ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಜೊತೆ ರಾಜಕೀಯದ ಅನುಭವ ಗಳಿಸಿ

Last Updated 14 ಆಗಸ್ಟ್ 2012, 6:00 IST
ಅಕ್ಷರ ಗಾತ್ರ

ಹಿರೇಕೆರೂರ: ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಯಲ್ಲಿಯೇ ರಾಜಕೀಯದ ಅನುಭವವನ್ನು ಗಳಿಸಿ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಹಾಗೂ ಭವಿಷ್ಯ ದಲ್ಲಿ ಉತ್ತಮ ಆಡಳಿತಗಾರರಾಗಲು ಶಾಲಾ ಸಂಸತ್ತು ಸಹಕಾರಿ ಎಂದು ಹಂಸಭಾವಿ ಮಹಾಂತ ಸ್ವಾಮಿ ಕಾಲೇಜಿನ ಪ್ರಾಧ್ಯಾಪಕ ಧೀರೇಂದ್ರ ಏಕಬೋಟೆ ಹೇಳಿದರು.

ಹಂಸಭಾವಿ ಗ್ರಾಮದಲ್ಲಿ ಮೃತ್ಯುಂಜಯ ವಿದ್ಯಾ ಪೀಠದ ದುರ್ಗದ ಪ್ರೌಢಶಾಲೆಯಲ್ಲಿ ಶನಿವಾರ ಶಾಲಾ ಸಂಸತ್ತು ಉದ್ಘಾಟಿಸಿ  ಮಾತನಾಡಿದರು. ಮೃತ್ಯುಂಜಯ ವಿದ್ಯಾ ಪೀಠದ ಕಾರ್ಯಾಧ್ಯಕ್ಷ ಪಿ.ವಿ.ಕೆರೂಡಿ ಅಧ್ಯಕ್ಷತೆ ವಹಿಸಿದ್ದರು.  ಆಡಳಿತ ಮಂಡಳಿಯ ಎನ್.ಸಿ.ಅಕ್ಕಿ, ಲಿಂಗರಾಜ ಎಲಿ, ಎಸ್.ವಿ.ಪಾಟೀಲ, ಪ್ರಭಣ್ಣ ಬಳಗಾನೂರ  ಉಪಸ್ಥಿತರಿದ್ದರು.

ನಿವೃತ್ತಿ ಹೊಂದಿದ ಶಿಕ್ಷಕ ಎಚ್. ಎಂ.ಅಂಗಡಿ ಅವರನ್ನು ಸನ್ಮಾನಿಸಲಾಯಿತು.  ಮುಖ್ಯ ಶಿಕ್ಷಕ ಜಿ. ಆರ್.ಕೆಂಚಕ್ಕನವರ ಸ್ವಾಗತಿಸಿ, ಪ್ರಾಸ್ತಾವಿಕ ಮಾತ ನಾಡಿದರು. ದಯಾನಂದ  ಮತ್ತು ವಿ.ಸಿ. ಕೋರಿ ನಿರೂಪಿಸಿದರು.  ಬಣಕಾರ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT