ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನ ಕೇಂದ್ರಕ್ಕೆ ಚಾಲನೆ

Last Updated 19 ಜುಲೈ 2012, 20:10 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರತ್ತ ಮತ್ತು ವ್ಹಿಟ್ನಿ ಯೂನೈಟೆಡ್‌ನ ತಾಂತ್ರಿಕ ಕಾರ್ಪೊರೇಷನ್ ಕಂಪೆನಿ ಸ್ಥಾಪಿಸಿರುವ ಸಂಶೋಧನ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಭಾರತದಲ್ಲಿ ಟರ್ಬೈನ್ ಜೆಟ್ ಎಂಜಿನ್ ತಾಂತ್ರಿಕತೆಯ ಕುರಿತು ಸಂಶೋಧನೆ ನಡೆಸಲು ಈ ಕೇಂದ್ರವನ್ನು ತೆರೆಯಲಾಗಿದೆ. ಕಂಪೆನಿಯು ವಿನ್ಯಾಸ ಮತ್ತು ಅಭಿವೃದ್ಧಿ ಅಷ್ಟೇ ಅಲ್ಲದೆ, ಪರಿಸರ ಸ್ನೇಹಿ ಗ್ಯಾಸ್ ಟರ್ಬೈನ್ ಎಂಜಿನ್‌ಗಳ ಉತ್ಪಾದನೆಗೆ ಒತ್ತು ನೀಡಲಿದೆ.

`ಭಾರತೀಯ ವಿಜ್ಞಾನ ಸಂಸ್ಥೆಯು ನಮ್ಮ ಸಂಶೋಧನೆಗೆ ಅನುಕೂಲವಾಗುವಂತಹ ಅನೇಕ ಅತ್ಯುತ್ತಮವಾದ ತಾಂತ್ರಿಕತೆಯನ್ನು ಒಳಗೊಂಡಿದೆ. ಮುಂದಿನ ಪೀಳಿಗೆಗೆ ಪರಿಸರ ಸ್ನೇಹಿ ಮತ್ತು ಮುಂದುವರಿದ ತಂತ್ರಜ್ಞಾನವನ್ನು ಕೊಡುಗೆಯಾಗಿ ನೀಡಲು ಇದು ಸಹಕಾರಿಯಾಗುತ್ತದೆ~ ಎಂದು ಕಂಪೆನಿಯ ಉಪಾಧ್ಯಕ್ಷ ಅಲ್ಲಾನ್ ಬ್ರಾಕೆಟ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT