ್‌ರೇಟ್
ಪಾಕಿಸ್ತಾನ
 3 3 0 0 0 6 +1.747
ಶ್ರೀಲಂಕಾ 3 2 1 0 0 4 +2.663
ಆಸ್ಟ್ರೇಲಿಯ 2 2 0 0 0 4 +1.813
ನ್ಯೂಜಿಲೆಂಡ್ 3 2 1 0 0 4 +1.584
ಜಿಂಬಾಬ್ವೆ 3 1 2 0 0 2 +0.079
ಕೆನಡಾ 3 0 3 0 0 0 -2.873
ಕೀನ್ಯಾ 3 0 3 0 0 0 -4.825


‘ಬಿ’ ಗುಂಪು
ತಂಡ ಪಂದ್ಯ ಜಯ ಸೋಲು ಟೈ ರದ್ದು ಪಾಯಿಂಟ್ ರನ್‌ರೇಟ್
ದಕ್ಷಿಣ ಆಫ್ರಿಕ 2 2 0 0 0 4 +2.763
ವೆಸ್ಟ್ ಇಂಡೀಸ್ 3 2 1 0 0 4 +2.667
ಭಾರತ 2 1 0 1 0 3 +0.870
ಇಂಗ್ಲೆಂಡ್ 3 1 1 1 0 3 +0.035
ಐರ್ಲೆಂಡ್ 2 1 1 0 0 2 -0.207
ಬಾಂಗ್ಲಾದೇಶ 3 1 2 0 0 2 -1.764
ಹಾಲೆಂಡ್ 3 0 3 0 0 0 -3.058

ಸ್ಕೋರು ವಿವರ
ಬಾಂಗ್ಲಾದೇಶ: 18.5 ಓವರ್‌ಗಳಲ್ಲಿ 58

ತಮೀಮ್ ಇಕ್ಬಾಲ್ ಸಿ ಸಾಮಿ ಬಿ ಕೆಮರ್ ರೋಚ್  00
ಇಮ್ರುಲ್ ಕಯೇಸ್ ಸಿ ಥಾಮಸ್ ಬಿ ಡರೆನ್ ಸಾಮಿ  05
ಜುನೈದ್ ಸಿದ್ದೀಕಿ ಎಲ್‌ಬಿಡಬ್ಲ್ಯು ಬಿ ಕೆಮರ್ ರೋಚ್ 25
ಮುಷ್ಫಿಕುರ್ ರಹೀಮ್ ಸಿ ಸರವಣ್ ಬಿ ಡರೆನ್ ಸಾಮಿ 00
ಶಕೀಬ್ ಅಲ್ ಹಸನ್ ಬಿ ಸುಲೆಮಾನ್ ಬೆನ್  08
ರಕೀಬುಲ್ ಹಸನ್ ಸಿ ಪೊಲಾರ್ಡ್ ಬಿ ಡರೆನ್ ಸಾಮಿ 04
ಮೊಹಮ್ಮದ್ ಅಶ್ರಫುಲ್ ಸಿ ಥಾಮಸ್ ಬಿ ರೋಚ್  11
ನಯೀಮ್ ಇಸ್ಲಾಮ್ ಸಿ ಥಾಮಸ್ ಬಿ ಬೆನ್  01
ಶಫೀವುಲ್ ಇಸ್ಲಾಮ್ ಸಿ ಪೊಲಾರ್ಡ್ ಬಿ ಬೆನ್  00
ಅಬ್ದುಲ್ ರಜಾಕ್ ಔಟಾಗದೆ  00
ರೂಬೆಲ್ ಹೊಸೇನ್ ಬಿ ಸುಲೆಮಾನ್ ಬೆನ್  00
ಇತರೆ: (ವೈಡ್-1, ನೋಬಾಲ್-1)  02
ವಿಕೆಟ್ ಪತನ: 1-0 (ತಮೀಮ್; 0.3), 2-16 (ಕಯೇಸ್; 3.3), 3-25 (ಮುಷ್ಫಿಕುರ್; 5.1), 4-36 (ಜುನೈದ್; 8.2), 5-41 (ಶಕೀಬ್; 10.2), 6-51 (ರಕೀಬುಲ್; 13.6), 7-56 (ನಯೀಮ್; 16.2), 8-56 (ಅಶ್ರಫುಲ್; 17.1), 9-58 (ಶಫೀವುಲ್; 18.3), 10-58 (ರೂಬೆಲ್; 18.5).
ಬೌಲಿಂಗ್: ಕೆಮರ್ ರೋಚ್ 6-0-19-3, ಸುಲೆಮಾನ್ ಬೆನ್ 5.5-2-18-4, ಡರೆನ್ ಸಾಮಿ 7-0-21-3

ವೆಸ್ಟ್ ಇಂಡೀಸ್ 12.2 ಓವರ್‌ಗಳಲ್ಲಿ
ಒಂದು ವಿಕೆಟ್‌ಗೆ 59
ಡೆವೊನ್ ಸ್ಮಿತ್ ಬಿ ನಯೀಮ್ ಇಸ್ಲಾಮ್  06
ಕ್ರಿಸ್ ಗೇಲ್ ಔಟಾಗದೆ  37
ಡರೆನ್ ಬ್ರಾವೊ ಔಟಾಗದೆ
  09

ಇತರೆ
: (ಬೈ-2, ವೈಡ್-5)  07

ವಿಕೆಟ್ ಪತನ: 1-29 (ಸ್ಮಿತ್; 5.1)
ಪಂದ್ಯಶ್ರೇಷ್ಠ: ಕೆಮರ್ ರೋಚ್
ಬೌಲಿಂಗ್: ಶಫೀವುಲ್ ಇಸ್ಲಾಮ್ 2-0-11-0, ನಯೀಮ್ ಇಸ್ಲಾಮ್ 6-1-14-1, ರೂಬೆಲ್ ಹೊಸೇನ್ 1-0-12-0, ಅಬ್ದುಲ್ ರಜಾಕ್ 1-0-8-0, ಮೊಹಮ್ಮದ್

ಅಶ್ರಫುಲ್ 2-0-11-0, ಶಕೀಬ್ ಅಲ್ ಹಸನ್ 0.2-0-1-0

ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 9 ವಿಕೆಟ್ ಜಯ

ಪಾಯಿಂಟ್ಸ್: ವೆಸ್ಟ್ ಇಂಡೀಸ್-2, ಬಾಂಗ್ಲಾದೇಶ-0;

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT