ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಮಾರ್ಗ ಅನುಸರಿಸಿ

Last Updated 25 ಜನವರಿ 2012, 5:00 IST
ಅಕ್ಷರ ಗಾತ್ರ

ಹಾಸನ:`ಸ್ವಾಮಿ ವಿವೇಕಾನಂದರು ಹಾಕಿ ಕೂಟ್ಟಿರುವ ಮಾರ್ಗವನ್ನು ವಿದ್ಯಾರ್ಥಿಗಳು ಅನುಸರಿಸಿದರೆ ಸಶಕ್ತ ಭಾರತ ನಿರ್ಮಾಣದ ಅವರ ಕನಸು ನನಸಾಗುತ್ತದೆ~  ಎಂದು ಬಿ.ಸಿ.ಕೆ.  ಎಸ್.ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ವಿಜಯಕುಮಾರ್ ನುಡಿದರು.

ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಅಂಗವಾಗಿ ನಗರದ ಎನ್.ಡಿ.ಆರ್.ಕೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವಕೇಂದ್ರ ಹಾಗೂ ಶ್ರೀ ಲಕ್ಷ್ಮಿದೇವಿ ಶನೇಶ್ವರ ಯುವಕ ಸಂಘದ ಸಂಯುಕ್ತಾಶ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತಿಥಿಯಾಗಿದ್ದ ಸುರೇಶ್ ಗುರೂಜಿ, `ಯುವಕರು ಸಕಾರಾತ್ಮಕ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೂಳ್ಳಬೇಕು, ಸೋಮಾರಿತನ ಬಿಟ್ಟು ಉತ್ತಮ ವ್ಯಕ್ತಿತ್ವ ರೂಢಿ ಸಿಕೂಂಡು ಬೆಳೆಯಬೇಕು~ ಎಂದರು.
ಕಾಲೇಜಿನ ಪ್ರಾಂಶುಪಾಲ  ಕೆ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು, ಅಪೂರ್ವಾ ಆಚಾರ್ಯ ನಿರೂಪಿಸಿದರು. ಸ್ವಯಂಸೇವಕ ಸುಜನ ಕುಮಾರ ವಂದಿಸಿದರು.

ಆರ್.ಸಿ ಕಾರದಕಟ್ಟಿ. ಡಾ.ನೀಲಕಂಠ ಎನ್ ಮನ್ವಾಚಾರ್. ಪರಮೇಶ್ವರಪ್ಪ. ಎಚ್.ಎಸ್ ನಿಂಗಪ್ಪ. ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT