ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯದಶಮಿ: ಆಕರ್ಷಕ ಪಥ ಸಂಚಲನ

Last Updated 7 ಅಕ್ಟೋಬರ್ 2011, 4:50 IST
ಅಕ್ಷರ ಗಾತ್ರ

ಹಾಸನ:ನಗರದಲ್ಲಿ ವಿಜಯದಶಮಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ವಿಜಯದಶಮಿ ಅಂಗವಾಗಿ ಎಲ್ಲ ದೇವಸ್ಥಾನಗಳು, ಅಂಗಡಿಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಬನ್ನಿ ಮಂಟಪದ ಮುಂದೆ ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಬನ್ನಿ ಕಡಿಯುವ ಸಾಂಪ್ರದಾಯಿಕ ಪೂಜೆ ಸಾಂಗವಾಗಿ ನಡೆಯಿತು.

ವಿವಿಧ ಭಾಗಗಳಿಂದ ಮೆರವಣಿಗೆಯಲ್ಲಿ ದೇವರ ಮೂರ್ತಿಯನ್ನು ಬನ್ನಿ ಮಂಟಪಕ್ಕೆ ತಂದು ಇಲ್ಲಿ ಪೂಜೆ ಸಲ್ಲಿಸಲಾಯಿತು. ದೇವರಿಗೆ ಆರತಿ ಬೆಳಗಿದ ಬಳಿಕ ರಾಜ ಮನೆತನದ ನರಸಿಂ–ಹರಾಜ ಅರಸು ಅವರು ಸಾಂಪ್ರದಾಯಿಕವಾಗಿ ಬನ್ನಿ ಗಿಡವನ್ನು ಕಡಿದರು. ಗಿಡದ ಬೀಳುತ್ತಿದ್ದಂತೆ ಸುತ್ತ ನೆರೆದಿದ್ದ ಭಕ್ತರು ಮುಗಿಬಿದ್ದು ಬನ್ನಿ ಗಿಡದ ಚೂರುಗಳನ್ನು ಪಡೆದುಕೊಂಡರು.

ಸತತವಾಗಿ 21ನೇ ವರ್ಷ ಬನ್ನಿಯನ್ನು ಕಡಿದ ನರಸಿಂಹರಾಜ ಅರಸು ಅವರು ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, `ಹಲವು ವರ್ಷಗಳಿಂದ ಇಲ್ಲಿ ಕಾರ್ಯಕ್ರಮ ನಡೆಯುತ್ತ ಬಂದಿದ್ದರೂ ಜನರಿಗೆ ಬೇಕಾದಂಥ ಸೌಲಭ್ಯಗಳನ್ನು ಒದಗಿಸಿಲ್ಲ. ಸರಿಯಾಗಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಬೇಕಾದ ವ್ಯವಸ್ಥೆಯೂ ಇಲ್ಲ. ಇಲ್ಲಿ ಭಕ್ತರಿಗೆ ಕುಳಿತು ಕಾರ್ಯಕ್ರಮ ನೋಡಲು ಸಾಧ್ಯವಾಗವಂತೆ ವ್ಯವಸ್ಥೆ ಮಾಡಬೇಕು.
 
ನಾವೂ ಹಲವು ವರ್ಷಗಳಿಂದ ಈ ಸಂಪ್ರದಾಯ ನಡೆಸುತ್ತ ಬಂದಿದ್ದೇವೆ. ದೇವರ ಕಾರ್ಯ ಎಂದು ಅಡ್ಡಿ ಆತಂಕ ಇಲ್ಲದೆ ಮಾಡುತ್ತಿದ್ದೇವೆ. ಸರ್ಕಾರ ನಮಗೂ ಏನನ್ನೂ ನೀಡಿಲ್ಲ. ವ್ಯವಸ್ಥೆ ಮಾಡುತ್ತೇವೆ ಎಂದು ಹಲವು ವರ್ಷಗಳಿಂದ ಭರವಸೆ ನೀಡುತ್ತಿದ್ದಾರೆ. ಆದರೆ ಈ ವರೆಗೆ ಏನೂ ಆಗಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.
ಪಥ ಸಂಚಲನ: ವಿಜಯದಶಮಿಯ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಬುಧವಾರ ಹಾಸನದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು.
ಕುವಂಪು ನಗರದ ಮಂಜುನಾಥ ಕಲ್ಯಾಣ ಮಂಟಪದ ಆವರಣದಿಂದ ಆರಂಭವಾದ ಪಥ ಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಮತ್ತೆ ಅಲ್ಲಿಯೇ ಬಂದು ಕೊನೆಗೊಂಡಿತು
ಸುಮಾರು ಒಂದು ಗಂಟೆಯ ಕಾಲ ನಡೆದ ಪಥ ಸಂಚಲನದಲ್ಲಿ ಆರ್‌ಎಸ್‌ಎಸ್ ವಿಭಾಗ ಕಾರ್ಯವಾಹ ಲಾ. ನ. ಶಾಸ್ತ್ರಿ, ನಗರ ಕಾರ್ಯವಾಹ ಪಾರಸಮಲ್, ಕಟ್ಟಾಯ ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT