ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಹಾರ ನಿರ್ವಹಣೆಗೆ ಇಂಟೆಲ್ಲಿಲೀಪ್‌ ಆರಂಭ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮ ಸಂಸ್ಥೆಗಳಿಗೆ ಸುಧಾರಿತ ತಂತ್ರಜ್ಞಾನ ಅಳವಡಿಕೆ, ಕೌಶಲ ಅಭಿವೃದ್ಧಿ ಮತ್ತು ಆಡಳಿತ ನಿರ್ವಹಣೆಯಲ್ಲಿ ನೆರವು ನೀಡಲು ‘ಇಂಟೆಲ್ಲಿಲೀಪ್‌’ ಎಂಬ ಸ್ಟಾರ್ಟ್‌ಅಪ್‌ ಸಂಸ್ಥೆಯೊಂದು ಆರಂಭ­ವಾಗಿದೆ. ವಸತಿ ಸಚಿವ ಅಂಬರೀಶ್‌ ಬುಧವಾರ ಇಲ್ಲಿ ಕಂಪೆನಿಯ ಲಾಂಛನ ಮತ್ತು ಸೇವೆ­ಗಳನ್ನು ಅನಾವರಣ­ಗೊಳಿಸಿದರು.

‘ಇಂಟೆಲ್ಲಿಲೀಪ್‌’ ವ್ಯವಹಾರ ಪ್ರಕ್ರಿಯೆ ನಿರ್ವಹಣೆ(ಬಿಪಿಎಂ) ಸೇವೆ­ಗಳನ್ನು ಒದಗಿಸುವ ಕಂಪೆನಿಯಾಗಿದ್ದು, ಶಿಕ್ಷಣ, ಬ್ಯಾಂಕಿಂಗ್‌, ಹೊರಗುತ್ತಿಗೆ, ವಿಮಾನ ಯಾನ ಕ್ಷೇತ್ರಗಳಲ್ಲಿ ಸೇವೆ ಒದಗಿಸಲಿ ದ್ದೇವೆ. ‘ಬಿಪಿಎಂ’ ಪರಿಹಾ­ರದಿಂದ ಉದ್ಯಮ ಸಂಸ್ಥೆಗಳ ಕಾರ್ಯ­ನಿರ್ವಹಣೆ ಸಾಮರ್ಥ್ಯ ಹೆಚ್ಚ­ಲಿದ್ದು, ವೆಚ್ಚ ಗಣನೀಯ ವಾಗಿ ತಗ್ಗಲಿದೆ. ಸೇವಾ ಗುಣಮಟ್ಟವೂ ಹೆಚ್ಚಲಿದೆ’ ಎಂದು ಕಂಪೆನಿಯ  ವ್ಯವಸ್ಥಾ ಪಕ ನಿರ್ದೇಶಕ ವಿಘ್ನೇಶ್‌ ಹೆಬ್ಬಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT