ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ ಮೂವರು ಸಹಾಯಕ ಪ್ರಾಧ್ಯಾಪಕರಿಗೆ ಪ್ರಶಸ್ತಿ

Last Updated 10 ಫೆಬ್ರುವರಿ 2012, 8:50 IST
ಅಕ್ಷರ ಗಾತ್ರ

ತುಮಕೂರು: ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ವತಿಯಿಂದ ನೀಡುವ 2011- 12ನೇ ಸಾಲಿನ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಪ್ರೋತ್ಸಾಹಕ ಕಾರ್ಯಕ್ರಮಗಳ ಮೂರು ಪ್ರಶಸ್ತಿಗಳು ತುಮಕೂರು ವಿಶ್ವವಿದ್ಯಾನಿಲಯದ ಮೂವರು ಸಹಾಯಕ ಪ್ರಾಧ್ಯಾಪಕರಿಗೆ ಲಭಿಸಿವೆ.

ಶ್ರೇಷ್ಠ ಸಂಶೋಧನಾ ಪ್ರಬಂಧಗಳಿಗೆ ನೀಡಲಾಗುವ `ವಿಶನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ    (ವಿಜಿಎಸ್‌ಟಿ) ಅವಾರ್ಡ್ ಫಾರ್ ಬೆಸ್ಟ್ ರೀಸರ್ಚ್ ಪಬ್ಲಿಕೇಶನ್~ ಪ್ರಶಸ್ತಿಯು ವಿ.ವಿ ವಿಜ್ಞಾನ ಕಾಲೇಜು ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಚ್. ನಾಗಭೂಷಣ್ ಅವರಿಗೆ ಲಭಿಸಿದೆ.

ಯುವ ವಿಜ್ಞಾನಿಗಳ ಸಂಶೋಧನೆಗಾಗಿ ಮೂಲಧನ ಕೊಡಮಾಡುವ `ವಿಶನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ (ವಿಜಿಎಸ್‌ಟಿ) ಸೀಡ್ ಮನಿ ಟು ಯಂಗ್ ಸೈಂಟಿಸ್ಟ್ ಫಾರ್ ರೀಸರ್ಚ್~ ಪ್ರಶಸ್ತಿ ಜತೆಗೆ ರೂ. 4 ಲಕ್ಷ ಮೂಲ ಧನವನ್ನು ವಿಜ್ಞಾನ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಜೀವ ರಸಾಯನಶಾಸ್ತ್ರ ವಿಭಾಗದ ಡಾ.ಎಸ್. ನಾಗರಾಜು ಹಾಗೂ ಡಾ.ಟಿ..ಎನ್. ರಮೇಶ್ ಅವರಿಗೆ ಲಭಿಸಿದೆ.

ಬೆಂಗಳೂರು ಜೆಆರ್‌ಡಿ ಟಾಟಾ ಸ್ಮಾರಕ ಸಭಾಂಗಣದಲ್ಲಿ ಗುರುವಾರ ಪ್ರಶಸ್ತಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT