ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಂಠದತ್ತ ಒಡೆಯರ್‌ಗೆ ಶ್ರದ್ಧಾಂಜಲಿ

ಕುಷ್ಟಗಿ: ಟಿಪ್ಪುಸುಲ್ತಾನ ಜನ್ಮದಿನಾಚರಣೆ ರದ್ದು
Last Updated 12 ಡಿಸೆಂಬರ್ 2013, 8:31 IST
ಅಕ್ಷರ ಗಾತ್ರ

ಕುಷ್ಟಗಿ: ಮೈಸೂರಿನ ಮಹಾರಾಜ ವಂಶಸ್ಥರ ಕೊನೆಯಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ನಿಧನಕ್ಕೆ ಪಟ್ಟಣದ ಹಜರತ್‌ ಟಿಪ್ಪುಸುಲ್ತಾನ ನವಜವಾನ ಸಮಿತಿ ಶೋಕ ವ್ಯಕ್ತಪಡಿಸಿದೆ.

ಸ್ಥಳೀಯ ಶಾದಿಮಹಲ್‌ದಲ್ಲಿ ಸಮಿತಿ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು, ಒಡೆಯರ್‌ ಅವರ ಭಾವಚಿತ್ರಕ್ಕೆ ಪುಷ್ಪಸಮರ್ಪಿಸಿ ಮೌನ ಆಚರಿಸಿದರು.

ಒಡೆಯರ್‌ ನಿಧನ ಮತ್ತು ರಾಜ್ಯದಲ್ಲಿ ಶೋಕಾಚರಣೆ ಹಿನ್ನೆಲೆ­ಯಲ್ಲಿ ಟಿಪ್ತುಸುಲ್ತಾನ ಅವರ 264ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ನಡೆಯ­ಬೇಕಿದ್ದ ಬೃಹತ್‌ ಸಮಾರಂಭ ಮತ್ತು ಮೆರವಣಿಗೆಯನ್ನು ರದ್ದುಪಡಿಸಿ ಸಂತಾಪ ಸೂಚಕ ಸಭೆಯನ್ನಾಗಿ ಪರಿವರ್ತಿಸಲಾಯಿತು.

ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ. ಅಸ್ಲಾಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾವತಿ ಮುಸ್ತಫಾ ಮೌಲಾಸಾಬ್‌, ವಜೀರ ಅಲಿ ಗೋನಾಳ, ನಜೀರಸಾಬ್‌ ಚಳಗೇರಿ, ಫಾರುಕ್‌ ಚೌಧರಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಶಿಧರ ಕವಲಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಮೀನುದ್ದೀನ ಮುಲ್ಲಾ, ಮಾಜಿ ಅಧ್ಯಕ್ಷ ಎಂ.ಡಿ. ಮಸೂದ್‌ ಗಿರಣಿ, ಪರಶುರಾಮ ನಾಗ­ರಾಳ, ಟಿಪ್ಪು ಸುಲ್ತಾನ ಸಮಿತಿ ಅಧ್ಯಕ್ಷ ಗೌಸ್‌ಪಾಕ್‌ ಹಾಗೂ ಸಮಿತಿಯ ಇತರರು ಶ್ರದ್ಧಾಂಜಲಿ ಸಭೆಯಲ್ಲಿದ್ದರು.

ಗಂಗಾವತಿ ವರದಿ
  ಮೈಸೂರಿನ ಯದು ವಂಶದ ಕೊನೆಯ ಕುಡಿ ಶ್ರೀಕಂಠ ದತ್ತ ಒಡೆಯರ್‌ ನಿಧನದ ಹಿನ್ನೆಲೆ ರಾಜ್ಯ ಸರ್ಕಾರ ಬುಧವಾರ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆ ಕಾಲೇಜು ಮತ್ತು ಕಚೇರಿಗಳಿಗೆ ರಜೆ ಘೋಷಿಸಿತ್ತು.

ಸರ್ಕಾರದ ವಿವಿಧ ಇಲಾಖೆಯ ಕಚೇರಿಗಳು ಹಾಗೂ ಶಾಲಾ ಕಾಲೇಜು ಬಿಟ್ಟರೆ ನಗರದ ಬಹುತೇಕ ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಆಡಳಿತ ವ್ಯಾಪ್ತಿಗೆ ಒಳಪಡುವ ಹಣಕಾಸು ಸಂಸ್ಥೆ ಮತ್ತು ಕಚೇರಿಗಳು ದೈನಂದಿನಂತೆ ಕಾರ್ಯ ನಿರ್ವಹಿಸಿದವು.

ಸ್ಟೇಟ್‌ಬ್ಯಾಂಕ್‌ ಆಫ್‌ ಮೈಸೂರು ಸೇರಿದಂತೆ ಬಹುತೇಕ ಹಣಕಾಸು ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ರಾಜ್ಯ ಸರ್ಕಾರ ವ್ಯಾಪ್ತಿಯ ಬಹುತೇಕ ಕಚೇರಿಗಳಲ್ಲಿ ಒಡೆಯರ್‌ ಮತ್ತು ಮಂಡೇಲಾರ ನಿಧನಕ್ಕೆ ಸಂತಾಪ ಸೂಚಕವಾಗಿ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿತ್ತು.

ಎನ್‌ಐ ಕಾಯ್ದೆ: ‘ಕೆಲಬಾರಿ ರಾಜ್ಯ ಸರ್ಕಾರದ ರಜೆ ಘೋಷಣೆ ಆದೇಶದ ಮಧ್ಯೆಯೂ ‘ಪರಾಕಾಮ್ರೆ ಪತ್ರಗಳ’ ಕಾಯ್ದೆಯಡಿ ಕೋರ್ಟ್‌ ಕಚೇರಿಗಳ ಕಲಾಪ ನಡೆಸಬೇಕಾಗುತ್ತದೆ. ಬುಧವಾರವೂ ಇದೇ ಕಾಯ್ದೆಯಡಿ ಕೋರ್ಟ್‌ ಕಲಾಪ ನಡೆಯಿತು’ ಎಂದು ವಕೀಲ ಸುಭಾಷ ಸಾದರ ಹೇಳಿದರು.

‘ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಇರುವ ಕಾರ್ಖಾನೆ, ಕಾರ್ಮಿಕರ ನಡುವೆ ಕೆಲ ಬಾರಿ ನಡೆಯುವ ಷರತ್ತು ಬದ್ಧ ‘ಸಂಧಾನ ಸಾಧಾನ ಕಾರ್ಯ’ (ಇನ್‌ಸ್ಟ್ರುಮೆಂಟಲ್‌ ನೆಗೋಶಿಬಲ್‌ ಆ್ಯಕ್ಟ್‌) ಕಾಯ್ದೆ ಅನ್ವಯ ರಾಜ್ಯ ಸರ್ಕಾರದ ಆದೇಶಗಳು ಅನ್ವಯಿಸಲಾರವು’ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಬಿ.ಸಿ. ಐಗೋಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT