ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಬಯಲು ಬಸವನ ರಥೋತ್ಸವ

Last Updated 8 ಫೆಬ್ರುವರಿ 2012, 7:55 IST
ಅಕ್ಷರ ಗಾತ್ರ

ಸೊರಬ: ಪಟ್ಟಣದ ಬಯಲು ಬಸವೇಶ್ವರ ರಥೋತ್ಸವ  ಶ್ರದ್ಧಾಭಕ್ತಿಯ ನಡುವೆ ಮಂಗಳವಾರ ಜರುಗಿತು.
ಬಯಲು ಬಸವನ ಸಹೋದರಿಯರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಹಿರೇಶಕುನದ ದುರ್ಗಮ್ಮ ಹಾಗೂ ಮಾರಿಕಾಂಬಾ ದೇವತೆಗಳ ಉತ್ಸವವನ್ನು ಜಾತ್ರಾ ಸ್ಥಳದವರೆಗೆ ಹಮ್ಮಿಕೊಳ್ಳಲಾಗಿತ್ತು.

ಹಿರೇಕೇರೂರಿನ ಹನುಮನಹಳ್ಳಿ, ಬತ್ತಿಕೊಪ್ಪದ ಕಲಾವಿದರಿಂದ ವೀರಗಾಸೆ ಏರ್ಪಡಿಸಲಾಗಿತ್ತು.  
ಸೋಮವಾರ ಗೊಗ್ಗೇಹಳ್ಳಿ ಸಂಗಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ರುದ್ರಾಭಿಷೇಕ, ಪುಷ್ಪರಥೋತ್ಸವ, ವಿಶೇಷ ಪೂಜೆಯೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಮಲ್ಲಿಕಾರ್ಜುನ ಶಾಸ್ತ್ರಿ ಹಾಗೂ ಶಿವಕುಮಾರ ಶಾಸ್ತ್ರಿ ಪೂಜಾವಿಧಿ ನೆರವೇರಿಸಿದರು.

ಫೆ. 8ರಂದು ಅವಭೃತ (ಓಕುಳಿ) ಧಾರ್ಮಿಕ ವಿಧಿ, 9ರಂದು ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. 
ಜಾತ್ರಾ ಸಮಿತಿಯ ಗುತ್ತಿ ಚೆನ್ನಬಸಪ್ಪ, ಫಾಲಾಕ್ಷಪ್ಪ, ರಾಜಶೇಖರಪ್ಪಗೌಡ, ನವೀನ್, ಚಂದ್ರಶೇಖರ್, ನಾಗರಾಜ್, ಗುರುನಾಥ, ಮಹೇಶಗೌಳಿ, ವಿಜಯಾಗೌಳಿ, ಸುಮಂತ್ ಕೋರಿ, ಶರತ್ ಸ್ವಾಮಿ, ಪಾಣಿ ರಾಜಪ್ಪ, ಸುತ್ತಮುತ್ತಲ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT