ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಕಸಭೆಯಲ್ಲಿ ಸಭ್ಯತೆ ಮರೆತ ಒಬಾಮ!

ಹಲ್ಲು ಕಿರಿದು ಫೋಟೊ ಕ್ಲಿಕ್ಕಿಸಿಕೊಂಡ ನಾಯಕರು
Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸೊವೆಟೊ (ಎಎಫ್‌ಪಿ): ದಕ್ಷಿಣ ಆಫ್ರಿ­ಕಾದ ದಂತಕಥೆ ನೆಲ್ಸನ್‌ ಮಂಡೇಲಾ  ಗೌರ­ವಾರ್ಥ  ನಡೆದ ಶೋಕಸಭೆಯಲ್ಲಿ ಅಮೆ­ರಿಕ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಇತರ ನಾಯಕರು ತಮ್ಮ ಹುದ್ದೆ­ಯ ಘನತೆ  ಹಾಗೂ ಔಚಿತ್ಯ ಮರೆತು ಲಘು­ವಾಗಿ  ವರ್ತಿಸುವ ಮೂಲಕ ಹೊಸ ವಿವಾದಕ್ಕೆ ಸಿಲು­ಕಿದ್ದಾರೆ.

ನೆಲ್ಸನ್‌  ಮಂಡೇಲಾ ಅವರ ಗೌರ­ವಾರ್ಥ ಮಂಗಳವಾರ ಜೋಹಾನ್ಸ್‌­ಬರ್ಗ್‌ನಲ್ಲಿ  ನಡೆದ ಸಂಸ್ಮರಣಾ ಕಾರ್ಯ­­­ಕ್ರಮ­ದಲ್ಲಿ ಭಾಗವಹಿಸಿದ್ದ ಅಮೆ­ರಿಕ ಅಧ್ಯಕ್ಷ ಒಬಾಮ ತಮ್ಮ ಪಕ್ಕದಲ್ಲಿ ಕುಳಿತಿದ್ದ ಡೆನ್ಮಾರ್ಕ್‌ ಮತ್ತು ಬ್ರಿಟನ್‌ ಪ್ರಧಾನಿಗಳ ಜತೆಗೂಡಿ ಹಲ್ಲು ಕಿರಿ­ಯುತ್ತಾ ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದರು.
ಈ ದೃಶ್ಯವನ್ನು ಎಎಫ್‌ಪಿ ಛಾಯಾ­ಗ್ರಾಹಕ  ರಾಬರ್ಟ್‌ ಸ್ಮಿತ್‌ ಸೆರೆ ಹಿಡಿದಿ­ದ್ದರು.  ಈ ಚಿತ್ರ ಸದ್ಯ ಅಂತ­ರ್ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು ಭಾರಿ ಚರ್ಚೆ ಮತ್ತು ವಿವಾದಕ್ಕೆ ಗ್ರಾಸವಾಗಿದೆ.

ನಡೆದದ್ದು ಏನು?: ಮಂಡೇಲಾ ಸಂತಾಪ ಸಭೆಯ ವೇದಿಕೆಯಲ್ಲಿ ಒಬಾಮ ಪಕ್ಕ ಕುಳಿತಿದ್ದ ಡೆನ್ಮಾರ್ಕ್‌ ಪ್ರಧಾನಿ ಹೆಲ್ಲೆ ಥಾರ್ನಿಂಗ್‌ ಸ್ಮಿತ್‌ ತಮ್ಮ ಸ್ಮಾರ್ಟ್‌ಫೋನ್‌ (ಮೊಬೈಲ್‌) ತೆಗೆದು ಫೋಟೊ ತೆಗೆ­ಯಲು ಮುಂದಾದರು. ಆಗ  ಥಾರ್ನಿಂಗ್‌­ ಸ್ಮಿತ್‌ ಅಕ್ಕಪಕ್ಕ ಕುಳಿತಿದ್ದ ಒಬಾಮ ಮತ್ತು ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮರಾನ್‌ ತಾವೂ ಫೋಟೊ ತೆಗೆಸಿಕೊಳ್ಳಲು ಹಲ್ಲು ಕಿರಿ­ಯುತ್ತ ಪೋಸ್‌ ನಿಡಿದರು. 

ಥಾರ್ನಿಂಗ್‌ ಸ್ಮಿತ್‌ ಅವರೊಂದಿಗೆ   ತಾವೂ ಮೊಬೈಲ್‌ ಹಿಡಿದುಕೊಂಡ ಒಬಾಮ  ಒಟ್ಟಾಗಿ ತಮ್ಮ ಫೋಟೊ ಕ್ಲಿಕ್ಕಿ­ಸಿ­ಕೊಂಡರು. ಶೋಕಸಭೆ ಎಂಬುವುದನ್ನು ಮರೆತ ಮೂವರೂ ನಾಯಕರು ತಮ್ಮ ಸ್ಥಾನಗಳ ಘನತೆ, ಗೌರವ ಮರೆತು ನಗುತ್ತ ಫೋಟೊ ಕ್ಲಿಕ್ಕಿಸಿಕೊಂಡರು.

ಇದೇ ವೇಳೆ ಒಬಾಮ ಪಕ್ಕ ಅತ್ಯಂತ ಗಂಭೀರವಾಗಿ ಕುಳಿತಿದ್ದ ಅವರ ಪತ್ನಿ ಮಿಷೆಲ್‌  ಸಭಾ ಮರ್ಯಾದೆಗೆ ಕುಂದು ಬಾರ­ದಂತೆ ಘನತೆ, ಗೌರವದಿಂದ ವರ್ತಿಸಿದರು.

ಅಂತರ್ಜಾಲ ತಾಣಗಳಲ್ಲಿ ಹರಿದಾ­ಡು­ತ್ತಿರುವ ಈ ಚಿತ್ರ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಮೆರಿಕ ಮತ್ತು ಬ್ರಿಟನ್‌ ಸೇರಿದಂತೆ ಅನೇಕ ದೇಶಗಳ ಪ್ರಮುಖ ಪತ್ರಿಕೆಗಳ ಮುಖಪುಟವನ್ನು ಅಲಂಕರಿಸಿದೆ. ಮೂವರು ನಾಯಕರ ವರ್ತನೆಯನ್ನು ಅನೇಕರು ತರಾಟೆಗೆ ತೆಗೆದುಕೊಂಡಿದ್ದು, ಛೀಮಾರಿ ಹಾಕಿದ್ದಾರೆ.

ಅಮೆರಿಕ ಮಾಧ್ಯಮಗಳು, ಕ್ಯೂಬಾ ನಾಯಕ ರೌಲ್‌ ಕ್ಯಾಸ್ಟ್ರೊ ಅವರ ಜೊತೆ ಹಸ್ತಲಾಘವ ಮಾಡುತ್ತಿರುವ ಒಬಾಮ ಚಿತ್ರಕ್ಕಿಂತ ಹೆಚ್ಚು ಪ್ರಾಧಾನ್ಯವನ್ನು  ಈ ಚಿತ್ರಕ್ಕೆ ನೀಡಿವೆ. ಆದರೆ, ಅಮೆರಿಕ, ಡೆನ್ಮಾರ್ಕ್‌ ಅಥವಾ ಬ್ರಿಟನ್‌ ಸರ್ಕಾ­ರಗಳು ಈ ಬಗ್ಗೆ  ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.

ಪ್ರಿಟೋರಿಯಾ ತಲುಪಿದ ಅಂತಿಮ ಯಾತ್ರೆ
ಪ್ರಿಟೋರಿಯಾ (ಎಎಫ್‌ಪಿ
): ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ದಕ್ಷಿಣ ಆಫ್ರಿಕಾದ ದಂತಕಥೆ ನೆಲ್ಸನ್‌ ಮಂಡೇಲಾ ಅವರ ಅಂತಿಮಯಾತ್ರೆ ಬುಧವಾರ ಪ್ರಿಟೋರಿಯಾ ನಗರ ತಲುಪಿತು.

ಸಕಲ ಸರ್ಕಾರಿ ಗೌರವಗಳೊಂದಿಗೆ ಮೆರವಣಿಗೆಯಲ್ಲಿ ತರಲಾದ ಪಾರ್ಥಿವ ಶರೀರವನ್ನು ಸಾರ್ವಜ­ನಿಕರ ದರ್ಶನಕ್ಕಾಗಿ ಇಡಲಾಗಿದೆ.
ಮಂಡೇಲಾ ಜೀವನದ ಬಹು­ಮುಖ್ಯ ಘಟನೆಗಳಿಗೆ ಸಾಕ್ಷಿಯಾ­ಗಿದ್ದ ಪ್ರಿಟೋರಿಯಾದಲ್ಲಿ  ದರ್ಶನ­ಕ್ಕಾಗಿ ಕಾದಿದ್ದ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದರು.

1962ರಲ್ಲಿ ಮಂಡೇಲಾ ಅವರನ್ನು ಇರಿಸಲಾಗಿದ್ದ ಸೆಂಟ್ರಲ್‌ ಜೈಲ್‌, 27 ವರ್ಷ ಕಾರಾಗೃಹ ವಾಸ ಶಿಕ್ಷೆ ನೀಡಿದ ನ್ಯಾಯಾಲಯ ಕಟ್ಟಡದ ಎದುರಿನಿಂದ ಅಂತಿಮ ಯಾತ್ರೆ ತೆರಳಲಿದೆ.  ಮೂರು ದಿನಗಳ ಕಾಲ ಮಂಡೇಲಾ ಪಾರ್ಥಿವ ಶರೀರವನ್ನು ಇಲ್ಲಿ ಇರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT