ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಿಗೆ ಮುಖಭಂಗ

ಒಕ್ಕಲಿಗರ ಸಂಘದ ಚುನಾವಣೆ: ಮರು ಎಣಿಕೆ
Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘ­ದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಬ್ಬರು ಹಾಲಿ ಮತ್ತು ಒಬ್ಬರು ಮಾಜಿ ಶಾಸಕರು ಸೋಲಿನ ಕಹಿ ಅನುಭವಿಸಿ­ದ್ದಾರೆ.  ಒಬ್ಬ ಶಾಸಕರು ಮಾತ್ರ ಗೆಲುವಿನ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲಾ ಕ್ಷೇತ್ರದಲ್ಲಿ ವಿಧಾನ­ಪರಿಷತ್‌ ಹಾಲಿ ಸದಸ್ಯ ಬಿ. ರಾಮಕೃಷ್ಣ  ಹಾಗೂ ಮಾಜಿ ಶಾಸಕ ಎಂ. ಶ್ರೀನಿವಾಸ್‌ ಹಾಗೂ ಕೊಡಗು ಕ್ಷೇತ್ರ­ದಲ್ಲಿ ಸ್ಪರ್ಧಿಸಿದ್ದ ಅರಕಲಗೂಡು ಶಾಸಕ ಎ. ಮಂಜು  ಅವರು ಸೋಲು ಅನುಭ­ವಿ­ಸಿ­ದ್ದಾರೆ.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್‌. ಬಾಲಕೃಷ್ಣ ಗೆಲುವು ಸಾಧಿಸಿದ್ದಾರೆ.

ಮರು ಎಣಿಕೆ: ಮತ ಎಣಿಕೆಯಲ್ಲಿ ಉಂಟಾದ ಗೊಂದಲಗಳಿಂದ ಬೆಂಗ­ಳೂರು ನಗರ ಮತ್ತು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಮತ­ಗಳ ಮರು ಎಣಿಕೆಯನ್ನು ಮಂಗಳ­ವಾರ ಕೈಗೆತ್ತಿಕೊಳ್ಳಲಾಗಿದೆ.

ಬನಶಂಕರಿಯ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಸೋಮ­ವಾರ ಬೆಳಿಗ್ಗೆ ಆರಂಭವಾಗಿದ್ದ ಮತ ಎಣಿಕೆ ಮಧ್ಯರಾತ್ರಿವರೆಗೂ ನಡೆಸಿ ಸ್ಥಗಿತ­ಗೊಳಿಸಲಾಗಿತ್ತು.

ಮಂಗಳವಾರ ಬೆಳಿಗ್ಗೆ ಮತ ಎಣಿಕೆ ಆರಂಭಿಸಿದಾಗ ಹಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದರು. ಮತ ಎಣಿಕೆ ಏಜೆಂಟರ ಸೋಗಿನಲ್ಲಿ ಹಲವರು ಅತಿ­ಕ್ರಮ ಪ್ರವೇಶ ಮಾಡಿದ್ದು, ಮರು ಎಣಿಕೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಸಭೆ ನಡೆಸಿದ ಚುನಾವಣಾ­ಧಿಕಾರಿಗಳು ಮರು ಎಣಿಕೆ ನಿರ್ಧಾರ ಪ್ರಕಟಿಸಿದರು.

‘ನಾಲ್ಕು ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಮಧ್ಯರಾತ್ರಿವರೆಗೂ ಎಣಿಕೆ ನಡೆಯಿತು.  ಬುಧವಾರ ಸಂಜೆ ವೇಳೆಗೆ ಮತಗಳ ಎಣಿಕೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದು ಚುನಾವಣಾ­ಧಿಕಾರಿ ಬಿ.ಸಿ.ಸತೀಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT