ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ವರುಣನ ಆರ್ಭಟ: 8 ಸಾವು

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಹೈದರಾಬಾದ್‌ ಕರ್ನಾಟ­ಕದ ಜಿಲ್ಲೆಗಳು ಹಾಗೂ ಗದಗ ಜಿಲ್ಲೆಯಲ್ಲಿ  ಎರಡು ದಿನ ಗಳಿಂದ ಬಿದ್ದ ಭಾರಿ ಮಳೆಯಿಂದಾಗಿ ಒಟು್ಟ 8 ಜನ ಸಾವನ್ನಪ್ಪಿದ್ದು ಆಸ್ತಿಪಾಸ್ತಿಗೆ ತೀವ್ರ ಹಾನಿಯಾಗಿದೆ.

ಗುಲ್ಬರ್ಗ ವರದಿ: ರಾಯಚೂರು, ಕೊಪ್ಪಳ, ಗುಲ್ಬರ್ಗ ಜಿಲ್ಲೆಗಳಲ್ಲಿ ಕಳೆದೆ ರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಏಳು ಮಂದಿ ಮೃತ ಪಟ್ಟಿದ್ದು, ಭಾರಿ ಹಾನಿ ಸಂಭವಿಸಿದೆ.

ಗಂಗಾವತಿ ವರದಿ: ಮಣ್ಣಿನ ಗೋಡೆ ಮತ್ತು ತಗಡಿನ ಶೆಡ್ ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ 6ನೇ ವಾರ್ಡ್ ಮಹೆಬೂಬ ನಗರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಮೃತಪಟ್ಟವರನ್ನು  ದಾವುಲ್‌ಸಾಬ ದೋಟಿಹಾಳ (40), ತಾಯಿ ಬೇಬಿಜಾನ ದೋಟಿಹಾಳ (70) ಹಾಗೂ ದಾವುಲ್‌ಸಾಬನ ಸಹೋದರ ಮಾವ ಶ್ಯಾಮೀದ್‌ ಸಾಬ ದೋಟಿಹಾಳ (75) ಎನ್ನಲಾಗಿದೆ.

ರಾಯಚೂರು ವರದಿ: ಮನೆ ಕುಸಿದು ಬಿದ್ದು ಒಬ್ಬ ಮೃತಪಟ್ಟ ಘಟನೆ ತಾಲ್ಲೂಕು ಜೇಗರಕಲ್‌ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ನಾಗಪ್ಪ ಹನುಮಂತ ಕಬ್ಬೇರ(35). 

  ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನ ಉಡಗಿ ಗ್ರಾಮದಲ್ಲಿ ಇಬ್ಬರು ಮಳೆ ನೀರಿಗೆ ಕೊಚ್ಚಿ ಹೋಗಿ ಮೃತಪಟ್ಟರೆ, ಚಿತ್ತಾಪುರ ತಾಲ್ಲೂಕಿನ ಪಟ್ಟಣದ ಈಶ್ವರಲಿಂಗ ದೇವಸ್ಥಾನ ಹತ್ತಿರ ಸಿಡಿಲು ಬಡಿದು ಒಬ್ಬ ವ್ಯಕ್ತಿ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಕಾಲ್ನಡಿಗೆಯಲ್ಲಿ ಉಡಗಿ ಗ್ರಾಮಕ್ಕೆ ಹೋಗುತ್ತಿದ್ದ ಖಯುಮ್‌ ಪಟೇಲ್‌ (55), ಮರೆಪ್ಪ (43) ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಚಿತ್ತಾಪುರ ಪಟ್ಟಣ ನಿವಾಸಿ ಅಂಬಯ್ಯ ಮರೆಪ್ಪ ಭೋವಿ (31) ಅವರು ದೇವಸ್ಥಾನ ಬಳಿ ನಿಂತುಕೊಂಡಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಹುಬ್ಬಳ್ಳಿ ವರದಿ:  ಭಾರಿ ಮಳೆಯಿಂದ ತುಂಬಿದ ಚರಂಡಿಗೆ ಬಿದ್ದು ಶಾಲಾ ಬಾಲಕನೊಬ್ಬ ಮೃತಪಟ್ಟ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬುಧ ವಾರ ಸಂಜೆ ಸಂಭವಿಸಿದೆ. ಮೃತನನ್ನು ಲಕ್ಷ್ಮೇಶ್ವರದ ಬಿಸಿಎನ್ ವಿದ್ಯಾಸಂಸ್ಥೆಯ ಒಂದನೇ ತರಗತಿ ಬಾಲಕ ಸಂತೋಷ ಪಿ. ಪಾಟೀಲ (6) ಎಂದು ಗುರುತಿಸ ಲಾಗಿದೆ. ಉತ್ತರ ಕರ್ನಾಟಕದ ವಿವಿಧೆಡೆ ಬುಧವಾರ ಮಳೆಯಾಗಿದೆ. ವಿಜಾಪುರ, ಬೆಳಗಾವಿ, ಹಾವೇರಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT