ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಹಟ್ಟಿ: ರಂಗೇರಿದ ಚುನಾವಣಾ ಕಣ

ಕಾಂಗ್ರೆಸ್, ಬಿಎಸ್‌ಆರ್ ಕಾಂಗ್ರೆಸ್, ಕೆಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
Last Updated 18 ಏಪ್ರಿಲ್ 2013, 13:02 IST
ಅಕ್ಷರ ಗಾತ್ರ

ಶಿರಹಟ್ಟಿ: ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಎಸ್‌ಆರ್ ಪಕ್ಷದ ಅಭ್ಯರ್ಥಿ ಜಯಶ್ರೀ ಮಹಾಂ ತೇಶ ಹಳ್ಳೆಪ್ಪನವರ, ಕಾಂಗ್ರೆಸ್ ಪಕ್ಷದ ಹುರಿಯಾಳು ರಾಮಕೃಷ್ಣ ಶಿದ್ಲಿಂಗಪ್ಪ ದೊಡ್ಡಮನಿ ಮತ್ತು ಕೆಜಿಪಿ  ಅಭ್ಯರ್ಥಿ ಶೋಭಾ ಲಮಾಣಿ ತಮ್ಮ ಅಪಾರ ಬೆಂಬಲಿಗರೊಡನೆ ಬುಧವಾರ ಶಿರಹಟ್ಟಿಯ ತಹಶೀಲ್ದಾರ್ ಕಾರ್ಯಾ ಲಯದಲ್ಲಿ ನಾಮಪತ್ರ ಸಲ್ಲಿಸಿದರು.

ಲಕ್ಷ್ಮಣ ಈಶ್ವರಪ್ಪ ಲಮಾಣಿ, ದುರುಗಪ್ಪ ಸಾರೆಪ್ಪ ಪೂಜಾರ, ಶಿವಪ್ಪ ಫಕ್ಕೀರಪ್ಪ ಕೊರದಾಳ, ರಾಮಪ್ಪ ಹನಮಂತಪ್ಪ ಬಂಡಿವ್ಡರ, ಉಡಚಪ್ಪ ಕಾಕಪ್ಪ ದಂಡಾಪೂರ, ಮತ್ತು ಶಿವಪ್ಪ ಹರಿಯಪ್ಪ ಪವಾರ ಪಕ್ಷೇತರ ಅಭ್ಯರ್ಥಿಗಳು ಸಹ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಫಕೀರೇಶ್ವರ ಮಠದಿಂದ ಆರಂಭ ಗೊಂಡ ಕಾಂಗ್ರೆಸ್ ಬೆಂಬಲಿಗರ ಮೆರವಣಿಗೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ತಹಶೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿತು.
 
ಕಾಂಗ್ರೆಸ್ ಪಕ್ಷದ ಪರವಾಗಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ವಾಸಣ್ಣ ಕುರಡಗಿ, ಯು.ಎನ್. ಹೊಳಲಾಪೂರ, ಲಕ್ಷ್ಮಣ ಗೌಡ ಪಾಟೀಲ, ಟಿ. ಈಶ್ವರ, ಪಟ್ಟಣ ಪಂಚಾಯಿತಿ ಸದಸ್ಯ ಎಚ್.ಡಿ. ಮಾಗಡಿ. ರಾಮಣ್ಣ ಲಮಾಣಿ, ಲಿಂಗರಾಜಗೌಡ ಪಾಟೀಲ, ಶಿವಣ್ಣ ಗರಗ, ಫಕೀರೇಶ ಮ್ಯಾಟಣ್ಣವರ, ಅಮರೇಶ ತೆಂಬದಮನಿ, ಮಂಜುನಾಥ ಘಂಟಿ  ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕರ್ತರ ಹರ್ಷೋದ್ಘಾರ:  ನಾಮಪತ್ರ ಸಲ್ಲಿಸುವ ವೇಳೆ ಆಯಾ ಪಕ್ಷದವರಿಂದ ವಿಶೇಷ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ರಸ್ತೆಯುದ್ದಕ್ಕೂ ಯುವಕರಿಂದ ನೃತ್ಯ, ಜಾಂಜಮೇಳ, ಲಂಬಾಣಿ ಮಹಿಳೆಯರ ಕೋಲಾಟ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಯುವ ಜನರು,  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT