ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲಿ ಅಜ್ಜಿ ಮನೆ!

Last Updated 19 ಜುಲೈ 2012, 8:15 IST
ಅಕ್ಷರ ಗಾತ್ರ

ಹೊಳೆನರಸೀಪುರ: ಶಾಲೆಗಳು ಉತ್ತಮವಾಗಿದ್ದರೆ ಮಕ್ಕಳು ಯಾರನ್ನೂ ಕೇಳದೆ ಶಾಲೆಗೆ ಬರುತ್ತಾರೆ. ಪೋಷಕರೂ ಕೂಡ ಇಂತಹ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸ್ವಯಂ ಪ್ರೇರಿತರಾಗಿ ಸೇರಿಸುತ್ತಾರೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಕೆ.ವಿ.ಪ್ರಭಾಕರ್ ಹೇಳಿದರು.

ಬುಧವಾರ ತಾಲ್ಲೂಕಿನ ಕಾಮಸಮುದ್ರ ಶಾಲೆಗೆ ಭೇಟಿ ನೀಡಿದ್ದ ಅವರು, ಶಾಲೆಯ ಮಕ್ಕಳ ಮನೆ, ಅಜ್ಜಿ ಮನೆ, ಪಾಠೋಪಕರಣಗಳನ್ನು ನೋಡಿ ಸಂತಸಪಟ್ಟರು.

ಶಾಲೆಯ ಗೋಡೆಗಳು ಮಕ್ಕಳನ್ನು ಆಕರ್ಷಿಸುತ್ತವೆ. ಅಜ್ಜಿಮನೆ, ಮಕ್ಕಳಮನೆ ಮಕ್ಕಳ ಮನಸ್ಸನ್ನು ಸೂರೆಗೊಳ್ಳುವಂತಿದೆ. ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳಲ್ಲಿ ಅನೇಕರು ಆ ಶಾಲೆಗಳನ್ನು ಬಿಟ್ಟು ಈ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ ಎಂಬುದನ್ನು ತಿಳಿದ ಆಯುಕ್ತರು, ಎಲ್ಲ ಸರ್ಕಾರಿ ಶಾಲೆಗಳೂ ಇದೇ ರೀತಿ ಕ್ರೀಯಾಶೀಲವಾಗಿದ್ದರೆ ನಮ್ಮ ಶಾಲೆಗಳಿಗೆ ಅತಿ ಹೆಚ್ಚಿನ ಹಾಜರಾತಿ ಇರುತ್ತದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ತಿ.ರಾಮಕೃಷ್ಣಯ್ಯ, ಸಹ ಶಿಕ್ಷಕರರನ್ನು ಶ್ಲಾಘಿಸಿದರು. ಉಪ ನಿರ್ದೇಶಕ ಚಾಮರಾಜ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯೋಗೇಶ್, ಡಿ.ಟಿ.ಪುಟ್ಟರಾಜು ಬಿಆರ್‌ಸಿ ಕುಮಾರ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT