ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಆಶಯ ಆರ್‌ಎಸ್‌ಎಸ್ ನಿಂದ ಸಾಕಾರ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: `ದೇಶದ ಬಗ್ಗೆ ಸ್ವಾಮಿ ವಿವೇಕಾನಂದ ಹೊಂದಿದ್ದ ಆಶಯವನ್ನು ಸಾಕಾರಗೊಳಿಸಿದವರು  ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಕಾರ್ಯಕರ್ತರು~ ಎಂದು  ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್‌ಪಾಠಕ್ ಹೇಳೀದರು. 

ಅವರು ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

`ಭಾರತದ ಸಾಮಾನ್ಯ ಮನುಷ್ಯನ ಮನಸ್ಸಿನಲ್ಲೂ ದೇಶಭಕ್ತಿಯನ್ನು ಮೂಡಿಸುವುದು ಸಂಘದ ಪ್ರಧಾನ ಆಶಯವಾಗಿದೆ. ಸ್ವದೇಶಿ ಆಟಗಳ ಮೂಲಕ ದೇಶಭಕ್ತಿಯ ಪಾಠವನ್ನು ಕಾರ್ಯಕರ್ತರಿಗೆ ಹೇಳಿಕೊಡಲಾಗುತ್ತಿದೆ~ ಎಂದರು.

`ಜಗತ್ತಿನಾದ್ಯಂತ 36 ದೇಶಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಕಾರ್ಯನಿರ್ವಹಿಸುತ್ತಿವೆ. ದೇಶದ ಸಂರಕ್ಷಣೆಗೆ ಕಾರ್ಯಕರ್ತರು ಸದಾಬದ್ದರಾಗಿದ್ದಾರೆ. ನಮ್ಮ ದೇಶದ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಕಾರ್ಯಕರ್ತರು ಮಾಡುತ್ತಿದ್ದ ಕಾರ್ಯವೈಖರಿಯನ್ನು ಸ್ವಂತಹ ಮಹಾತ್ಮಗಾಂಧಿ ಮೆಚ್ಚಿಗೊಂಡಿದ್ದರು~ ಎಂದರು. 

`ನಮ್ಮ ದೇಶದವರು ಕ್ರಿಕೆಟ್ ಆಟಕ್ಕೆ ಗುಲಾಮರಾಗಿದ್ದಾರೆ. ದೇಶದ ಪ್ರತಿ ಆಟದ ಮೈದಾನದಲ್ಲೂ ಪುಟ್‌ಬಾಲ್ ಆಟ ಆಡುತ್ತಿರುವ ಯುವಕರನ್ನು ನಾನು ನೋಡಬೇಕೆಂದು ಸ್ವಾಮಿ ವಿವೇಕಾನಂದ  ಹೇಳುತ್ತಿದ್ದರು. ಆದರೆ ಇಂದು ದೇಸಿ ಆಟಗಳು ಮಾಯವಾಗಿವೆ. ಬ್ರಿಟಿಷರು ಬಿಟ್ಟಹೋಗಿರುವ ಗುಲಾಮಗಿರಿ ಆಟವನ್ನು ನಾವು ದೇಶದ ಗಲ್ಲಿಗಲ್ಲಿ ಆಡುತ್ತಿರುವ ವಿಷಾದಕರ ಸಂಗತಿಯಾಗಿದೆ.  ಮತ್ತೆ ಸ್ವಾಮಿವಿವೇಕಾನಂದರ ಕನಸನ್ನು ನನಸು ಮಾಡುವ ಕಡೆಗೆ ಗಮನ ನೀಡಬೇಕಾಗಿದೆ. ಯುವಕರು ಸಂಘಟನೆಯತ್ತ ಬರಬೇಕಾಗಿದೆ. ಸಂಘಟನೆಗಳಿಂದ ಬದಲಾವಣೆ ಆಗುತ್ತದೆ ಎಂಬುದು ಎಲ್ಲರಿಗೂ ಅರ್ಥವಾಗಿದೆ.
 
ಚೀನಾ ಮತ್ತು ಪಾಕಿಸ್ತಾನದ ದೇಶಗಳೊಂದಿಗೆ ನಡೆದ ಯುದ್ದದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಕಾರ್ಯಕರ್ತರು ಮಾಡಿರುವ ಸೇವಾ ಕಾರ್ಯಗಳು ಮಹತ್ವದಾಗಿದೆ. ಇದನ್ನು ಗಮನಿಸಿ ಕೇಂದ್ರ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿಪಟೇಲ್ ರಾಷ್ಟ್ರೀಯ ಸ್ವಯಂ ಸೇವಕರಿಗೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟಿರುವುದು ಸಾಕ್ಷಿಯಾಗಿದೆ.  ಸ್ವಯಂ ಸೇವಕರು ಸದಾ ಭಾರತಾಂಬೆಯ ಸೇವೆ ಮಾಡಲು ಸಿದ್ದ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ~ ಎಂದರು.

ಸಮಾರಂಭದಲ್ಲಿ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದಸ್ವಾಮೀಜಿ, ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಶಿಬಿರಾಧಿಕಾರಿ ಎಸ್.ಮುನಿರಾಜು, ಉದ್ಯಮಿ ಸತ್ಯನಾರಾಯಣರಾಜು ಮುಂತಾದವರು ಭಾಗವಹಿಸಿದ್ದರು. ಸಮಾರಂಭಕ್ಕೂ ಮುನ್ನ  ಸ್ವಯಂಸೇವಕರು ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT