ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ನವನಗರ

Last Updated 30 ಡಿಸೆಂಬರ್ 2010, 11:25 IST
ಅಕ್ಷರ ಗಾತ್ರ

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ವಿಜಾಪುರ ಜಿಲ್ಲೆಯ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಅಣೆಕಟ್ಟೆಯ ಹಿನ್ನೀರಿನಿಂದ ಮುಳುಗಡೆಗೊಂಡಿದ್ದು ಬಾಗಲಕೋಟೆ ಪಟ್ಟಣ.  ಸಂತ್ರಸ್ತರಿಗಾಗಿ ಸ್ಥಾಪನೆಗೊಂಡ ಸಕಲ ಮೂಲಭೂತ ಸೌಕರ್ಯಗಳುಳ್ಳ ಹೊಸ ಊರು ನವನಗರ!

ಸಂತ್ರಸ್ತರ ಪುನರ್ವಸತಿಗಾಗಿ ನಿರ್ಮಾಣಗೊಂಡ ದೇಶದ ಅತೀ ದೊಡ್ಡ ಪುನರ್ವಸತಿ ಕೇಂದ್ರಗಳಲ್ಲಿ ನವನಗರವೂ ಒಂದಾಗಿದೆ.ಕೃಷ್ಣೆಯ ಉಪನದಿಯಾದ ಘಟಪ್ರಭೆಯ ಬಲದಂಡೆಯ ಮೇಲಿರುವ ಬಾಗಲಕೋಟೆ ನಗರವು ಆಲಮಟ್ಟಿಯಿಂದ ಸುಮಾರು 40 ಕಿ.ಮೀ. ಅಂತರದಲ್ಲಿದ್ದು, ಆಲಮಟ್ಟಿ ಅಣೆಕಟ್ಟೆಯ ಅಂತಿಮ ಘಟ್ಟ ಪೂರ್ಣಗೊಂಡಾಗ ನಗರದ ಬಹುಭಾಗವು ಹಿನ್ನೀರಿನಲ್ಲಿ ಮುಳುಗಡೆಗೊಳ್ಳಲಿದೆ.ಸದ್ಯಕ್ಕೆ ಅಣೆಕಟ್ಟೆಯಲ್ಲಿ 519.60 ಮೀ. ನೀರು ಸಂಗ್ರಹಿಸಲಾಗುತ್ತಿದ್ದು, ಬಾಗಲಕೋಟೆ ನಗರದ  ವ್ಯಾಪ್ತಿಯವರೆಗೆ ಹಿನ್ನೀರು ವ್ಯಾಪಿಸಿಕೊಳ್ಳುತ್ತದೆ. ಅಣೆಕಟ್ಟೆಯ ಎತ್ತರದ ಕುರಿತ ವಿವಾದ ಬಗೆಹರಿದ ಬಳಿಕ 527 ಮೀ.ವರೆಗೆ ಎತ್ತರ ಹೆಚ್ಚಿಸಿದರೆ ನಗರದ ಇನ್ನಷ್ಟು ಪ್ರದೇಶ ಮುಳುಗಡೆಯಾಗಲಿದೆ.

ನವನಗರದ ಎಂದರೆ ಬರೀ ಮನೆಗಳ ನಿರ್ಮಾಣ ಹಾಗೂ ನಿವೇಶನಗಳ ಹಂಚಿಕೆಯಲ್ಲ; ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಒಂದು ಊರನ್ನೇ ಮರು ನಿರ್ಮಾಣ ಮಾಡಲಾಗಿದೆ.ಪ್ರಸಿದ್ಧ ವಾಸ್ತುಶಿಲ್ಪಿ ಚಾರ್ಲ್ಸ್ ಕೋರಿಯಾ ಅವರು ತಯಾರಿಸಿದ ನೀಲ ನಕ್ಷೆಯ ಪ್ರಕಾರ ನವನಗರ ನಿರ್ಮಾಣ ಪ್ರಕ್ರಿಯೆ ನಡೆದಿದೆ. ಒಟ್ಟು 4326 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ನವನಗರದ ಯುನಿಟ್-1ರ 70  ಸೆಕ್ಟರ್‌ಗಳಲ್ಲಿ ಮಠ- ಮಂದಿರಗಳಿಂದ ಹಿಡಿದು ಸ್ಮಶಾನದವರೆಗೆ ಎಲ್ಲವನ್ನೂ ನಿರ್ಮಿಸಲಾಗಿದೆ.ಸರ್ಕಾರಿ ಕಚೇರಿಗಳು, ರಸ್ತೆಗಳು, ಬಸ್‌ನಿಲ್ದಾಣ, ಕೈಗಾರಿಕಾ ಪ್ರದೇಶ, ಮಾರುಕಟ್ಟೆಗಳು, ಚಿತ್ರಮಂದಿರ, ಶಾಲಾ- ಕಾಲೇಜುಗಳು, ಅಂಗನವಾಡಿಗಳು, ಆಸ್ಪತ್ರೆ, ಕ್ರೀಡಾಂಗಣ, ಉದ್ಯಾನಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT