ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಭುಲಿಂಗೇಶ್ವರ ದರ್ಶನಕ್ಕೆ ಜನಸಾಗರ

Last Updated 4 ಡಿಸೆಂಬರ್ 2013, 6:26 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿಯಲ್ಲಿ ಶಂಭುಲಿಂಗೇಶ್ವರ ಸ್ವಾಮಿಯ ಕೊಂಡೋತ್ಸವ ಮಂಗಳವಾರ ಮುಂಜಾನೆ ಸಡಗರ, ಸಂಭ್ರಮದಿಂದ ನಡೆಯಿತು.

ಮುಂಜಾನೆ 5.30ಕ್ಕೆ ದೇವಾಲಯದ ಮುಖ್ಯ ಅರ್ಚಕ ನಾರಾಯಣ ಕೊಂಡ ಹಾಯುವ ಮೂಲಕ ಕೊಂಡೋತ್ಸವಕ್ಕೆ ಚಾಲನೆ ನೀಡಿದರು. ಉತ್ಸವ ಮೂರ್ತಿಯನ್ನು ಹೊತ್ತಿದ್ದವರು ಅವರನ್ನು ಹಿಂಬಾಲಿಸಿದರು. ಹರಕೆ ಹೊತ್ತವರು ಕೂಡ  ಕೆಂಡದ ಮೇಲೆ ಭಕ್ತಿಯ ಪರಾಕಾಷ್ಠೆಯಿಂದ ಹೆಜ್ಜೆ ಹಾಕಿದರು. ಭಕ್ತರು ಕೊಂಡಕ್ಕೆ ಕೊಬ್ಬರಿ ಇತರ ವಸ್ತುಗಳನ್ನು ಹಾಕಿ ಹರಕೆ ಸಲ್ಲಿಸಿದರು.  ಇದಕ್ಕೂ ಮುನ್ನ ಗ್ರಾಮದ ಎಲ್ಲ ಬೀದಿಗಳಲ್ಲಿ ಉತ್ಸವ ಸಂಚರಿಸಿತು. ಸೋಮವಾರ ರಾತ್ರಿ 9 ಗಂಟೆಗೆ ಆರಂಭವಾದ ಈ ಉತ್ಸವ ಮಂಗಳವಾರ ಮುಂಜಾನೆ 5 ಗಂಟೆ ವೇಳೆಗೆ ದೇವಾಲಯ ತಲುಪಿತು. ಪಶ್ಚಿಮ ವಾಹಿನಿಯಿಂದ ವಾದ್ಯ ಗೋಷ್ಠಿಗಳೊಡನೆ ಹೊರಟ ಸರ್ವಾಲಂಕೃತ ಉತ್ಸವಕ್ಕೆ ಗ್ರಾಮದ ಕೈಮರದ ಗೇಟ್‌ ಬಳಿ ಅಗ್ರ ಪೂಜೆ ಸಲ್ಲಿಸಲಾಯಿತು.

ಪಾಲಹಳ್ಳಿ ಮಾತ್ರವಲ್ಲದೆ, ಬೆಳಗೊಳ, ಕೆಆರ್‌ಎಸ್‌, ಶ್ರೀರಂಗಪಟ್ಟಣ, ನಗುವನಹಳ್ಳಿ, ಹೊಸಹಳ್ಳಿ, ಆನಂದೂರು, ಮಾತ್ರವಲ್ಲದೆ ಮಂಡ್ಯ, ಮೈಸೂರುಗಳಿಂದಲೂ ಜನರು ಆಗಮಿಸಿದ್ದರು. ಉತ್ಸವದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಪ್ರಸಾದ ವಿನಿಯೋಗ ಸಹ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT