ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯದ ಎರಡು ಆಸನಗಳು ಸೇರಿದಂತೆ ಪಾಕಿಸ್ತಾನ ವಿಮಾನ ಬರ್ತಿ

Last Updated 15 ಫೆಬ್ರುವರಿ 2012, 9:05 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಐಎಎನ್ಎಸ್): ~ವಿಮಾನದ ಆಸನಗಳು ಬರ್ತಿಯಾದರೇನು, ಶೌಚಾಲಯದಲ್ಲಿರುವ ಆಸನಗಳು ಇವೆಲ್ಲಾ?~ ಬಹುಷಃ ಹೀಗೆಂದು ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನಯಾನ (ಪಿಐಎ) ಕ್ಯಾಪ್ಟನ್ ಬ್ಲಿತೆಲಿ ಯೋಚಿಸಿದ್ದರಿಂದಲೇ, ಎಲ್ಲಾ ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರಿ ಲಾಹೋರ್-ಕರಾಚಿ ನಡುವೆ ಚಲಿಸುವ ವಿಮಾನದಲ್ಲಿ ಶೌಚಾಲಯದ ಎರಡು ಆಸನಗಳೂ ಪ್ರಯಾಣಿಕರಿಂದ ತುಂಬಿತ್ತು.

ಕಳೆದ ವರ್ಷ ಡಿಸೆಂಬರ್ ನಲ್ಲಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರು ಸರ್ಕಾರಿ ಸ್ವಾಮ್ಯ ವಿಮಾನ ಯಾನ ಸಂಸ್ಥೆಯೊಂದು ಸಲ್ಲಿಸಿದ್ದ ವ್ಯವಹಾರ ಯೋಜನೆಯೊಂದನ್ನು ತಿರಸ್ಕರಿಸಿ, ~ನಷ್ಟದಲ್ಲಿರುವ ಪಿಐಎ ತನ್ನ ಕಷ್ಟಗಳನ್ನು ತೊಡೆದುಹಾಕಲು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವ್ಯವಹರಿಸಬೇಕು~ ಎಂದಿದ್ದರು.

ಪ್ರಧಾನಿಯ ಅವರ ಈ ಸಲಹೆಯೇ ಪಿಕೆ 303 ವಿಮಾನದ ಶೌಚಾಲಯದ ಆಸನಗಳೂ ಸೇರಿದಂತೆ ವಿಮಾನ ಬರ್ತಿಯಾಗಲು ಕಾರಣ ಇರಬಹುದು ಎಂದು ಪಾಕಿಸ್ತಾನದ ಮಾಧ್ಯಮ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT