ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಷಕ್ಕೆ ಭೂಷಣ

Last Updated 13 ಜುಲೈ 2012, 19:30 IST
ಅಕ್ಷರ ಗಾತ್ರ

ದುಂಡನೆಯ ಮುಖಕ್ಕೆ ಸೂರ್ಯಕಾಂತಿ ಹೂವಿನ ಮುಖವಾಡ ಕಡುಕಂದು ಬಣ್ಣದ ಉಡುಗೆಯಲ್ಲಿ ಮಗಳು ಸೂರ್ಯಮುಖಿಯಂತೆಯೇ ಕಾಣುತ್ತಿದ್ದಳು. ಗುಂಡುಗುಂಡನೆಯ ಮಗುವಿನ ಮುಖಕ್ಕೆ ಹೊಂದುವಂತೆಯೇ ಇದ್ದ ಕಲ್ಲಂಗಡಿ ಉಡುಗೆ... ಮಕ್ಕಳೆಲ್ಲ ಹೂ, ಹಣ್ಣುಗಳಂತೆ... ಹೂ ಹಣ್ಣುಗಳೇ ಮಕ್ಕಳಂತೆ ಕಾಣುತ್ತಿದ್ದರು.

ಬೆಂಗಳೂರಿನ ಯಾವುದೇ ಪ್ಲೇ ಸ್ಕೂಲಿನ ಫ್ಯಾನ್ಸಿ ಡ್ರೆಸ್ ಇದ್ದರೂ ಇಂಥ ಚಂದದ ಹೂ ಹಣ್ಣುಗಳು ವೇದಿಕೆಗೆ ಬರುತ್ತವೆ.ಇಲ್ಲವೇ ಚಂಗುಚಂಗೆಂದು ಹಾರುವ ಮೊಲದಂತೆ, ಚಾಂಚಲ್ಯವೇ ಮೈವೆತ್ತಂತಹ ಹರಿಣಿ, ನರಿ, ಸಿಂಹ ಮುಂತಾದ ಪ್ರಾಣಿಯ ವೇಷಗಳಲ್ಲಿ ಶಾಲಾ ಕತೆಗೆ ಜೀವದುಂಬಿದಂತೆ ಕಾಣುತ್ತದೆ. ಆದರೆ ಈ ಉಡುಗೆಗಳು ಬಂದದ್ದು ಎಲ್ಲಿಂದ?

ಹೆಚ್ಚಾಗಿ ಶಾಲೆಯ ಆಡಳಿತ ಮಂಡಳಿಯೇ ಇಂಥವಕ್ಕೆ ಶುಲ್ಕ ಪಡೆದು, ಸಿದ್ಧಪಡಿಸಿರುತ್ತಾರೆ. ಆದರೆ ಫ್ಯಾನ್ಸಿ ಡ್ರೆಸ್‌ಗಾಗಿ ಪಾಲಕರು ಓಡಾಡುವುದು ಸಾಮಾನ್ಯ ಆಗಿರುತ್ತದೆ.

ಪಾಲಕರ ಕಷ್ಟವನ್ನು ಸರಳಗೊಳಿಸಿರುವುದು ಬೆಂಗಳೂರಿನ ಕೆಲವು ವಸ್ತ್ರ ಮಳಿಗೆಗಳು. ಒಂದು ದಿನದ ಕಾರ್ಯಕ್ರಮಕ್ಕಾಗಿ ಬಾಡಿಗೆಗೂ, ಶಾಲೆಗಳಿಗೆ ನೀಡಲಿಕ್ಕಾದರೆ ಖರೀದಿಸಲು ಸಹ ಈ ಮಳಿಗೆಗಳು ಸಿದ್ಧವಾಗಿವೆ.

ಬೆಂಗಳೂರಿನಲ್ಲಿ 10 ವರ್ಷಗಳಿಂದ ಇಂಥ ಉಡುಗೆಗಳನ್ನು ಸಿದ್ಧಪಡಿಸುತ್ತಿರುವ `ಅರಿಹಂತ್ ಟ್ರೇಡರ್ಸ್~ ಮಾರಾಟಕ್ಕೂ ಸಿದ್ಧ.`ಉಡುಗೆಗಳನ್ನು ಬಾಡಿಗೆಗೆ ನೀಡಲೂ ಸಿದ್ಧ. ಪ್ರತಿದಿನದ ಲೆಕ್ಕದಂತೆ ರೂ.250ರಿಂದ ಉಡುಗೆಗಳನ್ನು ಬಾಡಿಗೆಗೆ ನೀಡಲಾಗುತ್ತದೆ.

ಕನಿಷ್ಠ 250ರಿಂದ ಆರಂಭವಾಗಿ 950 ರೂಪಾಯಿವರೆಗೂ ಬೆಲೆಬಾಳುವ ಉಡುಗೆಗಳು ಇವರ ಸಂಗ್ರಹದಲ್ಲಿದೆ. ಉಡುಗೆಯನ್ನು ಆಧರಿಸಿ ಶುಲ್ಕ ಬದಲಾಗುತ್ತದೆ. ಆದರೆ ಯಥಾಸ್ಥಿತಿಯಲ್ಲಿ ಮರಳಿಸುವುದು ಕಡ್ಡಾಯ.

ಕೆಲವೊಮ್ಮೆ ಪಾಲಕರು `ಸಿಂಡ್ರೆಲಾ~, ಸ್ನೋ ವೈಟ್, ಪ್ರಿನ್ಸ್ ಮುಂತಾದ ಉಡುಗೆಗಳಿದ್ದಾಗ ಕೊಳ್ಳಲು ಇಚ್ಛಿಸುತ್ತಾರೆ. ಆಗ ಅವರ ಮಕ್ಕಳಿಗೆ ಬೇಕಿರುವ ಬಣ್ಣ ಹಾಗೂ ಅವರಿಷ್ಟದಂತೆ ಸಿದ್ಧಪಡಿಸಲಾಗುತ್ತದೆ. ಅವರ ಬಜೆಟ್ ಪ್ರಕಾರವೇ ವಿನ್ಯಾಸಗೊಳಿಸಲಾಗುತ್ತದೆ~ ಎನ್ನುತ್ತಾರೆ ಅರಿಹಂತ್ ಟ್ರೇಡರ್ಸ್‌ನ ವರುಣ್.

ಮೂರರಿಂದ 15 ವರ್ಷದವರೆಗಿನ ಮಕ್ಕಳಿಗೂ ಇವರು ವಸ್ತ್ರವಿನ್ಯಾಸಗೊಳಿಸುತ್ತಾರೆ. ಇವರೊಂದಿಗೆ ಇವರ ಪತ್ನಿ ಗರಿಮಾ ಸಹ ಕೈ ಜೋಡಿಸಿದ್ದು, ಡಾನ್ಸ್ ಟ್ರೂಪ್‌ಗಳಿಗೆ ವಸ್ತ್ರವಿನ್ಯಾಸಕರಾಗಿಯೂ ಶ್ರಮಿಸುತ್ತಿದ್ದಾರೆ. ಬಾಡಿಗೆಗೆ ನೀಡುವ ಬಟ್ಟೆಗಳು ಚಂದ ಕಂಡರೂ ಗುಣಮಟ್ಟದಲ್ಲಿ ಸಾಧಾರಣವಾಗಿರುತ್ತವೆ. ಆದರೆ ಖರೀದಿಸಲು ಇಷ್ಟ ಪಡುವವರಿಗಾಗಿ ಉತ್ತಮ ಗುಣಮಟ್ಟದ ವಸ್ತ್ರಗಳಲ್ಲಿಯೇ ವಿನ್ಯಾಸಗೊಳಿಸಿ ನೀಡುವ ಭರವಸೆಯನ್ನೂ ಅವರು ನೀಡುತ್ತಾರೆ.

ಬೆಳ್ಳಂದೂರು ಗೇಟ್ ಬಳಿಯ ಫ್ಯಾಂಟಸಿ ಕ್ರಿಯೇಷನ್ಸ್ ಎಂಬ ಮಳಿಗೆಯೂ ಕಳೆದ ಒಂದು ವರ್ಷದಿಂದ ಈ ವ್ಯವಹಾರದಲ್ಲಿ ಭಾಗಿಯಾಗಿದೆ.`ಪ್ರತಿ ತಿಂಗಳೂ ಒಂದಲ್ಲ ಒಂದು ಶಾಲೆಯಲ್ಲಿ ಸಮೂಹ ನೃತ್ಯ, ಫ್ಯಾನ್ಸಿ ಡ್ರೆಸ್ ಅಥವಾ ನಾಟಕಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಉಡುಗೆಗಾಗಿ ಬೇಡಿಕೆ ಇದ್ದೇ ಇರುತ್ತವೆ. ಶಾಲೆಯಿಂದ ಬರುವ ಬಲ್ಕ್ ಆರ್ಡರ್‌ಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ~ ಎಂದು ವಿವರಿಸುತ್ತಾರೆ ಫ್ಯಾಂಟಸಿ ಕ್ರಿಯೇಷನ್ಸ್‌ನ ಶ್ವೇತಾ.

ಇಲ್ಲಿಯೂ ಬಾಡಿಗೆಗೆ ಸಹ ಉಡುಗೆಗಳನ್ನು ನೀಡಲಾಗುತ್ತದೆ. ದಿನಕ್ಕೆ ತಲಾ 200 ರೂಪಾಯಿ ಬಾಡಿಗೆ. ಕೆಲವೊಂದು ಪ್ರಾಣಿಗಳ ಉಡುಗೆ, ಕಾರ್ಟೂನ್ ಕ್ಯಾರೆಕ್ಟರ್‌ಗಳ ಉಡುಗೆಗಳು ಇವರ ಬಳಿಯಿವೆ. ವಿಶೇಷ ಉಡುಗೆ ಬೇಕೆಂದರೆ ಕನಿಷ್ಠ 2 ದಿನಗಳ ಮೊದಲೇ ಭೇಟಿ ನೀಡಬೇಕು. ಅಗತ್ಯದ ಬದಲಾವಣೆಗಳನ್ನು ಮಾಡಲು ಅನುಕೂಲವಾಗುತ್ತದೆ ಎನ್ನುತ್ತಾರೆ ಅವರು.
 

`ವಿಷಯಾಧರಿತ ಉಡುಗೆ~
ಹೆಚ್ಚಾಗಿ ಮಕ್ಕಳ ಉಡುಗೆಗಳಿಗೆ ಋತುಮಾನ ಆಧರಿತ ಬೇಡಿಕೆಗಳಿರುತ್ತವೆ. ಆಗಸ್ಟ್ 15 ಅಥವಾ ಜನವರಿ ತಿಂಗಳಲ್ಲಿ ರಾಷ್ಟ್ರ ನಾಯಕರ ಉಡುಗೆಗಳಿಗೆ, ಥೀಮ್‌ಬೇಸ್ಡ್ ಸ್ಪರ್ಧೆಗಳಿದ್ದಾಗ ಕಾರ್ಟೂನು ಅಥವಾ ವೃತ್ತಿನಿರತರ ವೇಷಭೂಷಣಕ್ಕೆ ಹೆಚ್ಚು ಬೇಡಿಕೆ. ಪರಿಸರ ಕಾಳಜಿಯ ಥೀಮ್ ಇದ್ದಾಗ ಹಣ್ಣು, ತರಕಾರಿ, ಗಿಡ, ಮರ, ಕಾಡುಪ್ರಾಣಿಗಳ ವೇಷಭೂಷಣಗಳಿಗೆ ಬೇಡಿಕೆ ಹೆಚ್ಚು ಇರುತ್ತದೆ.

`ಹುಡುಗಿಯರಿಗಂತೂ ಸಿಂಡ್ರೆಲಾ, ಫೇರಿ, ಏಂಜಲ್, ಸ್ನೋವೈಟ್ ಮುಂತಾದ ರಾಜಕುಮಾರಿಯರ ಉಡುಗೆ ತೊಡುಗೆಯೇ ಬೇಕು ಅನ್ನುವವರು ಜಾಸ್ತಿ~ ಎನ್ನುತ್ತಾರೆ ಫ್ಯಾನ್ಸಿ ಕ್ರಿಯೇಷನ್ಸ್‌ನ ಶ್ವೇತಾ. ಇವರ ಬಳಿ ಎಲ್ಲ ಶ್ರೇಣಿಯ ಉಡುಗೆಗಳೂ ಲಭ್ಯ ಎಂದು ಹೇಳುತ್ತಾರೆ.

ಫ್ಯಾನ್ಸಿ ಡ್ರೆಸ್‌ಗಾಗಿ ಸಂಪರ್ಕಿಸಿ
ಅರಿಹಂತ್ ಟ್ರೇಡರ್ಸ್ ವರುಣ್ ಮತ್ತು ಗರಿಮಾ: 90350 07223
ಫ್ಯಾಂಟಸಿ ಕ್ರಿಯೇಶನ್ಸ್: ಶ್ವೇತಾ 97311 75831
ಪ್ರಭಾತ್ ಕಲಾವಿದರು 2661 3407
ಫ್ಯಾನ್ಸಿ ಡ್ರೆಸ್ ಕಿಡ್ಸ್ ಕಾರ್ನರ್: 98445 36968

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT