ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಿಕ್ಷಣದಿಂದ ಚಾರಿತ್ರ್ಯ ನಿರ್ಮಾಣ'

Last Updated 6 ಸೆಪ್ಟೆಂಬರ್ 2013, 6:41 IST
ಅಕ್ಷರ ಗಾತ್ರ

ರಾಣೆಬೆನ್ನೂರು: `ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ ತಾನು ಪಡೆಯುವ ಶಿಕ್ಷಣವನ್ನು ಅವಲಂಬಿಸಿರುತ್ತದೆ. ಶಿಕ್ಷಣದ ಗುಣಮಟ್ಟ ನಿರ್ಧಾರವಾಗುವುದು ಶಿಕ್ಷಕರ ವ್ಯಕ್ತಿತ್ವ ಹಾಗೂ ಅವರಲ್ಲಿರುವ ಜ್ಞಾನವನ್ನು ಆಧರಿಸಿರುತ್ತದೆ' ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.

ನಗರದ ಮೃತ್ಯುಂಜಯ ಸಭಾಭವನದಲ್ಲಿ ಹಾವೇರಿ ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಮೂಹ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಗುರುವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರ 125ನೇ ಜನ್ಮ ದಿನಾಚರಣೆ ಅಂಗವಾಗಿ ನಡೆಯುವ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಹಾಗೂ ರಾಜ್ಯ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವ ಮತ್ತು ಪೂಜ್ಯ ಭಾವನೆಯಿಂದ ಕಾಣುವ ವ್ಯವಸ್ಥೆ ನಿರ್ಮಾಣವಾಗಬೇಕು, ಅಂದಾಗ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೆಸರಿನಲ್ಲಿ ಆಚರಿಸುವ ಶಿಕ್ಷಕರ ದಿನಕ್ಕೆ ಅರ್ಥ ಬರುತ್ತದೆ ಎಂದರು.

ಬಿಎಜೆಎಸ್‌ಎಸ್ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎಂ. ಕುಬೇರಪ್ಪ ಅವರು ಮಾತನಾಡಿ, ಶಿಕ್ಷಕರು ಶ್ರದ್ಧೆ, ಪ್ರಾಮಾಣಿಕವಾಗಿ ವೃತ್ತಿ ಬದ್ಧತೆಯಿಂದ ಕರ್ತವ್ಯ ಮಾಡಿದರೆ ಉತ್ತಮ ಪ್ರಜೆಗಳು ಹೊರಹೊಮ್ಮುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ, ರಾಜ್ಯ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮತ್ತು ಸೇವಾ ಅವಧಿಯಲ್ಲಿ ನಿಧನರಾದ ಶಿಕ್ಷಕರ ಕುಟುಂಬದವರನ್ನು ಶಾಸಕರು ಸನ್ಮಾನಿಸಿದರು.

ಜಿಪಂ ಸದಸ್ಯರಾದ ಮಂಜುನಾಥ ಓಲೇಕಾರ, ಶಿವಕುಮಾರ ಮುದ್ದಪ್ಪಳವರ, ಜ್ಯೋತಿ ರಾಮಲಿಂಗಣ್ಣನವರ, ಮಂಜುಳಾ ಅಂಬಲಿ, ಲಲಿತಾ ಜಾಧವ, ತಾಪಂ ಅಧ್ಯಕ್ಷ ಹೂವಕ್ಕ ಹಾಡೋರ, ಉಪಾಧ್ಯಕ್ಷ ಗಣೇಶ ಬಿಲ್ಲಾಳ, ಎಪಿಎಂಸಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ಬಿ.ಎಸ್.ಪಾಟೀಲ, ಆರ್. ಡಿ.ಹೊಂಬರಡಿ, ಆರ್.ಎ. ಪಾಟೀಲ,, ಎಲ್. ಬಿ.ಬಡಿಗೇರ, ಶಸಾಪ ಗೌರವ ಅಧ್ಯಕ್ಷ ವಾಸಣ್ಣ ಕುಸಗೂರ, ಎಸ್.ಬಿ.ಜಕ್ಕರಡ್ಡಿ, ಎಚ್.ಎನ್. ಹೋಬಾನಾಯಕ, ಯು.ಬಿ.ಬಣಕಾರ, ಜೆ.ಎಚ್. ಸಾವಂತಲವರ, ಎಸ್.ಎಚ್. ಮೇಟಿ, ಆರ್.ಎ. ಪಾಟೀಲ, ಕೆ. ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ವೇತಾ ನಾಯಕ ಭರತನಾಟ್ಯ ಪ್ರದರ್ಶಿಸಿದರು.

ಶಾಸಕರ ಮಾದರಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಲಕ್ಷ್ಮಣ ಸ್ವಾಗತಿಸಿದರು. ಎಂ.ಕೆ. ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು. ಎ.ಬಿ.ಚಂದ್ರಶೇಖರ ವಂದಿಸಿದರು.

ಹಾನಗಲ್ ವರದಿ
`ದೇಶದ ಪ್ರಗತಿಗೆ ಶಿಕ್ಷಕರೇ ಭದ್ರ ಬುನಾದಿಯಾಗಿದ್ದು, ಶಿಕ್ಷಕರು ಜವಾಬ್ದಾರಿ ಅರಿತು ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡಬೇಕು' ಎಂದು ಶಾಸಕ ಮನೋಹರ ತಹಸೀಲ್ದಾರ್ ಹೇಳಿದರು.

ಗುರುವಾರ ಇಲ್ಲಿನ ಅಲ್‌ಅರಮಾನ್ ಕಲ್ಯಾಣ ಮಂಟಪದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 125ನೇ ಜನ್ಮದಿನದ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರಾಣೆಬೆನ್ನೂರು ರಾಮಕೃಷ್ಣ ಆಶ್ರಮದ ಪ್ರಕಾಶನಂದಜಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗುಡಗೇರಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಪ್ರೊ.ಎಚ್.ಬಿ.ಪಂಚಾಕ್ಷರಯ್ಯ ಉಪನ್ಯಾಸ ನೀಡಿದರು. ತಾ.ಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ ಸದಸ್ಯ ಪದ್ಮನಾಭ ಕುಂದಾಪುರ, ಮಹಾದೇವಪ್ಪ ಬಾಗಸರ, ಕಸ್ತೂರೆವ್ವ ವಡ್ಡರ, ಅಭಿದಾಬಿ ನಧಾಪ, ತಾ.ಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಸದಸ್ಯರಾದ ವಿಜಯಾ ಹಿರೇಮಠ, ರಾಜೇಶ್ವರಿ ಕಲ್ಲೇರ, ಲಕ್ಷ್ಮವ್ವ ನಿಂಬಣ್ಣನವರ, ಮುಖಂಡರಾದ ವೈ.ಎಫ್.ಕಿತ್ತೂರ, ವಿಷ್ಣುಕಾಂತ ಜಾಧವ, ಪ್ರೊ.ಸಿ.ಎಸ್.ಬಡಿಗೇರ, ಕೆ.ಎಲ್.ದೇಶಪಾಂಡೆ, ದಾನಪ್ಪ ಗಂಟೇರ, ರಾಜಶೇಖರ ಸಾಲಿಮಠ, ತಹಶೀಲ್ದಾರ್ ಡಾ.ನಾಗೇಂದ್ರ ಹೊನ್ನಳ್ಳಿ, ಅಧಿಕಾರಿಗಳಾದ ಬಿ.ವೈ.ಬಂಡಿವಡ್ಡರ, ಬಸವರಾಜ ಡಿ.ಸಿ, ಶಿಕ್ಷಕ ಸಂಘಗಳ ಪದಾಧಿಕಾರಿಗಳಾದ ಎನ್.ಟಿ.ದುರಗಣ್ಣನವರ, ಎ.ವಿ.ಹನುಮಾಪೂರ, ಆರ್.ಟಿ.ವೇದಂಭಟ್, ಜಿ.ಸಿ.ಕಾಳಂಗಿ ಮತ್ತಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಮತ್ತು ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ಸ್ವಾಗತಿಸಿದರು. ಚಲ್ಲಾಳ ನಿರೂಪಿಸಿದರು.

ಬ್ಯಾಡಗಿ ವರದಿ
ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಶಾಸಕ ಬಸವರಾಜ ಶಿವಣ್ಣವರ ಉದ್ಘಾಟಿಸಿ ಮಾತನಾಡಿದರು.

ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮತನಾಡಿ ಮಾತನಾಡಿದರು. ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷೆ ಚಿನ್ನಮ್ಮ ಫಾಸಿ ವಹಿಸಿದ್ದರು. ಜಿ.ಪಂ ಸದಸ್ಯರಾದ ವಿರೂಪಾಕ್ಷಪ್ಪ ಬಳ್ಳಾರಿ,  ಎಸ್.ಎನ್.ಮಾತನವರ, ಎಪಿಎಂಸಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಶಿವಪ್ಪ ಅಳಲಗೇರಿ, ಸದಸ್ಯ ಎಸ್.ಸಿ.ಶಿಡೇನೂರ, ರಮೇಶ ಸುತ್ತಕೋಟಿ, ತಾ.ಪಂ ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಸದಸ್ಯ ಮಲ್ಲಿಕಾರ್ಜುನ ಕರಲಿಂಗಪ್ಪನವರ, ಕಾರ್ಯನಿರ್ವಾಹಕ ಅಧಿಕಾರಿ ಎಸ್. ಆರ್.ಪಾಟೀಲ, ಪುರಸಭೆ ಸದಸ್ಯರಾದ ಮುರಿಗೆಪ್ಪ ಶೆಟ್ಟರ್, ಮಂಜುನಾಥ ಭೋವಿ, ದುರ್ಗೆಶ ಗೋಣೆಮ್ಮನವರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಪ್ರಸನ್ನಕುಮಾರ, ಮುಖಂಡರಾದ ಹುಸೇನಸಾಬ್ ದೊಡ್ಡಮನಿ, ರಾಮಣ್ಣ ಉಕ್ಕುಂದ, ಮೋಹನ ಬಿನ್ನಾಳ, ದಾನಪ್ಪ ಚೂರಿ, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ನಿವೃತ್ತ ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕ್ಷೇತ್ರ ಸಮನ್ವಯಾಧಿಕಾರಿ ಸು.ಸುಮಾ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ  ಬಿ.ಎಚ್.ಎನ್ ರಾವಳ ವಂದಿಸಿದರು.
ಸಿ.ಆರ್.ಬಳ್ಳಾರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೊಟೆಬೆನ್ನೂರು: ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮದ ಸಿ.ಆರ್.ಬಳ್ಳಾರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಘಟಕದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ.ಇಡಿ ಕಾಲೇಜು ಪ್ರಾಚಾರ್ಯ ಎಂ.ಸುರೇಶ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎನ್.ಎಸ್.ಚೂರಿ ವಹಿಸಿದ್ದರು. ಉಪನ್ಯಾಸಕ ಕೆ.ಪಿ.ಬ್ಯಾಡಗಿ ಮಾತನಾಡಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಎ.ಬಿ.ಹಣಗಿ, ಎ.ಎಸ್.ದೇವಿಹೊಸೂರ, ಎಂ.ಎ.ಮುಲ್ಲಾ, ಬಿ.ಎನ್.ಹುರಳಿ, ಬಿ.ಎಸ್.ಚಿನ್ನಿಕಟ್ಟಿ, ಎಂ.ಆರ್. ಬ್ಯಾಡಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಶ್ರುತಿ ಕುಮ್ಮಣ್ಣನವರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಜ್ಯೋತಿ ಪಾಟೀಲ ಸ್ವಾಗತಿಸಿದರು. ಪೂರ್ಣಿಮಾ ಕಾಗೇರ ನಿರೂಪಿಸಿದರು. ಶೇಖರ ನಾಯಕ ವಂದಿಸಿದರು.

ಅಕ್ಕಿಆಲೂರ ವರದಿ 
ಇಲ್ಲಿಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 124 ನೇ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಗುರುವಾರ ಮುಂಜಾನೆ ಆಯೋಜಿಸಲಾಗಿತ್ತು.ಸಮಾರಂಭದಲ್ಲಿ ಮುಖ್ಯಶಿಕ್ಷಕ ಎಲ್.ಬಿ.ಪೂಜಾರಿ ಮಾತನಾಡಿದರು.

ಶಿಕ್ಷಕರಾದ ಎಸ್.ಎಸ್.ಪೀರಜಾದೆ, ಆರ್. ಆರ್.ಗುಡಿಸಾಗರ, ಎ.ಜಿ.ಮಣ್ಣಮ್ಮನವರ, ನಾಜಿಯಾ ತಾಜ್, ಎ.ಎಂ.ಇನಾಂದಾರ, ಜಬಿವುಲ್ಲಾ ಕಾಶಂಬಿ ಸೇರಿದಂತೆ ಇತರರು ಈ ವೇಳೆ ಭಾಗವಹಿಸಿದ್ದರು. ರಬಿಯಾ ಚಾವೂಸ್ ಪ್ರಾರ್ಥಿಸಿದರು. ಕರಿಷ್ಮಾ ಸಾವಿಕೇರಿ ಸ್ವಾಗತಿಸಿದರು. ಸಬಿಯಾ ಸರಖಾಜಿ ನಿರೂಪಿಸಿದರು. ಜಾಕೀರ ಶೇಷಗಿರಿ ವಂದಿಸಿದರು.   

ಸರ್ಕಾರಿ ಮಾದರಿ ಕೇಂದ್ರ ಶಾಲೆ: ಇಲ್ಲಿನ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ಮಾತನಾಡಿದರು.

ಮುಖ್ಯಶಿಕ್ಷಕ ಜಿ.ಟಿ.ಹಂಚಿನಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಕರಾದ ಜಿ.ಎಸ್. ಭಟ್, ಎನ್.ಆರ್.ಗಾಳಿ, ಬಿ.ಎನ್.ಬಡಿಗೇರ,  ಎನ್.ಸಿ.ನಾಯ್ಕ, ಜಿ.ಎಫ್.ಹಂಚಿನಮನಿ ಈ ವೇಳೆ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಶಿಕ್ಷಕರಿಗೆ ನನೆಪಿನ ಕಾಣಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT