ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ಚಾಲಿತ ಕಾರು

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಜಗತ್ತಿನ ಪ್ರಪ್ರಥಮ ಸಂಪೂರ್ಣ ವಿದ್ಯುತ್‌ಚಾಲಿತ ಬಾಡಿಗೆ ಕಾರು ಶೀಘ್ರದಲ್ಲೇ ಅಮೆರಿಕದಲ್ಲಿ ರಸ್ತೆಗೆ ಇಳಿಯಲಿದೆ.

ಪರಿಸರಸ್ನೇಹಿ ವಾಹನಗಳು ಅಮೆರಿಕದ ಸಾರಿಗೆ ಕ್ಷೇತ್ರದಲ್ಲಿ ಪ್ರಮುಖ ಸಾಧನವಾಗಿ ಬಳಕೆಯಾಗುತ್ತಿರುವುದರ ಸಂಕೇತ ಇದಾಗಿದ್ದು, ಈ ಕಾರು ಶೀಘ್ರದಲ್ಲೇ ವರ್ಜೀನಿಯಾದ ಅರ್ಲಿಂಗ್ಟನ್‌ನ ರಸ್ತೆ ಮೇಲೆ ಕಾಣಿಸಿಕೊಳ್ಳಲಿದೆ.

`ಈ ಕಾರನ್ನು ರೂಪಿಸಿದ ಮೊದಲ ಕೀರ್ತಿ ನಮ್ಮದು. ಅಮೆರಿಕದಲ್ಲಿ ಸಂಚರಿಸಲಿರುವ ಮೊದಲ ವಿದ್ಯುತ್‌ಚಾಲಿತ ಬಾಡಿಗೆ ಕಾರು ಇದಾಗಲಿದೆ~ ಎಂದು ಈ ಕಾರನ್ನು ತಯಾರಿಸಿರುವ ಮಲಿಕ್ ಖಟಕ್ ಹೇಳಿದ್ದಾರೆ.
ಐಪ್ಯಾಡ್, ವೈರ್‌ಲೆಸ್, ಇಂಟರ್‌ನೆಟ್ ಬ್ರೌಸಿಂಗ್, ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸುವ ವ್ಯವಸ್ಥೆ ಈ ಕಾರಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT