ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಆರ್ಥಿಕ ಸ್ಥಿತಿ ಅರಿವು ಅಗತ್ಯ

Last Updated 11 ಫೆಬ್ರುವರಿ 2012, 5:00 IST
ಅಕ್ಷರ ಗಾತ್ರ

ಧಾರವಾಡ: “ವಿತ್ತೀಯ ಸೇರ್ಪಡೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಮುಖ್ಯ ಯೋಜನೆ ಗಳಲ್ಲೊಂದಾಗಿದೆ. ಮುಂಬರುವ ವರ್ಷ ಗಳಲ್ಲಿ ಅಲಕ್ಷಿತ ವಲಯ ಎಂದು ಪರಿಗಣಿ ಸಲ್ಪಟ್ಟ ಶೇ. 47ಕ್ಕೂ ಹೆಚ್ಚಿನ ಜನಸಂಖ್ಯೆ ಯನ್ನು ತಲುಪಬೇಕಾದ ಸವಾಲು ಬ್ಯಾಂಕಿಂಗ್ ಕ್ಷೇತ್ರಕ್ಕಿದೆ” ಎಂದು ಕರ್ನಾ ಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಸಿ.ಸಾಂಬಶಿವ ರೆಡ್ಡಿ ಹೇಳಿದರು.

ಇಲ್ಲಿನ ಅಂಜುಮನ್ ಕಾಲೇಜಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಾಗೂ ನಬಾರ್ಡ್ ಸಹಯೋಗ ದಲ್ಲಿ ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ದರು.

ಭವಿಷ್ಯ ಕಟ್ಟುವ ಜನಾಂಗವೆಂದೇ ಪರಿ ಗಣಿಸಲಾಗುವ ವಿದ್ಯಾರ್ಥಿಗಳಿಗೆ ರಾಷ್ಟ್ರದ ಆರ್ಥಿಕ ಸ್ಥಿತಿಯ ಬಗ್ಗೆ ತಿಳಿಸುವುದು ಅತ್ಯವಶ್ಯವಿದೆ. ಈ ನಿಟ್ಟಿ ನಲ್ಲಿ ಎಲ್ಲ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ವಿಷಯ ಗಳಿಗೆ ಸಂಬಂಧಿಸಿದ ರಸಪ್ರಶ್ನೆ ಸಂಘಟಿ ಸಲಾಗುತ್ತದೆ. ಪ್ರಥಮ ಸ್ಥಾನ ಪಡೆ ಯುವ ತಂಡಕ್ಕೆ 1 ಸಾವಿರ ರೂಪಾಯಿ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 5 ನೂರು ರೂಪಾಯಿ ನಗದು ಪುರಸ್ಕಾರವನ್ನು ನೀಡಲಾಗುತ್ತದೆ ಎಂದರು.

ಪ್ರಸ್ತುತ 60 ಶಾಲೆಗಳಲ್ಲಿ ಈ ಕಾರ್ಯಕ್ರಮ ಜರುಗಿದ್ದು, ಧಾರವಾಡ ಜಿಲ್ಲೆಯ ಸಂಪೂರ್ಣ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಈ ಕಾರ್ಯ ಕ್ರಮ ನಡೆಯಲಿದೆ ಎಂದು ಹೇಳಿದರು.

ನಬಾರ್ಡಿನ ಜಿಲ್ಲಾ ಅಬಿವೃದ್ಧಿ ಪ್ರಬಂಧಕ ಮಹ ದೇವಯ್ಯ ಮಾತನಾ ಡಿ, ರಾಷ್ಟ್ರ ಕಟ್ಟುವ ನಿಟ್ಟಿನಲ್ಲಿ ಹಣ ಕಾಸು  ಪಾತ್ರ ತಿಳಿಸಲು ಇಂಥ ರಸಪ್ರಶ್ನೆ ಕಾರ್ಯ ಕ್ರಮ ಒಂದು ವೇದಿಕೆ ಯಾಗಿದೆ. ಈ ಕಾರ್ಯ ಕ್ರಮಕ್ಕೆ ಎಲ್ಲೆಡೆ ಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾ ಗುತ್ತಿದೆ ಎಂದರು.

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ತಮಟ ಗಾರ ಮಾತನಾಡಿದರು. ಈ ಸ್ಪರ್ಧೆ ಯಲ್ಲಿ ಎಂ.ವಿ.ದೀಕ್ಷಿತ ಹಾಗೂ ಮೌಲಾ ಅಲಿ ಪಾನಿಗಟ್ಟಿ ಅವರ ತಂಡ ಪ್ರಥಮ ಪ್ರಶಸ್ತಿ ಪಡೆಯಿತು. ಬ್ಯಾಂಕಿನ ಸಂಪ ರ್ಕಾಧಿಕಾರಿ ಉಲ್ಲಾಸ ಗುನಗಾ ರಸ ಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
 
ಪ್ರಮೋದಾ ಧಾರವಾರಕರ ರಸ ಪ್ರಶ್ನೆಯ ನಿಯಮಾ ವಳಿ ವಿವರಿಸಿದರು. ಪ್ರಾಚಾರ್ಯೆ ಡಾ. ರಹತುನ್ನಿಸಾ, ಪ್ರೊ. ಎಂ.ಎಂ. ಜವಳಿ, ಡಾ. ಎನ್.ಬಿ. ನಾಲ ತವಾಡ, ಬ್ಯಾಂಕಿನ ಮುಖ್ಯ ಪ್ರಬಂಧಕ ವಾಸು ದೇವ, ಆರ್. ಬಿ. ಕುಮಶಿಕರ್, ಆರ್. ಬಿ.ಹಂಚಿನಮನಿ ಮತ್ತಿತರರು ಪಾಲ್ಗೊಂಡಿದ್ದರು. ನಿರ್ಣಾಯಕರಾಗಿ ಮಾಲಾ ಅಗ್ನಿ ಹೋತ್ರಿ, ಜ್ಯೋತಿ ಚಿಕ್ಕೇ ರೂರ ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT