ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ದೃಷ್ಟಿಯಲ್ಲಿ ಹೋರಾಟ ನಡೆಸಿ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೋಲಾರ: ಯುವಕರು ವೈಜ್ಞಾನಿಕ ದೃಷ್ಟಿಕೋನ ಹೊಂದಿ ಸಾಮಾನ್ಯ ಜನರ ಒಳಿತಿಗಾಗಿ ಹೋರಾಟ ಮಾಡಬೇಕು ಎಂದು ರಾಜ್ಯ ಎಲ್‌ಐಸಿ ನೌಕರರ ಸಂಘದ ಮುಖಂಡ ಎನ್.ನಾಗರಾಜ್ ಮನವಿ ಮಾಡಿದರು.

ನಗರದಲ್ಲಿ ಭಾನುವಾರ ನಡೆದ ಡಿವೈಎಫ್‌ಐ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶವು ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯಾಗುತ್ತಿದೆ ಎಂದು ಸಾರಲಾಗುತ್ತಿದೆ. ವಾಸ್ತವವಾಗಿ ಬಡತನ ರೇಖೆಯಲ್ಲಿರುವ ಜನ ಇನ್ನೂ ಶೇ.80 ರಷ್ಟಿದ್ದಾರೆ. ಬಡವರ-ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದೆ. ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯುವಕರು ಸಮಾಜದ ಓರೆಕೋರೆ ತಿದ್ದಲು ಮುಂದಾಗಬೇಕು ಎಂದರು.

ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಮಾತನಾಡಿ, ಸಂಘಟನೆ ದೇಶದ ಸಮಗ್ರತೆ -ಏಕತೆಗಾಗಿ ಕೆಲಸ ಮಾಡುತ್ತಿದೆ. ಎಲ್ಲ ವರ್ಗದ ಜನರ ಒಳಿತನ್ನು ಸಂಘಟನೆ ಬಯಸುತ್ತದೆ ಎಂದರು.

ಮುಖಂಡರಾದ ಚೆನ್ನರಾಯಪ್ಪ, ಅಂಬರೀಶ್, ತಂಗರಾಜ್, ವಿಜಯಕೃಷ್ಣ ಉಪಸ್ಥಿತರಿದ್ದರು. ವಿಜಿ ಸ್ವಾಗತಿಸಿದರು. ರಮೇಶ್ ವಂದಿಸಿದರು.

ಸಮಾವೇಶಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT