ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಾಹಿಕ ತಾಣ: ಶೇ 65 ಪ್ರಗತಿ

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆನ್‌ಲೈನ್‌ ಮೂಲಕ ವೈವಾಹಿಕ ಮಾಹಿತಿ ಒದಗಿಸುವ ತಾಣ­ಗಳ ವಹಿ­ವಾಟು 2017ರ ವೇಳೆಗೆ ₨1,500 ಕೋಟಿ ದಾಟಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾ­ಸಂಘದ (ಅಸೋಚಾಂ) ಅಧ್ಯಯನ ತಿಳಿಸಿದೆ.

ಸದ್ಯ ಇಂತಹ ತಾಣಗಳ ಮಾರುಕಟ್ಟೆ ಗಾತ್ರ ₨520 ಕೋಟಿಯಷ್ಟಿದ್ದು, ವಾರ್ಷಿಕ ಶೇ 65ರಷ್ಟು ಪ್ರಗತಿ ಕಾಣುತ್ತಿದೆ. ಇಂಟರ್‌ನೆಟ್‌ ಬಳಕೆ ವ್ಯಾಪಕವಾಗಿ ಹೆಚ್ಚುತ್ತಿ­ರುವ ಹಿನ್ನೆಲೆ­ಯಲ್ಲಿ ಇನ್ನೆರಡು ವರ್ಷಗಳಲ್ಲಿ  ಈ ಮಾರು­ಕಟ್ಟೆ ಗಣನೀಯ ಪ್ರಗತಿ ಕಾಣಲಿದೆ ಎಂದು ‘ಅಸೋಚಾಂ’ ಅಧ್ಯಯನ ವಿವರಿಸಿದೆ.

2012–13ನೇ ಸಾಲಿನಲ್ಲಿ ಸುಮಾರು 5 ಕೋಟಿ ಜನರು ವೈವಾಹಿಕ ಮಾಹಿತಿ ತಾಣಗಳಲ್ಲಿ ನೋಂದಣಿ ಮಾಡಿಕೊಂ­ಡಿದ್ದಾರೆ. ಇವರಲ್ಲಿ 25 ಲಕ್ಷ ಮಂದಿ ತಮ್ಮ ಭಾವಚಿತ್ರ ಮತ್ತು ವೈಯಕ್ತಿಕ ವಿವರಗಳನ್ನು ಆನ್‌ಲೈನ್‌ಗೆ ಅಪ್‌­ಲೋಡ್‌ ಮಾಡಿ­ದ್ದಾರೆ.

‘ಇಂತಹ ತಾಣ­ಗಳಲ್ಲಿ ನೋಂದಣಿ ಮಾಡಿಕೊ­ಳ್ಳುವುದು ಸುಲಭ. ಸರಳ­ವಾಗಿ ವೈವಾ­ಹಿಕ ಮಾಹಿತಿ ಪಡೆಯಬಹುದು ಇದರಿಂದ ದಿನೇ ದಿನೇ ಇಂತಹ ತಾಣಗಳ ಜನಪ್ರಿಯತೆ ಹೆಚ್ಚುತ್ತಿದೆ’ ಎಂದು ‘ಅಸೋಚಾಂ’ನ ಪ್ರಧಾನ ಕಾರ್ಯ­ದರ್ಶಿ ಎಸ್‌.ಡಿ ರಾವತ್‌ ಅಭಿಪ್ರಾಯ­ಪಟ್ಟಿದ್ದಾರೆ.

2011–12 ಮತ್ತು 2012–13ನೇ ಸಾಲಿನಲ್ಲಿ ಆನ್‌ಲೈನ್‌ ವೈವಾಹಿಕ ತಾಣ­ಗಳು ಮತ್ತು ಉದ್ಯೋಗ ತಾಣಗಳು ಕ್ರಮವಾಗಿ ಶೇ 56 ಮತ್ತು ಶೇ 52ರಷ್ಟು ಪ್ರಗತಿ ದಾಖಲಿಸಿವೆ. ವೃತ್ತಿ­ಪರರು ಮತ್ತು ಅನಿವಾಸಿ ಭಾರತೀ­ಯರು (ಎನ್‌ಆರ್‌ಐ) ಹೆಚ್ಚಾಗಿ ಇಂತಹ ತಾಣಗಳ ಮೂಲ­ಕವೇ ತಮ್ಮ ಸಂಗಾತಿ­ಗಳನ್ನು ಹುಡುಕಿ­ಕೊಳ್ಳುತ್ತಿ­ದ್ದಾರೆ. ಜಾತಿ, ವೃತ್ತಿ, ಊರು, ಆಸಕ್ತಿ, ಹವ್ಯಾಸಕ್ಕೆ ತಕ್ಕಂತೆ ಸರಳವಾದ ಆಯ್ಕೆಗಳು ಇಲ್ಲಿವೆ ಎಂದು ಅವರು ಹೇಳಿದ್ದಾರೆ. 

2012–13ನೇ ಸಾಲಿನಲ್ಲಿ ಉದ್ಯೋಗ ಮಾಹಿತಿ ತಾಣಗಳಲ್ಲಿ 2.5 ಕೋಟಿ ಜನರು ನೋಂದಾಯಿ­ಸಿಕೊಂಡಿದ್ದಾರೆ.  ಇನ್ನೆರಡು ವರ್ಷ­ಗಳಲ್ಲಿ ಈ ಸಂಖ್ಯೆ 5 ಕೋಟಿಗೆ ಏರಿಕೆ ಕಾಣುವ ನಿರೀಕ್ಷೆ ಇದೆ. ಆನ್‌ಲೈನ್‌ ಮೂಲಕ ಉದ್ಯೋಗ  ಹುಡುಕುವವರ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT