ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮಂತರ ಪಟ್ಟಿಯಿಂದ ಸೋನಿಯಾ ಹೆಸರು ಕೈಬಿಟ್ಟ ನಿಯತಕಾಲಿಕೆ

Last Updated 3 ಡಿಸೆಂಬರ್ 2013, 12:45 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಬ್ರಿಟನ್ ರಾಣಿಗಿಂತ ಅಧಿಕ ಸಂಪತ್ತು ಹೊಂದಿದ್ದಾರೆ ಎಂದು ಪ್ರಕಟಿಸುವ ಮೂಲಕ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದ ಹಫಿಂಗ್ಟನ್ ಪೋಸ್ಟ್ ಮಂಗಳವಾರ ವಿಶ್ವದ ಶ್ರೀಮಂತ ನಾಯಕರ ಪಟ್ಟಿಯಿಂದ ಸೋನಿಯಾ ಅವರ ಹೆಸರನ್ನು ತೆಗೆದುಹಾಕಿದೆ.

ಸೋನಿಯಾ ಗಾಂಧಿ ಮತ್ತು ಕತಾರ್‌ನ ಮಾಜಿ ದೊರೆ ಹಮೀದ್ ಬಿನ್ ಖಲೀಫಾ ಅಲ್-ಥಾನಿ ಅವರ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಹಫಿಂಗ್ಟನ್ ಪೋಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

`ವೆಬ್‌ಸೈಟ್‌ವೊಂದರ ಮಾಹಿತಿ ಆಧಾರದ ಮೇಲೆ ಸೋನಿಯಾ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಮೊತ್ತವನ್ನು ನಮ್ಮ ಸಂಪಾದಕರು ಪರಿಶೀಲಿಸಲು ಸಾಧ್ಯವಾಗಿಲ್ಲ. ಪಟ್ಟಿಯಲ್ಲಿದ್ದ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರಿಂದ ಉಂಟಾದ ಗೊಂದಲಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ' ಎಂದು ಹಫಿಂಗ್ಟನ್ ಪ್ರಕಟಣೆಯಲ್ಲಿ ಹೇಳಿದೆ.

ಸದ್ಯ, ಅಧಿಕಾರದಲ್ಲಿರುವ ಅಧ್ಯಕ್ಷರು, ದೊರೆಗಳು, ರಾಜರು ಸೇರಿದಂತೆ ವಿಶ್ವದ ಸಿರಿವಂತರ ನಾಯಕರ ಮಾಹಿತಿಯನ್ನು ಸಂಗ್ರಹಿಸಿದ ಹಂಫಿಗ್ಟನ್ ಇತ್ತೀಚೆಗೆ ಅವರ ಪಟ್ಟಿ ಬಿಡುಗಡೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT