ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀತ ಗಾಳಿಗೆ 16 ಮಂದಿ ಬಲಿ

Last Updated 5 ಜನವರಿ 2013, 11:13 IST
ಅಕ್ಷರ ಗಾತ್ರ

ಲಖನೌ (ಐಎಎನ್‌ಎಸ್):  ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶದಲ್ಲಿ ತೀವ್ರ ಶೀತ ಗಾಳಿ ಬೀಸುತ್ತಿರುವ ಪರಿಣಾಮ ಈವರೆಗೆ ಕನಿಷ್ಟ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದರು.

ಶೀತ ಹವಾಮಾನದಿಂದಾಗಿ ಸೊನೆಭದ್ರಾ, ಬಾರಬಂಕಿ ಮತ್ತು ಬಲ್ಲಿಯಾ, ಜಿಲ್ಲೆಗಳಲ್ಲಿ ಒಂಬತ್ತು ಮಂದಿ ಹಾಗೂ ಕುಶಿಂಗರ್, ಹತರಾಸ್ ಮತ್ತು ಮಿರ್ಜಾಪುರ ನಗರಗಳಲ್ಲಿ ಮೂರು ಜನರು ಸಾವನ್ನಪ್ಪಿರುವ ಬಗ್ಗೆ ರಾಜ್ಯ ಸರ್ಕಾರದ ಅಧಿಕಾರಿಗಳು ದೃಢಪಡಿಸಿದರು.

ರಾಜ್ಯದಲ್ಲಿ ಶೀತ ಹವಾಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜ. 13ರವರೆಗೆ ಎಂಟನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಸರ್ಕಾರಿ, ಅರೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರವು ಆದೇಶ ಹೊರಡಿಸಿದೆ.

ಸಂಚಾರ ಅಸ್ತವ್ಯಸ್ತ;
ರಾಜ್ಯದ ಪಶ್ಚಿಮ ಭಾಗದಲ್ಲಿ ಅತಿಯಾದ ಮಂಜು ಕವಿದ ವಾತಾವರಣ ಏರ್ಪಟ್ಟಿದ್ದು, ರೈಲು, ವಿಮಾನ ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT