ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ಎಸ್‌ಎಂಎಸ್ ಮೂಲಕ ಮಾಹಿತಿ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಅನಧಿಕೃತ ಮತ್ತು ಅಕ್ರಮ ಷೇರು ವಹಿವಾಟು ತಡೆಯುವ ನಿಟ್ಟಿನಲ್ಲಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ(ಸೆಬಿ) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಹೂಡಿಕೆದಾರರಿಗೆ `ಎಸ್‌ಎಂಎಸ್~ ಮತ್ತು ಇ-ಮೇಲ್ ಮೂಲಕ ಪ್ರತಿ ವಹಿವಾಟಿನ ವಿವರ ನೀಡುವಂತೆ ವಿನಿಮಯ ಕೇಂದ್ರಗಳಿಗೆ ಸೂಚಿಸಿದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಈಗಾಗಲೇ ಇಂಥದೊಂದು ತಂತ್ರಜ್ಞಾನ ಜಾರಿಗೊಳಿಸಿದೆ. ಅ. 15ರಿಂದ ಚಿಲ್ಲರೆ ಹೂಡಿಕೆದಾರರಿಗೂ ಇ-ಮೇಲ್, ಎಸ್‌ಎಂಎಸ್ ಆಧಾರಿತ ಸೇವೆಗಳು ಲಭಿಸಲಿವೆ ಎಂದಿದೆ. `ಬಿಎಸ್‌ಇ~ ಮತ್ತು `ಎನ್‌ಎಸ್‌ಇ~ ತಮ್ಮ ಹೂಡಿಕೆದಾರರಿಗೆ ಮೊಬೈಲ್ ಸಂಖ್ಯೆ  ಮತ್ತು ಇ-ಮೇಲ್ ವಿಳಾಸವನ್ನು `ಯೂನಿಕ್ ಕ್ಲೈಂಟ್ ಕೋಡ್~ ದತ್ತಾಂಶ ವ್ಯವಸ್ಥೆಗೆ ಅಪ್‌ಲೋಡ್ ಮಾಡುವಂತೆ ಸೂಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT