ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ವಿಭಿನ್ನ ರೂಪ ದರ್ಶನ

Last Updated 15 ಮೇ 2012, 19:30 IST
ಅಕ್ಷರ ಗಾತ್ರ

ಬದುಕೇ ಹೀಗೆ... ಒಬ್ಬೊಬ್ಬರದು ಒಂದೊಂದು ಬಗೆ. ಅಷ್ಟೇ ಅಲ್ಲ, ದೇಶಗಳ ನಡುವೆಯೂ ಭಿನ್ನ ರೀತಿ. ಹೊಟ್ಟೆಪಾಡಿನ ವಿಚಾರಕ್ಕೆ ಬಂದರಂತೂ ಸಂದರ್ಭ, ಕಾಲಮಾನಕ್ಕೆ ತಕ್ಕಂತೆ ದಿಢೀರ್ ಬದಲಾವಣೆ!

ಉದಾರೀಕರಣ ಬಂದಿದ್ದೇ ವಿಶ್ವದ ವಿವಿಧ ದೇಶಗಳಲ್ಲಿ ವಿಚಿತ್ರವಾದ, ವಿಪರೀತ ಎನ್ನಬಹುದಾದ ಸನ್ನಿವೇಶಗಳು ಸೃಷ್ಟಿಯಾದವು. ಬಹಳ ಶ್ರೀಮಂತವಾಗಿದ್ದ ಪಶ್ಚಿಮದ ದೇಶಗಳು ಆರ್ಥಿಕ ಹಿಂಜರಿತದ ಸಂಕಷ್ಟ, ತೀವ್ರ ಸ್ವರೂಪದ ನಿರುದ್ಯೋಗ ಸಮಸ್ಯೆ ಎದುರಿಸುವಂತಾಯಿತು. ಅದರಲ್ಲೂ ಯೂರೋಪ್, ಬ್ರಿಟನ್‌ನಲ್ಲಿ ಭಾರಿ ತಳಮಳ.

ಮಳೆ ನಿಂತರೂ ಅದರ ಹನಿ ನಿಂತಿಲ್ಲ ಎನ್ನುವಂತೆ 2007-08ರ ಆರ್ಥಿಕ ಹಿಂಜರಿತದ ಪರಿಣಾಮ ಈಗಲೂ ಮುಂದುವರಿದಿದೆ. ಮೂರು ವಾರಗಳ ಹಿಂದೆ ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಯಾದ ಎಚ್‌ಎಸ್‌ಬಿಸಿ 3167 ಸಿಬ್ಬಂದಿಗಳನ್ನು ಮನೆಗೆ ಕಳುಹಿಸುವ ನಿರ್ಧಾರ ಪ್ರಕಟಿಸಿತ್ತು.

ಈಗ ಜರ್ಮನಿಯ ಲುಫ್ತಾನ್ಸ್ ಏರ್‌ಲೈನ್ಸ್ ಸರದಿ! ಆಡಳಿತ ವಿಭಾಗದಲ್ಲಿ 3500 ಉದ್ಯೋಗ ಕಡಿತ ಘೋಷಿಸಿದೆ.  ಕಾರಣ 2012ರ ಮೊದಲ ತ್ರೈಮಾಸಿಕದಲ್ಲಿ 39.70 ಕೋಟಿ ಯೂರೊ ನಿವ್ವಳ ನಷ್ಟ.

`ವೆಚ್ಚ ಕಡಿತ ಮಾಡಲೇಬೇಕಾಗಿದೆ. 2014ರ  ವೇಳೆಗೆ 200 ಕೋಟಿ ಯೂರೊ ಉಳಿಸಲೇಬೇಕಿದೆ. ಹಾಗಾಗಿ ಮುಂದಿನ ಕೆಲ ವರ್ಷಗಳಲ್ಲಿ ಹಂತಹಂತವಾಗಿ ನೌಕರರನ್ನು ಮನೆಗೆ ಕಳುಹಿಸಲಾಗುವುದು~ ಎಂದು ಲುಫ್ತಾನ್ಸ್ ಏರ್‌ಲೈನ್ಸ್ ಕಳೆದ ವಾರ ಪ್ರಕಟಿಸಿದೆ. ಈಗ ಪಕ್ಕದ ಆಂಧ್ರಪ್ರದೇಶದಲ್ಲೂ ಇದೇ ಪರಿಸ್ಥಿತಿ! ಸಣ್ಣ ಹಣಕಾಸು ಸಂಸ್ಥೆ `ಎಸ್‌ಕೆಎಫ್~ ಸಹ 1,500 ಉದ್ಯೋಗ ಕಡಿತಗೊಳಿಸಲು ಮುಂದಾಗಿದೆ.

ನಿರುದ್ಯೋಗ ಸಮಸ್ಯೆ ಕುರಿತು
`ಬಿ ಎ ರೋಮನ್ ಇನ್ ರೋಮ್~... ಇದು ರೋಮ್ ಮತ್ತು ರೋಮನ್ನರ ಕುರಿತಾದ ಹಳೆಯ ನುಡಿಗಟ್ಟು.

ಜರ್ಮನಿಯ ಲುಫ್ತಾನ್ಸ್ ಸಿಬ್ಬಂದಿ ತಲೆ ಮೇೆ ಉದ್ಯೋಗ ಕಡಿತ ಕತ್ತಿ ತೂಗುತ್ತಿದ್ದರೆ, ಇಟಲಿಯ ಸಾವಿರಾರು ಯುವಕರು ನಿರುದ್ಯೋಗ ಸಮಸ್ಯೆಗೆ ವಿಭಿನ್ನ ಪರಿಹಾರ ಕಂಡುಕೊಂಡಿದ್ದಾರೆ.

ಇಟಲಿಯಲ್ಲೆಗ ಶೇ. 9.8ರಷ್ಟು ನಿರುದ್ಯೋಗ. 24 ವರ್ಷಆಸುಪಾಸಿನ ಯುವಕರಲ್ಲಿ ಶೇ 36ರಷ್ಟು ಮಂದಿಗೆ ನೌಕರಿಯೇ ಇಲ್ಲ!

ದಶಕದಿಂದ ಸೂಕ್ತ ನೌಕರಿ ದೊರಕದೆ ನರಳಿದ ರೋಮ್‌ನ  ಯುವಕರು ಈಗ ಅನಿವಾರ್ಯವಾಗಿ ಹಳ್ಳಿಗಾಡಿನ ಹಾದಿ ಹಿಡಿದಿದ್ದಾರೆ. ಇಟಲಿಯ ಕೃಷಿ ವಾಣಿಜ್ಯ ಚಟುವಟಿಕೆ ಗುಂಪು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ 3000 ಯುವಕರು ಕುರಿ ಕಾಯುವುದನ್ನೇ ಉದ್ಯೋಗವಾಗಿಸಿಕೊಂಡಿರುವ ವಿಚಾರ ತಿಳಿದುಬಂದಿದೆ.

ನಗರ ಜೀವನದ ಕನಸು ಕಾಣುತ್ತಿದ್ದ ಈ ಯುವಕರು, ನೌಕರಿ ಸಿಗದೆ ಕನಸು ಭಗ್ನವಾದ ನಂತರ ಹಿರಿಯರು ನಡೆಸುತ್ತಿದ್ದ `ಕುರಿ ಮಂದೆ ಕಾಯುವ~ ವೃತ್ತಿಯನ್ನೇ ಅನುಸರಿಸಲಾರಂಭಿಸಿದ್ದಾರೆ ಎಂದಿದೆ ವರದಿ.

ನಮ್ಮೂರಿಗೆ ಬನ್ನಿರಪ್ಪಾ...
ಜರ್ಮನಿಯದೇ ಒಂದು ಕಥೆ, ಇಟಲಿಯದೇ ಮತ್ತೊಂದು ಬಗೆ ವ್ಯಥೆ ಎಂದುಕೊಂಡರೆ ಸಿಂಗಪುರದ್ದು ಮತ್ತೂ ವಿಚಿತ್ರ.

`ದುಡಿಯವ ವಯಸ್ಸಿನ ಯುವಕರ ಸಂಖ್ಯೆಯೇ ಕಡಿಮೆ ಆಗಿದೆ. ವಯಸ್ಸಾಗಿರುವವರ ಜನಸಂಖ್ಯೆ ಹೆಚ್ಚಿದೆ. ನಮ್ಮ ದೇಶದ ಆರ್ಥಿಕ ಬೆಳವಣಿಗೆ ಹೆಚ್ಚಿಸಬೇಕಿದೆ. ವರ್ಷಕ್ಕೆ 30 ಸಾವಿರ ವಲಸೆಗಾರರಿಗೆ ಸ್ವಾಗತವಿದೆ~ ಎನ್ನುತ್ತಿದೆ ಸಿಂಗಪುರದ ಆಡಳಿತ.

ಸಿಂಗಪುರದ ಸದ್ಯದ ಜನಸಂಖ್ಯೆ 50 ಲಕ್ಷ. ಅಲ್ಲೆಗ ಯುವಕರ ಸಂಖ್ಯೆ ಕಡಿಮೆ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ 2030ರ ವೇಳೆಗೆ ಒಬ್ಬ ಹಿರಿಯ ವ್ಯಕ್ತಿಯ ಜೀವನಾಧಾರಕ್ಕೆ ತಲಾ ಇಬ್ಬರು ದುಡಿಯುವ ಯುವಕರಷ್ಟೇ ಇರುವಂತಾಗುತ್ತದೆ. ದುಡಿಯುವ ವರ್ಗದ ವಲಸೆಗಾರರನ್ನು ಮುಕ್ತವಾಗಿ ಬರಮಾಡಿಕೊಳ್ಳುವುದು ಅನಿವಾರ್ಯ ಎಂದು ಸಿಂಗಪುರದಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆ ಅಲ್ಲಿನ ಆಡಳಿತವನ್ನು ಎಚ್ಚರಿಸಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT