ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ವಾಣಿಜ್ಯ ಸುದ್ದಿಗಳು

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಗೃಹಸಾಲ ಬಡ್ಡಿ ಶೇ 1 `ಸಬ್ಸಿಡಿ~: ಚರ್ಚೆ ಇಂದು
ನವದೆಹಲಿ(ಪಿಟಿಐ):
ಪ್ರಸಕ್ತ ಸಾಲಿನ ಮುಂಗಡಪತ್ರದಲ್ಲಿ ಘೋಷಿಸಿದಂತೆ ರೂ.15 ಲಕ್ಷದವರೆಗಿನ `ಗೃಹಸಾಲ~ಕ್ಕೆ ಶೇ 1ರಷ್ಟು ಬಡ್ಡಿಯ ಸಹಾಯಧನ ನೀಡುವ ಯೋಜನೆ ಸಂಬಂಧ ಕೇಂದ್ರ ಸಚಿವ ಸಂಪುಟ ಮಂಗಳವಾರ ಸಭೆ ಸೇರಿ ಚರ್ಚಿಸಲಿದೆ. ಯೋಜನೆಯನ್ನು 1 ವರ್ಷದ ಅವಧಿಗೆ ಜಾರಿಗೊಳಿಸುವ ಸಂಬಂಧ ನಿರ್ಧಾರ ಕೈಗೊಳ್ಳುವ ಸಂಭವವಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ರೈಲು: ಸೇವೆ ತೆರಿಗೆ ಇಲ್ಲ
ನವದೆಹಲಿ(ಪಿಟಿಐ):
`ಸೇವಾ ತೆರಿಗೆ~ ಹಿನ್ನೆಲೆಯಲ್ಲಿ ರೈಲು ಪ್ರಯಾಣ ಮತ್ತು ಸರಕು ಸಾಗಣೆ ದರ ಏರುವುದೇ ಎಂಬ ಕುತೂಹಲಕ್ಕೆ `ಸೆಪ್ಟೆಂಬರ್ 30~ರವರೆಗೂ ಇಲ್ಲ ಎಂಬ ಸಮಾಧಾನದ ಉತ್ತರ ದೊರಕಿದೆ.

ಮುಂದಿನ ಮೂರು ತಿಂಗಳವರೆಗೂ ರೈಲು ಪ್ರಯಾಣ ಮತ್ತು ಸರಕು ಸಾಗಣೆ ವ್ಯವಸ್ಥೆಯನ್ನು `ಶೇ 12ರ ಸೇವಾ ತೆರಿಗೆ ವ್ಯಾಪ್ತಿಗೆ ತರುವುದಿಲ್ಲ~ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ. ಇದಕ್ಕೆ ಮುನ್ನ, ಹೊಸ ತೆರಿಗೆ ನೀತಿ ಭಾನುವಾರ ಜಾರಿಗೆ ಬಂದಿದ್ದು, ರೈಲು ಪ್ರಯಾಣ-ಸರಕು ಸಾಗಣೆಯನ್ನೂ `ಸೇವೆ~ ವ್ಯಾಪ್ತಿಗೆ ತರಲಾಗಿದ್ದಿತು.

ರೂಪಾಯಿಗೆ ಮತ್ತೆ ಮೌಲ್ಯ
ಮುಂಬೈ(ಪಿಟಿಐ):
ರೂಪಾಯಿ ಮತ್ತೆ ಶಕ್ತಿ ಪಡೆದುಕೊಳ್ಳುತ್ತಿದ್ದು, ಅಮೆರಿಕದ ಡಾಲರ್ ಎದುರು ಸೋಮವಾರ 18 ಪೈಸೆ ಮೌಲ್ಯ ಹೆಚ್ಚಿಸಿಕೊಂಡಿತು. ಆ ಮೂಲಕ ್ಙ55.43ರಷ್ಟು ಬೆಲೆ ಪಡೆದುಕೊಂಡಿತು. ಇದು ಕಳೆದ ಎರಡು ವಾರಗಳಲ್ಲಿಯೇ ರೂಪಾಯಿಯ ಗರಿಷ್ಠ ಮೌಲ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT