ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವ್ಯಕ್ತಿತ್ವಕ್ಕೆ ಸಾಣೆ ಹಿಡಿಯಿರಿ; ಪರಿವರ್ತನೆ ಹೊಂದಿ'

Last Updated 26 ಏಪ್ರಿಲ್ 2013, 6:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ವ್ಯಕ್ತಿತ್ವದಲ್ಲಿ ಪರಿವರ್ತನೆ ಆಗಬೇಕಾದರೆ ಸ್ವತಃ ಬದಲಾಗುವ ಮನಸ್ಸು ಮಾಡಬೇಕು, ಆಂತರಿಕ ಬೆಳವಣಿಗೆಗೆ ದಾರಿ ಮಾಡಿಕೊಡಬೇಕು' ಎಂದು ಅಂತರರಾಷ್ಟ್ರೀಯ ಅಥ್ಲೀಟ್ ಅರ್ಜುನ ದೇವಯ್ಯ ಅಭಿಪ್ರಾಯಪಟ್ಟರು.

ರಾಜ್ಯ ಕಾನೂನು ವಿವಿ ಗುರುವಾರ ಹಮ್ಮಿಕೊಂಡಿದ್ದ `ಪ್ರೇರಣೆ ಮೂಲಕ ಪರಿವರ್ತನೆ' ಎಂಬ ವಿಷಯದ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

`ಯಾವುದೇ ಅಮಾನುಷ ಶಕ್ತಿಯಿಂದ ವ್ಯಕ್ತಿಯ ಬದಲಾವಣೆ ಮಾಡಲು ಸಾಧ್ಯವಿಲ್ಲ. ಪರಿವರ್ತನೆಗೆ ಸ್ವತಃ ವ್ಯಕ್ತಿಯೇ ಮುಂದಾಗಬೇಕು, ಸ್ವಭಾವವನ್ನು ತಿದ್ದಿಕೊಳ್ಳಲು ಮುಂದಾಗಬೇಕು' ಎಂದು ಅವರು ಹೇಳಿದರು. 

ವಿವಿ ಕುಲಪತಿ ಪ್ರೊ. ಟಿ.ಆರ್.ಸುಬ್ರಹ್ಮಣ್ಯ ಮಾತನಾಡಿ, ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಯುವ ಸಮುದಾಯಕ್ಕೆ ತರಬೇತಿ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕುಲಸಚಿವ ಸುಭಾಷ್ ಮಾಲಖೇಡೆ ಅಧ್ಯಕ್ಷತೆ ವಹಿಸಿದ್ದರು. ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಖಾಲಿದ್ ಖಾನ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ. ಗಂಗಾಧರ ಗೌಡರ ವಂದಿಸಿದರು. ಅರ್ಚನಾ ಅತಿಥಿಗಳ ಪರಿಚಯ ಮಾಡಿದರು.

ತೊದಲುವಿಕೆ ನಿವಾರಣೆ ಶಿಬಿರ
ಹುಬ್ಬಳ್ಳಿ:
ನಗರದ ಸ್ಟೇಶನ್ ರಸ್ತೆ, ಶೃಂಗಾರ ಚಿತ್ರಮಂದಿರದ ಆವರಣದಲ್ಲಿರುವ ಧನ್ವಂತರಿ ತೊದಲುವಿಕೆ ನಿವಾರಣಾ ಕೇಂದ್ರದಲ್ಲಿ ಇದೇ ಏ.27ರಿಂದ 29ರವರೆಗೆ ಬೆಳಿಗ್ಗೆ 11ರಿಂದ 2ಗಂಟೆವರೆಗೆ ಉಚಿತ ತೊದಲುವಿಕೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ತೊದಲುವಿಕೆ, ಉಗ್ಗುವಿಕೆ, ಅಸ್ಪಷ್ಟವಾಗಿ ವೇಗದಿಂದ ಮಾತನಾಡುವ (ಸ್ಟಾಮರಿಂಗ್) ಸಮಸ್ಯೆಯ ನಿವಾರಣೆಗಾಗಿ ಸ್ಟಾಮರಿಂಗ್ ಥೆರಪಿಸ್ಟರಾದ ಡಾ.ಅಶೋಕ ಬಸವಾ ಅವರು ಉಚಿತವಾಗಿ ತಪಾಸಣೆ ಮಾಡಿ ಸಲಹೆ ನೀಡಲಿದ್ದಾರೆ. ಮಾಹಿತಿಗೆ 98441 04701 ಸಂಪರ್ಕಿಸಬಹುದು.

ಕಾನೂನು ವಿವಿ: ಟೆಬಲ್ ಟೆನಿಸ್ ಟೂರ್ನಿ ನಾಳೆ
ಹುಬ್ಬಳ್ಳಿ:
ರಾಜ್ಯ ಕಾನೂನು ವಿಶ್ವವಿದ್ಯಾಲಯವು ಕೆ.ಎಲ್.ಇ. ಸೊಸೈಟಿಯ ಗುರುಸಿದ್ಧಪ್ಪ ಕೋತಂಬ್ರಿ ಕಾನೂನು ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿರುವ ಅಂತರ ಕಾಲೇಜು ಟೇಬಲ್ ಟೆನಿಸ್ ಟೂರ್ನಿ ಇದೇ 27ರಂದು ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

ಗುರುಸಿದ್ಧಪ್ಪ ಕೋತಂಬ್ರಿ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಜಿ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ `ಪ್ರಜಾವಾಣಿ' ಸಹ ಸಂಪಾದಕ ಗೋಪಾಲಕೃಷ್ಣ ಹೆಗಡೆ ಟೂರ್ನಿಯನ್ನು ಉದ್ಘಾಟಿಸುವರು. ಕಾನೂನು ವಿವಿ ಕುಲಸಚಿವ ಡಾ.ಬಿ.ಎಸ್.ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.


ಸಂಜೆ 5 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ಕೋಚ್ ಈಶ್ವರ ಅಂಗಡಿ ಪ್ರಶಸ್ತಿ ವಿತರಿಸುವರು ಎಂದು ಕಾನೂನು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಖಾಲಿದ್ ಖಾನ್ ತಿಳಿಸಿದ್ದಾರೆ.

ರೂ10,83,268 ಕಾಣಿಕೆ ಸಂಗ್ರಹ
ಹುಬ್ಬಳ್ಳಿ:
ಇಲ್ಲಿನ ಸಿದ್ಧಾರೂಢ ಮಠದ ಕಾಣಿಕೆ ಪೆಟ್ಟಿಗೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿದ್ಧಾರೂಢ ಶಾಖೆಯ ಮ್ಯಾನೇಜರ್ ಹಾಗೂ ಸಿಬ್ಬಂದಿಯವರ ಸಮ್ಮುಖದಲ್ಲಿ ತೆರೆಯಲಾಯಿತು. ರೂ10,83,268 ಗಳು ಸಂಗ್ರಹವಾದ ಕಾಣಿಕೆಯಾಗಿರುತ್ತದೆ. ಇದು ಮಾ.20 ರಿಂದ ಏ.24ರವರೆಗೆ ಸಂಗ್ರಹವಾದ ಕಾಣಿಕೆಯಾಗಿದೆ ಎಂದು ಮಠದ ಅಧಿಕೃತ ಪ್ರಕಟಣೆ ತಿಳಿಸಿದೆ.

ಎಣಿಕೆ ಮೇಲ್ವಿಚಾರಣೆಯನ್ನು ಟ್ರಸ್ಟ್ ಕಮೀಟಿ ಅಧ್ಯಕ್ಷ ನಾರಾಯಣಪ್ರಸಾದ ಪಾಠಕ ವಹಿಸಿದ್ದರು. ಉಪಾಧ್ಯಕ್ಷೆ ಜ್ಯೋತಿ ಸಾಲಿಮಠ, ಧರ್ಮದರ್ಶಿಗಳಾದ ಬಸವರಾಜ ಕಲ್ಯಾಣಶೆಟ್ಟರ, ವೈ.ಎ.ದೊಡ್ಡಮನಿ, ಎನ್.ಟಿ.ಮೆಹರವಾಡೆ, ಗೀತಾ ಎಸ್.ಜಿ, ಧರಣೇಂದ್ರ ಜವಳಿ, ಕೆ.ಎಫ್.ತಲವಾಯಿ, ಸದಾನಂದ ಬೆಂಡಿಗೇರಿ, ತುಕಾರಾಮ ಕಠಾರೆ, ಬಸವರಾಜ ಕಾರಡಗಿ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT