ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಶೇ 10 ಕಡಿತ: ‘ನಾಫೆಡ್‌’ ನಿರ್ಧಾರ

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಭಾರಿ ಸಾಲದ ಸುಳಿಯಲ್ಲಿ ಸಿಲುಕಿರುವ ‘ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ’ (ಎನ್‌ಎಎಫ್‌ಇಡಿ-; ನಾಫೆಡ್‌), ಸಿಬ್ಬಂದಿ ವೇತನದಲ್ಲಿ ಶೇ 10ರಷ್ಟು ಕಡಿತ ಮಾಡಲು ನಿರ್ಧರಿಸಿದೆ.

₨2,000 ಕೋಟಿಗಳಷ್ಟು ದೊಡ್ಡ ಸಾಲದ ಹೊರೆಯಿಂದ ಪರಿತಪಿಸುತ್ತಿ ರುವ ‘ನಾಫೆಡ್‌’, ವೆಚ್ಚ ನಿಯಂತ್ರಣ ಕ್ಕಾಗಿ ‘ಸ್ವಯಂ ನಿವೃತ್ತಿ ಯೋಜನೆ’ ಯನ್ನೂ (ವಿಆರ್‌ಎಸ್‌) ಪ್ರಕಟಿಸಿದೆ.

‘ಒಕ್ಕೂಟದ ಒಟ್ಟಾರೆ ವಹಿವಾಟು ಗಳಿಂದ ಬರುತ್ತಿರುವ ಆದಾಯಕ್ಕಿಂತಲೂ ಆಡಳಿತಾತ್ಮಕ ವೆಚ್ಚವೇ ಎರಡು ಪಟ್ಟು ಇದೆ. ಹಾಗಾಗಿ ಸಿಬ್ಬಂದಿ ವೇತನ ಕಡಿತ ದಂತಹ ಕಠಿಣ ನಿರ್ಧಾರವನ್ನು ‘ನಾಫೆಡ್‌’ ತೆಗೆದುಕೊಳ್ಳಲೇಬೇಕಿತ್ತು. ಅಲ್ಲದೆ, ಸಮರ್ಪಕ ಆಡಳಿತಾತ್ಮಕ ದೃಷ್ಟಿ ಯಿಂದ ಸದ್ಯದ ಪರಿಸ್ಥಿತಿಯನ್ನೇ ಇನ್ನಷ್ಟು ಕಾಲ ಮುಂದೂಡಿಕೊಂಡು ಹೋಗಲು ಸಾಧ್ಯವೂ ಇರಲಿಲ್ಲ’ ಎಂದು ಒಕ್ಕೂಟದ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಸೋಮವಾರ ತಿಳಿಸಿದ್ದಾರೆ.

‘ಜನವರಿಯಿಂದ ವೇತನದಲ್ಲಿ ಶೇ 10ರಷ್ಟು ಕಡಿತ ಮಾಡಲು  2013ರ ಡಿ. 30ರ ಒಕ್ಕೂಟದ ಸಭೆಯಲ್ಲಿಯೇ ನಿರ್ಧರಿಸಲಾಯಿತು. ಒಕ್ಕೂಟದ 500 ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಪಡೆಯುವಂತೆಯೂ ಸೂಚಿಸಲಾಗಿದೆ. ಹಾಗಾಗಿ ತಕ್ಷಣ ₨25ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಕೃಷಿ ಸಚಿವಾಲ ಯವನ್ನು ಕೋರಲಾಗಿದೆ’ ಎಂದಿದ್ದಾರೆ.

ಬೆಂಬಲ ಬೆಲೆಯ ಯೋಜನೆ ಅಥವಾ ಆಡಳಿತಾತ್ಮಕ ವೆಚ್ಚ ಭರಿಸಿಕೊಳ್ಳುವತ್ತ ‘ನಾಫೆಡ್‌’ ಗಮನ ಕೊಡಬೇಕಿದೆ’ ಎಂದೂ ಅವರು ಸಲಹೆ ನೀಡಿದ್ದಾರೆ.

2003–06 ಅವಧಿಯಲ್ಲಿನ ಆರ್ಥಿಕ ಅಶಿಸ್ತಿನಿಂದಾಗಿ ‘ನಾಫೆಡ್‌’ ಭಾರಿ ನಷ್ಟ  ಕಂಡಿತು, ಸಾಲವೂ ಹೆಚ್ಚಿತು. ಹಣಕಾಸು ಹೊಣೆಗಾರಿಕೆಗಳಿಗೆ ಹೋಲಿಸಿದರೆ ಆಸ್ತಿ ಮೌಲ್ಯವೂ ಕಡಿಮೆಯೇ ಇದೆ. ಸದ್ಯ ₨2,000 ಕೋಟಿ ಬ್ಯಾಂಕ್‌ ಸಾಲ ತೀರಿಸಬೇಕಾಗಿದೆ.  ಋಣಭಾರಕ್ಕೆ ಹೋಲಿಸಿದರೆ ಆಸ್ತಿ ಮೌಲ್ಯ ₨147 ಕೋಟಿಗಳಷ್ಟು ಕಡಿಮೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT