ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ

Last Updated 18 ಜೂನ್ 2011, 7:30 IST
ಅಕ್ಷರ ಗಾತ್ರ

ರೋಣ: `ದೇಶದಲ್ಲಿ ಮಾನವ ಸಂಪತ್ತನ್ನು ಅಭಿವೃದ್ದಿಗೊಳಿಸುವಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತಿದೆ~ ಎಂದು ಎಂದು ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಹೇಳಿದರು. ಇಲ್ಲಿಯ ಶರಣರ ಶಿಕ್ಷಣ ಸಮಿತಿಯ ನ್ಯೂಲಿಟಲ್ ಫ್ಲಾವರ ಶಾಲೆಯಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

`ಮುಂದುವರಿದ ರಾಷ್ಟ್ರಗಳಲ್ಲಿ ಪ್ರತಿಯೊಬ್ಬರು ಶಿಕ್ಷಣ ಹೊಂದಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ನಿರ್ದಿಷ್ಟ ಆದಾಯ ಹೊಂದಿ ರಾಷ್ಟ್ರಕ್ಕೆ ತಮ್ಮದೆ ಆದ ಕೂಡುಗೆಯನ್ನು ಸಲ್ಲಿಸುತ್ತಿದ್ದಾರೆ. ಈ ರೀತಿಯ ಸ್ವಾವಲಂಬಿ ಗುಣವನ್ನು ಭಾರತೀಯರು ಬೆಳಸಿಕೊಂಡಾಗ ಭಾರತ ವಿಶ್ವದ ಆಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾತ್ತದೆ~ ಎಂದು ಅವರು ಅಭಿಪ್ರಾಯಪಟ್ಟರು.

`ಶರಣರ ಶಿಕ್ಷಣ ಸಮಿತಿಯು ಪಟ್ಟಣದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ವಿಧಾನ ಪರಿಷತ್ ಸದಸ್ಯರು ಶಿಕ್ಷಣ ಸಮಿತಿಗೆ ನೀಡಿದ ರೂ. 2ಲಕ್ಷ ಅನುದಾನದ ಮೊತ್ತವನ್ನು ವಿವಿಧ ಶೈಕ್ಷಣಿಕ ಅಭಿವೃದ್ದಿ ಕಾರ್ಯಗಳಿಗಾಗಿ ಬಳಸುವ ಉದ್ದೇಶ ಹೊಂದಲಾಗಿದೆ~ ಎಂದು ಅಧ್ಯಕ್ಷತೆ ವಹಿಸಿದ್ದ ಡಾ.ಎಸ್.ಬಿ.ಲಕ್ಕೋಳ ಹೇಳಿದರು.

ಜಗದೀಶಪ್ಪ ಹುಗ್ಗಿ, ಬಸವರಾಜ (ರಾಜಣ್ಣ) ಸುಂಕದ, ಮುತ್ತಣ್ಣ ಸಂಗಳದ, ರಾಜಣ್ಣ ಹೂಲಿ, ಶರಣಪ್ಪ ಕೊಟಗಿ, ಎಫ್.ಎಸ್. ಕುರಡಗಿ ಮುಂತಾದವರು ಹಾಜರಿದ್ದರು. ಬಳಗಾನೂರ ಸ್ವಾಗತಿಸಿದರು, ಎಸ್.ಪಿ. ಬಳಿಗಾರ ನಿರೂಪಿಸಿ,ವಂದಿಸಿದರು.

ಕೋಟುಮಚಗಿ: ಆಯುಷ್ ಜಾಗೃತಿ ಕಾರ್ಯಕ್ರಮ
ಗದಗ: ತಾಲ್ಲೂಕಿನ ಕೋಟುಮಚಗಿ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಜಿಲ್ಲಾ ಆಯುಷ್ ಕಾರ್ಯಾಲಯ ಹಾಗೂ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯುಷ್ ಜಾಗೃತಿ ಕಾರ್ಯಕ್ರಮ ಜರುಗಿತು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಲಲಿತಾ ಅಣ್ಣಿಗೇರಿ ಅವರು ಐಇಸಿ ಬ್ಯಾನರ್, ಪೋಸ್ಟರ್ ಹಾಗೂ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಡಾ. ಬಿ.ಎಂ. ಲೋಕಾಪುರಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT