ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಅಪಘಾತ: 50ಕ್ಕೂ ಹೆಚ್ಚು ಸಾವು

Last Updated 10 ಜನವರಿ 2011, 5:15 IST
ಅಕ್ಷರ ಗಾತ್ರ

ಟೆಹರಾನ್ (ಡಿಪಿಎ/ಎಪಿ): ಇರಾನಿನ ಪ್ರಯಾಣಿಕ ವಿಮಾನವೊಂದು ಅಜರ್‌ಬೈಜಾನ್ ಪ್ರಾಂತ್ಯದ ಒರುಮೀಹ್‌ನ ಬಳಿ ಕೆಟ್ಟ ಹವಾಮಾನ ಮತ್ತು ದಟ್ಟ ಮಂಜಿನಿಂದ ಭಾನುವಾರ ರಾತ್ರಿ ಅಪಘಾತಕ್ಕೀಡಾಗಿದೆ.

ವಿಮಾನದಲ್ಲಿದ್ದ ಎಲ್ಲ 105 ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಮೃತಪಟ್ಟಿರುವುದಾಗಿ ‘ಇಸ್ನಾ’ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ 50 ಮಂದಿ ಗಾಯಗೊಂಡಿರುವುದಾಗಿ  ‘ಫಾರ್ಸ್‌’ ಸುದ್ದಿಸಂಸ್ಥೆ ತಿಳಿಸಿದೆ. ವಿಮಾನದಲ್ಲಿದ್ದ 95 ಜನರಲ್ಲಿ ಅರ್ಧದಷ್ಟು ಬದುಕುಳಿದಿದ್ದಾರೆ ಎಂದು ಇರಾನ್ ಟಿವಿ ಹೇಳಿದೆ. ಬೋಯಿಂಗ್ ವಿಮಾನ ಹಲವು ತುಂಡುಗಳಾಗಿ ಬಿದ್ದಿದ್ದು ಆದರೆ ಬೆಂಕಿ ಹತ್ತಿಕೊಂಡಿಲ್ಲ. ಅಪಘಾತ ಪ್ರದೇಶದಲ್ಲಿ ಭಾರಿ ಹಿಮಪಾತ ಇರುವುದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT