ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರದ್‌ ಪವಾರ್‌ ಪ್ರಧಾನಿಯಾದರೆ ಸಂಭ್ರಮಿಸುವೆ; ಶಿಂದೆ

Last Updated 11 ಜನವರಿ 2014, 12:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಎನ್‌ಸಿಪಿ ವರಿಷ್ಠ ಶರದ್‌ ಪವಾರ್ ದೇಶದ ಪ್ರಧಾನಿಯಾದರೆ ನಾನು ಖುಷಿ ಪಡುತ್ತೇನೆ ಎಂದು ಗೃಹ ಸಚಿವ ಸುನೀಲ್‌ ಕುಮಾರ್‌ ಶಿಂದೆ ಶನಿವಾರ ತಿಳಿಸಿದ್ದಾರೆ.

ಸೋಲಾಪುರದಲ್ಲಿ ನಡೆದ  ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ’ನನ್ನ ರಾಜಕೀಯ ಗುರು ಶರದ್‌ ಪವಾರ್‌  ಪ್ರಧಾನಿಯಾದರೆ ನಾನು ಸಂಭ್ರಮಿಸುತ್ತೇನೆ’ ಎಂದು ತಿಳಿಸಿದರು.

ಪವಾರ್ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದವರು, ವಿದೇಶಿ ಮೂಲದ ಕಾರಣಕ್ಕಾಗಿ ಪಕ್ಷ ತೊರೆದರು. ಅವರು ಯುಪಿಎ ಸರ್ಕಾರದ ಅರ್ಹ ಪ್ರಧಾನಿ ಎಂದು ಶಿಂದೆ ನುಡಿದರು.

ಮುಂಬರುವ ಕಾಂಗ್ರೆಸ್‌ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆಗಳಿರುವ ಬೆನ್ನಲೇ ಶಿಂದೆ ಅವರ ಈ ಹೇಳಿಕೆ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT