ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಿರಣ ಅಮೆರಿಕ ತಲುಪುವ ಸಾಧ್ಯತೆ ಇಲ್ಲ

Last Updated 18 ಮಾರ್ಚ್ 2011, 19:30 IST
ಅಕ್ಷರ ಗಾತ್ರ


ವಾಷಿಂಗ್ಟನ್ (ಪಿಟಿಐ): ಜಪಾನ್‌ನಲ್ಲಿ ಹಾನಿಗೊಳಗಾಗಿರುವ ಅಣುಸ್ಥಾವರ ಘಟಕಗಳಿಂದ ಹೊರ ಸೂಸುವ ವಿಕಿರಣಯುಕ್ತ ಅಂಶಗಳು ಅಮೆರಿಕವನ್ನು ತಲುಪಬಹುದು ಎಂಬ ವರದಿಗಳನ್ನು ಅಮೆರಿಕದ ಅಣ್ವಸ್ತ್ರ ಅಧಿಕಾರಿ ತಳ್ಳಿ ಹಾಕಿದ್ದಾರೆ.

ಹವಾಯ್ ಸೇರಿದಂತೆ ಅಮೆರಿಕದ  ಯಾವುದೇ ಪ್ರದೇಶಕ್ಕೂ ವಿಕಿರಣ ತಲುಪುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.
ಅಮೆರಿಕ ಅಥವಾ ಹವಾಯ್ ಅಥವಾ ಇತರ ಯಾವುದೇ ಭಾಗಕ್ಕೆ ಅಪಾಯ ಇಲ್ಲ ಎಂದು ಅಣ್ವಸ್ತ್ರ ನಿಯಂತ್ರಣ ಆಯೋಗದ ಅಧ್ಯಕ್ಷ ಗ್ರೆಗೊರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಕಿರಣ ಐಸೋಟೋಪ್‌ಗಳು ಉತ್ತರ ಅಮೆರಿಕ ಕಡೆಗೆ ಪಸರಿಸುತ್ತಿದ್ದು ಶೀಘ್ರವೇ ಕ್ಯಾಲಿಫೋರ್ನಿಯಾ ತಲುಪಲಿವೆ ಎಂದು ‘ಲಾಸ್ ಏಂಜಲೀಸ್ ಟೈಮ್ಸ್’ ವರದಿ ಮಾಡಿತ್ತು. ರಾಷ್ಟ್ರಕ್ಕೆ ವಿಕಿರಣದ ಯಾವುದೇ ಅಪಾಯ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಶ್ವಾಸನೆ ನೀಡಿದ್ದರು.

‘ವಿಕಿರಣದ ಅಪಾಯಕಾರಿ ಅಂಶಗಳು ಅಮೆರಿಕ ಅಥವಾ ಅದರ ಪಶ್ಚಿಮ ಕರಾವಳಿ, ಹವಾಯ್, ಅಲಾಸ್ಕಾ ಅಥವಾ ಪೆಸಿಫಿಕ್‌ನಲ್ಲಿನ ಅಮೆರಿಕದ ಪ್ರಾಂತ್ಯಗಳಿಗೆ ತಲುಪುವುದಿಲ್ಲ ಎಂಬ ನಿರೀಕ್ಷೆ ನಮ್ಮದು. ಇದು ನಮ್ಮ ಅಣ್ವಸ್ತ್ರ ನಿಯಂತ್ರಣ ಆಯೋಗ (ಎನ್‌ಆರ್‌ಸಿ) ಮತ್ತು ಇತರ ತಜ್ಞರ ತೀರ್ಮಾನ’ ಎಂದು ಒಬಾಮ ಅವರು ವಾಷಿಂಗ್ಟನ್‌ನಲ್ಲಿ ಶುಕ್ರವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT