ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನ್ಯಾಸದಲ್ಲಿ ವಿಧ ವಿಧ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವಿನ್ಯಾಸ ಅಂದರೆ ಮೊದಲು ಮನಸ್ಸಿಗೆ ಹೊಳೆಯುವುದು ಆಭರಣ ವಿನ್ಯಾಸ, ಬಟ್ಟೆಗಳ ವಿನ್ಯಾಸ. ಆದರೆ, ಪ್ರತಿನಿತ್ಯ ನಾವು ಬಳಸುವ ಎಷ್ಟೋ ವಸ್ತುಗಳಲ್ಲಿ ವಿನ್ಯಾಸದ ಪರಿಕಲ್ಪನೆ ಇರುತ್ತದೆ. ಕಚೇರಿಯಲ್ಲಿ ಕಾಣುವ ಕುರ್ಚಿ, ಕಂಪ್ಯೂಟರ್ ಟೇಬಲ್, ಮನೆಯ ಸೋಫಾ ಸೆಟ್, ವಾರ್ಡ್‌ರೋಬ್, ಅಡುಗೆ ಮನೆಯ ಗ್ಯಾಸ್ ಒಲೆ, ಮಿಕ್ಸಿ, ಜ್ಯೂಸ್ ಅಥವಾ ಕಾಫಿ ಕುಡಿಯಲು ಬಳಸುವ ಗ್ಲಾಸ್, ಕಪ್, ಜುಮ್ಮೆಂದು ಓಡಾಡುವ ಬೈಕ್, ಕಾರ್ ಎಲ್ಲವೂ ನಿರ್ದಿಷ್ಟ ವಿನ್ಯಾಸದಲ್ಲೇ ಇರುತ್ತವೆ. ಉತ್ಪನ್ನವೊಂದು ಮಾರುಕಟ್ಟೆಗೆ ಬರಬೇಕಾದರೆ ತಂತ್ರಜ್ಞಾನದ ಜತೆ ವೃತ್ತಿಪರ ವಿನ್ಯಾಸಕಾರರ ಕೈಚಳಕವೂ ಅದರಲ್ಲಿ ಅಡಗಿರುತ್ತದೆ.

ಕೈಗಾರಿಕೆ, ಗೃಹೋಪಕರಣ, ಆಟೊಮೊಬೈಲ್ ಕ್ಷೇತ್ರದಲ್ಲಿ ಇಂತಹ ವಿನ್ಯಾಸಕಾರರಿಗೆ ಎಲ್ಲಿಲ್ಲದ ಬೇಡಿಕೆ. ಅದಕ್ಕಾಗಿ ವಿನ್ಯಾಸ ಶಾಲೆಗಳೂ ಇರುತ್ತವೆ. ದೇಶದ ಪ್ರತಿಷ್ಠಿತ ವಿನ್ಯಾಸ ಶಾಲೆಗಳಲ್ಲಿ ಒಂದಾದ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್’ನ 2010ನೇ ಸಾಲಿನ 50 ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ತರಬೇತಿಯ ಅಂಗವಾಗಿ ಸಿದ್ಧಪಡಿಸಿದ ವಿನ್ಯಾಸಗಳನ್ನು ಈಗ ಪ್ರದರ್ಶನಕ್ಕೆ ಇಡಲಾಗಿದೆ.

ವೈವಿಧ್ಯಮಯ ಕುರ್ಚಿಗಳು, ಬೈಕ್, ಲಗ್ಗೇಜ್ ಬ್ಯಾಗ್ ವಿನ್ಯಾಸ, ಗಾಜಿನ ಕಾಫಿ ಕಪ್, ಬಟ್ಟಲು ವಿನ್ಯಾಸ ಆಕರ್ಷಿಸುವಂತಿವೆ. ಇದೇ ಸಂಸ್ಥೆಯ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳ ಕೆಲಸವೂ ಗಮನಾರ್ಹವಾಗಿದೆ. ಛಾಯಾಗ್ರಹಣ ವಿಭಾಗದ ವಿದ್ಯಾರ್ಥಿಗಳಲ್ಲಿ ಒಬ್ಬರು ಗಾಂಧೀಜಿಯವರ ದಂಡಿಯಾತ್ರೆಯ ದಾರಿಯಲ್ಲಿ ಸಾಗಿ ಪ್ರತಿ ಕಿಲೋಮಿಟರ್‌ಗೆ ಒಂದರಂತೆ ಚಿತ್ರ ತೆಗೆದಿದ್ದಾರೆ.

ಕೇರಳದಲ್ಲಿ ಹುಟ್ಟಿ ಬೆಳೆದು, ಪಾಕಿಸ್ತಾನದಲ್ಲಿ ಉದ್ಯೋಗದಲ್ಲಿದ್ದ ಕಾರಣಕ್ಕೆ ಅಲ್ಲಿನ ಪಾಸ್‌ಪೋರ್ಟ್ ಹೊಂದಿರುವವರ ವೃದ್ಧರ ನೋವನ್ನು ಮತ್ತೊಬ್ಬ ವಿದ್ಯಾರ್ಥಿ ಸೆರೆಹಿಡಿದಿದ್ದಾರೆ. ‘ಬಡಿ ಹೋಕರ್ ಶಾದಿ ಕರ್ನಿ ಹೈ’ ಚಿತ್ರದಲ್ಲಿ ವಿದ್ಯಾರ್ಥಿನಿಯೊಬ್ಬರು ಭಾರತೀಯ ಹೆಣ್ಣು ಮಕ್ಕಳನ್ನು ಹುಟ್ಟಿದಾಗಿನಿಂದ ಹೇಗೆ ಮದುವೆಗಾಗಿಯೇ ಬೆಳೆಸಲಾಗುತ್ತದೆ ಎಂಬುದನ್ನು ಸೆರೆ ಹಿಡಿದಿದ್ದಾರೆ

‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್’ನ  ವಿದ್ಯಾರ್ಥಿಗಳು ವಿನ್ಯಾಸ ಕ್ಷೇತ್ರದಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ವೃತ್ತಿಪರತೆ ಸಾಧಿಸಿರುತ್ತಾರೆ. ವಿನ್ಯಾಸಕ್ಕೆ ಸಂಬಂಧಿದಂತೆ ಅಹಮದಾಬಾದ್‌ನಲ್ಲಿ  ಪದವಿ ಮಟ್ಟದ ತರಬೇತಿ ನೀಡುತ್ತಿರುವ ಸಂಸ್ಥೆ, ಗಾಂಧಿ ನಗರ ಮತ್ತು ಬೆಂಗಳೂರಿನಲ್ಲಿ ಸ್ನಾತಕೋತ್ತರ ಮಟ್ಟದ ತರಬೇತಿ ನೀಡುತ್ತಿದೆ. www.nid.edu  ನಲ್ಲಿ ಸಂಸ್ಥೆಗೆ ಕುರಿತ ಮಾಹಿತಿ ಲಭ್ಯ.

ಪ್ರದರ್ಶನ ಸ್ಥಳ: ಸ್ವಾತಂತ್ರ್ಯ ಉದ್ಯಾನ, ಶೇಷಾದ್ರಿ ರಸ್ತೆ. ಬೆಳಿಗ್ಗೆ 10ರಿಂದ ಸಂಜೆ 7.30. ಪ್ರದರ್ಶನ ಮುಕ್ತಾಯ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT