ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಕುಮಾರಿ ಬಂಗಾರದ ನಗು

ಜೂನಿಯರ್‌ ಅಥ್ಲೆಟಿಕ್ಸ್‌: ನಾಲ್ಕು ರಾಷ್ಟ್ರೀಯ ದಾಖಲೆ; ಪ್ರಣೀತಾ ಪ್ರದೀಪ್‌, ವೈಷ್ಣವಿಗೆ ಬೆಳ್ಳಿ
Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಂಠೀರವ ಕ್ರೀಡಾಂಗಣದ ಟ್ರ್ಯಾಕ್‌ ನಲ್ಲಿ ವಿಜಯದ ಓಟ ನಡೆಸಿದ ಜಿ.ಕೆ. ವಿಜಯಕುಮಾರಿ 29ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕಕ್ಕೆ ಚಿನ್ನ ತಂದಿತ್ತರು.

ಗುರುವಾರ ನಡೆದ ಬಾಲಕಿಯರ 18 ವರ್ಷ ವಯಸ್ಸಿನೊಳ ಗಿನವರ ವಿಭಾಗದ 400 ಮೀ. ಓಟದಲ್ಲಿ ವಿಜಯಕುಮಾರಿ 56.75 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಮೂರನೇ ಲೇನ್‌ನಲ್ಲಿ ಓಡಿದ ವಿಜಯಕುಮಾರಿ ಅವರ ಪ್ರತಿ ಹೆಜ್ಜೆಗಳೂ ಆತ್ಮವಿಶ್ವಾಸದಿಂದ ಕೂಡಿದ್ದವು. 200 ಮೀ. ಕ್ರಮಿಸುವಷ್ಟ ರಲ್ಲೇ ಅವರು ಸ್ಪಷ್ಟ ಮುನ್ನಡೆ ಗಳಿಸಿದ್ದರು. ಕೊನೆಯ 100 ಮೀ.ನಲ್ಲಿ ಇತರ ಸ್ಪರ್ಧಿಗಳು ಪ್ರಬಲ ಪೈಪೋಟಿ ನೀಡಿದರಾದರೂ, ವಿಜಯಕುಮಾರಿ  ಮುನ್ನಡೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು.
ಕೇರಳದ ಶಹರ್‌ಬಾನಾ ಸಿದ್ದೀಕಿ (57.28 ಸೆ.) ಬೆಳ್ಳಿ ಗೆದ್ದು ಕೊಂಡರೆ, ಇದೇ ರಾಜ್ಯದ ನೀತು ಸಾಬು (58.49)  ಮೂರನೇ ಸ್ಥಾನ ಪಡೆದರು.

ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆ ತಾಲೂಕಿನ ಗೌಡೇನಹಳ್ಳಿ ಗ್ರಾಮದ ವಿಜಯಕುಮಾರಿ ಪ್ರಸಕ್ತ ಬೆಂಗಳೂರಿನ ಎಸ್‌ಎಐನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ‘ಪದಕ ಗೆಲ್ಲಲು ಸಾಧ್ಯವಾದದ್ದು ಸಂತಸ ನೀಡಿದೆ. ಇದರ ಶ್ರೇಯ ಕೋಚ್‌ ಎಸ್‌. ಲಕ್ಷ್ಮೀಶ ಹಾಗೂ ಹೆತ್ತವರಿಗೆ ಸಲ್ಲಬೇಕು’ ಎಂದು ವಿಜಯಕುಮಾರಿ ಪ್ರತಿಕ್ರಿಯಿಸಿದರು. ಮೂರನೇ ದಿನ ಆತಿಥೇಯರಿಗೆ ಒಂದು ಚಿನ್ನ ಅಲ್ಲದೆ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಲಭಿಸಿತು.

ಬಾಲಕಿಯರ 18 ವರ್ಷ ವಯಸ್ಸಿನೊಳಗಿನವರ ವಿಭಾಗದ ಲಾಂಗ್‌ಜಂಪ್‌ನಲ್ಲಿ ಎಸ್‌. ಪ್ರಣೀತಾ ಪ್ರದೀಪ್‌ 5.88 ಮೀ. ದೂರ ಜಿಗಿದು ಬೆಳ್ಳಿ ಗೆದ್ದರು. ಇದೇ ವಯೋವರ್ಗದ ಪೋಲ್‌ವಾಲ್ಟ್‌ನಲ್ಲಿ ಪವಿತ್ರಾ ಅವರು ಕಂಚು ತಂದಿತ್ತರು. ಕರ್ನಾಟಕದ ಸ್ಪರ್ಧಿ 2.60 ಮೀ. ಎತ್ತರ ಜಿಗಿಯುವಲ್ಲಿ ಯಶ ಕಂಡರು.

ಟಾಮಿ ವೈಷ್ಣವಿ ಬಾಲಕಿಯರ 14 ವರ್ಷ ವಯಸ್ಸಿನೊಳಗಿನವರ ವಿಭಾಗದ ಲಾಂಗ್‌ಜಂಪ್‌ ನಲ್ಲಿ ಬೆಳ್ಳಿ ಗೆದ್ದರು. ಕೂಟದ ಮೊದಲ ದಿನ ಟ್ರಯಥ್ಲಾನ್‌ನಲ್ಲಿ ಚಿನ್ನ ಜಯಿಸಿದ್ದ ವೈಷ್ಣವಿ 5.24 ಮೀ. ದೂರ ಜಿಗಿಯುವಲ್ಲಿ ಯಶ ಕಂಡರು.ನಾಲ್ಕು ರಾಷ್ಟ್ರೀಯ ದಾಖಲೆ:  ಮೂರನೇ ದಿನವಾದ ಗುರುವಾರ ಕಂಠೀರವ ಕ್ರೀಡಾಂಗಣದಲ್ಲಿ ನಾಲ್ಕು ರಾಷ್ಟ್ರೀಯ ದಾಖಲೆಗಳು ಮೂಡಿಬಂದವು. ಪಶ್ಚಿಮ ಬಂಗಾಳದ ಚಂದನ್‌ ಬವೂರ್‌ ಬಾಲಕರ 16 ವರ್ಷ ವಯಸ್ಸಿನೊಳಗಿನವರ ವಿಭಾಗದ 400 ಮೀ. ಓಟದಲ್ಲಿ ದಾಖಲೆ ಸ್ಥಾಪಿಸಿದರು. 48.24 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಅವರು ಹರಿಯಾಣದ ಅರ್ಜುನ್‌ ಖೋಕರ್‌ (49.14 ಸೆ.) ಹೆಸರಿನಲ್ಲಿದ್ದ ದಾಖಲೆ ಮುರಿಯಿತು.

ಹರಿಯಾಣದ ಸಾಹಿಲ್‌ ಮಹಾಬಲಿ ಬಾಲಕರ 16 ವರ್ಷ ವಯಸ್ಸಿನೊಳಗಿನವರ ವಿಭಾಗದ ಲಾಂಗ್‌ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡರು. 7.27 ಮೀ. ದೂರ ಜಿಗಿದ ಅವರು ಕೇರಳದ ವಿನೀತ್‌ 2005 ರಲ್ಲಿ ಸ್ಥಾಪಿಸಿದ್ದ ದಾಖಲೆ (7.19 ಮೀ.) ಮುರಿದರು. ಬಾಲಕರ 14 ವರ್ಷ ವಯಸ್ಸಿನೊಳಗಿನವರ 100 ಮೀ. ಓಟದಲ್ಲಿ ಪಶ್ಚಿಮ ಬಂಗಾಳದ ಕೆ.ಆರ್‌. ಸಂಚಯ್‌ ರಾಷ್ಟ್ರೀಯ ದಾಖಲೆ (11.14 ಸೆ.; ಹಳೆಯದ್ದು: 11.42 ಸೆ.) ತಮ್ಮದಾಗಿಸಿಕೊಂಡರು.

ಬಾಲಕಿಯರ ಇದೇ ವಯೋವರ್ಗದ ಷಾಟ್‌ಪಟ್‌ನಲ್ಲಿ ದೆಹಲಿಯ ಮಹಶ್ರೀ ಬಲೋಡಾ ಕಬ್ಬಿಣದ ಗುಂಡನ್ನು 11.63 ಮೀ. ದೂರ ಎಸೆದರದಲ್ಲದೆ, ರಾಷ್ಟ್ರೀಯ ದಾಖಲೆಯೊಂದಿಗೆ ಸ್ವರ್ಣ ಜಯಿಸಿದರು. ಹುಸನ್‌ದೀಪ್‌, ಅರ್ಚನಾ ‘ವೇಗಿಗಳು’: ಚಂಡೀಗಡದ ಹುಸನ್‌ದೀಪ್‌ ಮತ್ತು ತಮಿಳು ನಾಡಿನ ಅರ್ಚನಾ ಕ್ರಮವಾಗಿ 20 ವರ್ಷ ವಯಸ್ಸಿ ನೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾ ಗದ 100 ಮೀ. ಓಟದಲ್ಲಿ ಚಿನ್ನ ಜಯಿಸಿ ಕೂಟದ ‘ವೇಗಿಗಳು’ ಎಂಬ ಗೌರವ ತಮ್ಮದಾಗಿಸಿಕೊಂಡರು.

ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ಹುಸನ್‌ದೀಪ್‌ 10.59 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅವರು ಈ ವೇಳೆ ಕೂಟ ದಾಖಲೆಯನ್ನೂ ಸ್ಥಾಪಿಸಿದರು. ಕೇರಳದ ಸುಜಿತ್‌ ಕುಟ್ಟನ್‌ (10.65 ಸೆ.) 2010 ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು. ಆದರೆ ತಮಿಳುನಾಡಿನ ಆಗಸ್ಟಿನ್‌ ಏಸುದಾಸ್‌ (10.57) ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆ ಮುರಿಯುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು. ಬಾಲಕಿಯರ ವಿಭಾಗದಲ್ಲಿ ಅರ್ಚನಾ 11.81 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಕೇರಳ ಒಟ್ಟು 322 ಪಾಯಿಂ ಟ್‌ಗಳನ್ನು ಕಲೆಹಾಕಿದ್ದು, ಸಮಗ್ರ ಪ್ರಶಸ್ತಿಯತ್ತ ಮುನ್ನಡೆದಿದೆ. ತಮಿಳುನಾಡು (180.5) ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ ಮತ್ತು ಹರಿಯಾಣ (138.5) ಮೂರನೇ ಸ್ಥಾನ ಹೊಂದಿದೆ.

ಮೂರನೇ ದಿನದ ಫಲಿತಾಂಶ:
ಬಾಲಕರ ವಿಭಾಗ: 20 ವರ್ಷ ವಯಸ್ಸಿನೊಳಗಿನವರು:
100 ಮೀ. ಓಟ: ಹುಸನ್‌ದೀಪ್‌ ಸಿಂಗ್‌ (ಚಂಡೀಗಡ)-1, ಆರ್‌. ರಾಬಿನ್‌ (ಕೇರಳ)-2, ಅಶೋಕ್‌ ಯಾದವ್‌ (ಉತ್ತರ ಪ್ರದೇಶ)-3. ಕಾಲ: 10

400 ಮೀ. ಓಟ: ಸುಮಿತ್‌ ಮಲಿಕ್‌ (ಹಿಮಾಚಲ ಪ್ರದೇಶ)-1, ಲಲಿತ್‌ ಮಾಥುರ್‌ (ದೆಹಲಿ)-2, ಕಂಬರ್‌ದೀಪ್‌ ಸಿಂಗ್‌ (ಪಂಜಾಬ್‌)-3. ಕಾಲ: 47.31 ಸೆ.; ಡಿಸ್ಕಸ್‌ ಥ್ರೋ: ಸಚಿನ್‌ (ಹರಿಯಾಣ)-1, ದಿಲ್‌ಯೋಗಿ (ಉತ್ತರ ಪ್ರದೇಶ)-2, ಮಾಂಟಿ ಧನ್ಕಾಯ್‌ (ದೆಹಲಿ)-3 ದೂರ: 56.72 ಮೀ.

18 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಬಿ. ಕಾರ್ತಿಕೇಯನ್‌ (ಪುದುಚೇರಿ)-1, ಸುಧಾಕರ್‌ (ಆಂಧ್ರ ಪ್ರದೇಶ)-2, ಸೌಮ್ಯದೀಪ್‌ ಸಾಯಿ (ಪಶ್ಚಿಮ ಬಂಗಾಳ)-3. ಕಾಲ: 10.95 ಸೆ.
400 ಮೀ. ಓಟ: ಎ. ಧರುಣ್‌ (ತಮಿಳುನಾಡು)-1, ಎಂ. ಕಿರಣ್‌ (ತಮಿಳುನಾಡು)-2, ಸಂಧು ಸುಕುಮಾರನ್‌ (ಕೇರಳ)-3. ಕಾಲ: 48.24 ಸೆ.

16 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಎಂ.ಎಸ್‌. ಅರುಣ್‌ (ತಮಿಳುನಾಡು)-1, ಕ್ಷಿತಿಜ್‌ ಬಿ. (ಮಹಾರಾಷ್ಟ್ರ)-2, ಜಿ. ಅಯ್ಯಪ್ಪ ಪ್ರಸಾದ್‌ (ಆಂಧ್ರ ಪ್ರದೇಶ)-3. ಕಾಲ: 11.06 ಸೆ.
400 ಮೀ. ಓಟ: ಚಂದನ್‌ ಬವೂರ್‌ (ಪಶ್ಚಿಮ ಬಂಗಾಳ)-1, ದೇವೇಂದರ್‌ (ಜಾರ್ಖಂಡ್‌)-2, ಬಲ್ಜೀತ್‌ (ಹರಿಯಾಣ)-3. ಕಾಲ: 48.24 ಸೆ.

ಲಾಂಗ್‌ಜಂಪ್‌: ಸಾಹಿಲ್‌ ಮಹಾಬಲಿ (ಹರಿಯಾಣ)-1, ದೇವರಾಜ್‌ (ಕೇರಳ)-2, ಎಂ. ಜೀವಾ (ತಮಿಳುನಾಡು)-3. ದೂರ: 7.27 ಮೀ.
14 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಕೆ.ಆರ್‌. ಸಂಚಯ್‌ (ಪಶ್ಚಿಮ ಬಂಗಾಳ)-1, ವಿಕ್ರಮ್‌ ಮುರ್ಮು (ಒಡಿಶಾ)-2, ಸುದೇಶ್‌ ಗುರ್ಜಾರ್‌ (ಮಧ್ಯ ಪ್ರದೇಶ)-3. ಕಾಲ: 11.14 ಸೆ.

ಹೈಜಂಪ್‌: ಕೆ.ಎಸ್‌. ಅನಂತು (ಕೇರಳ)-1, ಶಾನವಾಜ್‌ (ದೆಹಲಿ)-2, ವರುಣ್‌ ಫಕಾರ (ಉತ್ತರ ಪ್ರದೇಶ)-3. ಎತ್ತರ: 1.84 ಮೀ.
ಬಾಲಕಿಯರ ವಿಭಾಗ:  20 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಎಸ್‌. ಅರ್ಚನಾ (ತಮಿಳುನಾಡು)-1, ರುಮಾ ಸರ್ಕಾರ್‌ (ಪಶ್ಚಿಮ ಬಂಗಾಳ)-2, ಸಿ. ರೆಂಜಿತಾ (ಕೇರಳ)-3. ಕಾಲ: 11.81 ಸೆ.; 400 ಮೀ. ಓಟ: ವಿ.ವಿ. ಜಿಶಾ (ಕೇರಳ)-1, ಪಿ. ಇನಿಯಾ (ತಮಿಳುನಾಡು)-2, ಪಿ.ಎಂ. ಅರುಣಿಮಾ (ಕೇರಳ)-3. ಕಾಲ: 56.94 ಸೆ.

ಪೋಲ್‌ವಾಲ್ಟ್‌: ಎಂ.ಕೆ. ಸಿಂಜು ಪ್ರಕಾಶ್‌ (ಕೇರಳ)-1, ಎಮಿತಾ ಬಾಬು (ಕೇರಳ)-2. ಎತ್ತರ: 3.40 ಮೀ.
18 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಸುನಿತಾ ಪಾಲ್‌ (ಉತ್ತರ ಪ್ರದೇಶ)-1, ಮಮತಾ ಎಚ್‌. (ಮಹಾರಾಷ್ಟ್ರ)-2, ನಿತ್ಯಾಮೋಳ್‌ (ಕೇರಳ)-3. ಕಾಲ: 12.20 ಸೆ.; 400 ಮೀ. ಓಟ: ಜಿ.ಕೆ. ವಿಜಯಕುಮಾರಿ (ಕರ್ನಾಟಕ)-1, ಶಹರ್‌ಬಾನಾ ಸಿದ್ದೀಕಿ (ಕೇರಳ)-2, ನೀತು ಸಾಬು (ಕೇರಳ)-3. ಕಾಲ: 56.75 ಸೆ.; ಲಾಂಗ್‌ಜಂಪ್‌: ಜಿ. ಕಾರ್ತಿಕಾ (ತಮಿಳುನಾಡು)-1, ಎಸ್‌. ಪ್ರಣೀತಾ ಪ್ರದೀಪ್‌ (ಕರ್ನಾಟಕ)-2, ವಿ. ಅಕ್ಷಯಾ ಸೋನಾಶ್ರೀ (ತಮಿಳುನಾಡು)-3. ದೂರ: 6.03 ಮೀ.

ಪೋಲ್‌ವಾಲ್ಟ್‌: ಶಾನಿ ಶಾಜಿ (ಕೇರಳ)-1, ರೇಷ್ಮಾ ರವೀಂದ್ರನ್‌ (ಕೇರಳ)-1, ಪವಿತ್ರಾ (ಕರ್ನಾಟಕ)-3 ಎತ್ತರ: 3.00 ಮೀ.
16 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ವಿ. ತಮಿಳ್‌ ಸೆಲ್ವಿ (ತಮಿಳುನಾಡು)-1, ಸಿದ್ಧಿ ಹಿರೇ (ಮಹಾರಾಷ್ಟ್ರ)-2, ಕೆ. ರಮಾಲಕ್ಷ್ಮಿ (ತಮಿಳುನಾಡು)-3. ಕಾಲ: 12.53 ಸೆ.; 400 ಮೀ. ಓಟ: ತಿಯಾಶಾ ಸಮದ್ದೆರ್‌ (ಪಶ್ಚಿಮ ಬಂಗಾಳ)-1, ಆರ್‌. ವಿದ್ಯಾ (ತಮಿಳುನಾಡು)-2, ನಿಧಿ (ಮಹಾರಾಷ್ಟ್ರ)-3. ಕಾಲ: 57.40 ಸೆ.; ಹೈಜಂಪ್‌: ಅಂಜು ಬಾಬು (ಕೇರಳ)-1, ಲೈಮ್‌ವನ್‌ ನರ್ಜರಿ (ಅಸ್ಸಾಂ)-2, ರೀತು (ಹರಿಯಾಣ)-3. ಎತ್ತರ: 1.60 ಮೀ.
14 ವರ್ಷ ವಯಸ್ಸಿನೊಳಗಿನವರು:

ಲಾಂಗ್‌ಜಂಪ್‌: ಎಸ್‌. ಸಂಯುಕ್ತಾ (ತಮಿಳುನಾಡು)-1, ಟಾಮಿ ವೈಷ್ಣವಿ (ಕರ್ನಾಟಕ)-2, ಅಂಜಲಿ ಥಾಮಸ್‌ (ಕೇರಳ)-3. ದೂರ: 5.32 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT