ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಸಾಮರ್ಥ್ಯವುಳ್ಳವರ ಸಸ್ಯ ಮೇಳ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಿಶೇಷ ಸಾಮರ್ಥ್ಯವುಳ್ಳವರ ಸಂಸ್ಥೆಯು (ಎಪಿಡಿ) ಈಚೆಗೆ ನಗರದಲ್ಲಿ ಸಸ್ಯ ಮೇಳ ಆಯೋಜಿಸಿತ್ತು. ತೋಟಗಾರಿಕೆ ಇಲಾಖೆಯೊಂದಿಗೆ 10 ತಿಂಗಳ ವಸತಿ ಸಹಿತ ತರಬೇತಿಯನ್ನು ಅಂಗವಿಕಲರಿಗೆ ನೀಡಲಾಯಿತು.

ಫೆಬ್ರುವರಿ 10ರಿಂದ 19ರವರೆಗೆ ಸಸ್ಯ ಮೇಳ ನಡೆಯುತ್ತಿದೆ. ಈ ಮೇಳದಲ್ಲಿ ಉದ್ಯಾನದ ಸಸಿಗಳು, ಗೃಹಾಲಂಕಾರ, ಒಳಾಂಗಣ, ಹೊರಾಂಗಣ ಸಸಿಗಳ ಮಾರಾಟ ಹಾಗೂ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಆಲಂಕಾರಿಕ, ಸುಗಂಧದ್ರವ್ಯ ಸಸಿಗಳೂ ಉಂಟು.

ಮುಖ್ಯವಾಹಿನಿಯಲ್ಲಿ ಅಂಗವಿಕಲರಿಗೂ ಅವಕಾಶ ದೊರೆಯುವಂತೆ ಮಾಡುವುದು ಮೇಳದ ಉದ್ದೇಶ. ಈ ನಿಟ್ಟಿನಲ್ಲಿ `ಯು~ ಸಂಸ್ಥೆಯೂ ಎಪಿಡಿಯೊಂದಿಗೆ ಕೈಗೂಡಿಸಿದೆ.

ಈ ಸಸ್ಯ ಮೇಳವನ್ನು ಅಂಗವಿಕಲರಲ್ಲಿ ಜಾಗೃತಿ ಮೂಡಿಸಲು ಹಾಗೂ ತರಬೇತಿ ಕಾರ್ಯಕ್ರಮಕ್ಕಾಗಿ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಆಯೋಜಿಸಲಾಗಿದೆ.
ದೊಡ್ಡಗುಬ್ಬಿ ರಸ್ತೆಯಲ್ಲಿರುವ ಎಪಿಡಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಈ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಸಮಯ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ.                    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT