ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವಾಗಾರ ಅಗತ್ಯ

Last Updated 1 ಜೂನ್ 2011, 8:30 IST
ಅಕ್ಷರ ಗಾತ್ರ

ನಗರದ ವಿವಿಧೆಡೆ ಪಾಲಿಕೆ ಆಸ್ಪತ್ರೆಗಳಿವೆ. ಅದರಲ್ಲಿ ಅನೇಕವು ಬಡಾವಣೆಗಳಿಗೆ ಮೈಲುಗಟ್ಟಲೇ ದೂರದಲ್ಲಿವೆ. ಅಲ್ಲಿಗೆ ಹೋಗಿ ಬರುವುದೇ ಸಾಹಸದ ಕೆಲಸ. ಆದುದರಿಂದ ಉಳ್ಳವರು ತಮ್ಮ ಮನೆಯ ಬಳಿಯಿರುವ ಖಾಸಗಿ ನರ್ಸಿಂಗ್ ಹೋಂಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.

ಆದರೆ ರೋಗಿಗಳು ಮೊದಲ ದಿವಸ ನರ್ಸಿಂಗ್ ಹೋಂಗೆ ಬಂದಾಗ ಅಲ್ಲಿಯ ಪರಿಚಾರಕರು ಬೀಗರನ್ನು ಎದುರುಗೊಳ್ಳುವವರಂತೆ ಆತ್ಮೀಯತೆಯಿಂದ ಸ್ವಾಗತಿಸುತ್ತಾರೆ. ಆದರೆ ರೋಗಿಗಳು ಮರಣವನ್ನಪ್ಪಿದಾಗ ಅದೇ ನರ್ಸಿಂಗ್ ಹೋಂ ಸಿಬ್ಬಂದಿಯವರು ಆದಷ್ಟು ಜಾಗ್ರತೆ ಇಲ್ಲಿಂದ ಶವವನ್ನು ತೆಗೆದುಕೊಂಡು ಹೋಗಿ ಎಂದು ಸತ್ತವರ ಸಂಬಂಧಿಕರಿಗೆ ಕಿರುಕುಳ ನೀಡುವುದು ಅದನ್ನು ಅನುಭವಿಸಿದವರಿಗೇ ಗೊತ್ತು.

ಇಂತಹ ತೊಂದರೆಯನ್ನು ತಪ್ಪಿಸಲು ಪ್ರತಿಯೊಂದು ದೊಡ್ಡ ನರ್ಸಿಂಗ್ ಹೋಂಗಳಲ್ಲಿ ಶವಗಾರವನ್ನು ಇರುವಂತೆ ಸರ್ಕಾರ ನಿಯಮ ರೂಪಿಸುವುದು ಅಗತ್ಯ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT