ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ ಅತ್ಯಂತ ಕ್ಲಿಷ್ಟಕರ: ಡಾ.ಅಂಬಳಿಕೆ

Last Updated 3 ಡಿಸೆಂಬರ್ 2012, 7:13 IST
ಅಕ್ಷರ ಗಾತ್ರ

ಹಿರೇಕೆರೂರ: ಸಂಶೋಧನೆ ಅತ್ಯಂತ ಕ್ಲಿಷ್ಟಕರ ಕಾರ್ಯವಾಗಿದೆ. ರಾಜ್ಯದ ಆಯ್ದ 3600 ಗ್ರಾಮಗಳ ಚರಿತ್ರೆ ಪುಸ್ತಕವನ್ನು ಹೊರತರಲು ರೂ 9.36ಕೋಟಿ ಮೊತ್ತದ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಕಾರ್ಯಕ್ಕೆ 340 ಕ್ಷೇತ್ರ ತಜ್ಞರನ್ನು ನೇಮಿಸಿಕೊಳ್ಳಲಾಗುವುದು ಎಂದು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹೇಳಿದರು.

ಪಟ್ಟಣದ ತಾ.ಪಂ. ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಭೋಜರಾಜ ಪಾಟೀಲರ ಸಂಶೋಧನಾ ಕೃತಿ `ಹಿರೇಕೆರೂರ ತಾಲ್ಲೂಕು ಗ್ರಾಮನಾಮ ಅಧ್ಯಯನ' ವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಭಾರತೀಯ ಸ್ಥಳ ನಾಮ ಅಧ್ಯಯನ ಸಂಸ್ಥೆ ಮಾಡಬೇಕಾದ ಕೆಲಸವನ್ನು ಸಂಶೋಧಕ ಡಾ. ಭೋಜರಾಜ ಪಾಟೀಲರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯ ಎಂದಿಗೂ ಪಂಡಿತರು, ಪಾಮರರು ಎಂದು ಪ್ರತ್ಯೇಕಿಸುವುದಿಲ್ಲ. ವಿ.ವಿ. ವತಿಯಿಂದ ನಾಡಿನ ಸಂಸ್ಕೃತಿ, ಜಾನಪದ ಕಲೆ ಅಧ್ಯಯನಕ್ಕೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಜಿಲ್ಲೆಯ ಎಲ್ಲ ಗ್ರಾಮಗಳ ಚರಿತ್ರೆಯುಳ್ಳ ಕೈಪಿಡಿಯನ್ನು ಹೊರತರುವ ಉದ್ದೆೀಶ ಹೊಂದಿದ್ದು, ಈಗಾಗಲೇ 705 ಗ್ರಾಮಗಳ ಚರಿತ್ರೆಯನ್ನು ಸಂಗ್ರಹಿಸಲಾಗಿದೆ ಎಂದರು.

ನಿರುದ್ಯೋಗಿ ಪದವೀಧರರಿಗೆ ಅನುಕೂಲ ಕಲ್ಪಿಸಲು ಒಂದು ಲಕ್ಷ ರೂಪಾಯಿ ಅನುದಾನದಲ್ಲಿ ಒಂದು ವರ್ಷ ಅವಧಿಯಲ್ಲಿ ಕಿರು ಸಂಶೋಧನೆ ಯೋಜನೆಯನ್ನು ಜಾರಿಗೊಳಿಸಿದೆ. ಪ್ರತಿ ತಿಂಗಳು ವಿವಿಗೆ ಸ್ಥಳೀಯ ಅಥವಾ ಹೊರಗಿನಿಂದ ಅತಿಥಿಗಳನ್ನು ಕರೆಸಿ ನಾಡಿನ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ತಿಂಗಳ ಅತಿಥಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ವಿಧಾನಸಭೆ ಮಾಜಿ ಅಧ್ಯಕ್ಷ ಬಿ.ಜಿ. ಬಣಕಾರ ಮಾತನಾಡಿ, ಗ್ರಾಮೀಣ ಪ್ರದೇಶಗಳ ಸಮಗ್ರ ಅಧ್ಯಯನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಭೋಜರಾಜ ಪಾಟೀಲರು ಹಳ್ಳಿಗಳ ಸ್ಥಳ ನಾಮವನ್ನು ಪರಿಚಯಿಸುವ ಉತ್ತಮ ಕೆಲಸ ಮಾಡಿದ್ದಾರೆ ಎಂದು ಶಾಘ್ಲೀಸಿದರು.

ಶಾಸನ ಹಾಗೂ ಗ್ರಾಮ ನಾಮ ಅಧ್ಯಯನ ತಜ್ಞ ಡಾ. ರಾಜಶೇಖರಪ್ಪ.ಬಿ.  ಮಾತನಾಡಿ, ಪ್ರತಿಯೊಬ್ಬರಿಗೂ ತಮ್ಮ ಸ್ಥಳ ನಾಮದ ಅರಿವಿರಬೇಕು. ಸ್ಥಳ ನಾಮ ಅಧ್ಯಯನ ಮಾಡಿ ಕೃತಿ ರಚನೆ ಮಾಡುವುದು ಸವಾಲಿನ ಕೆಲಸ ಭೋಜರಾಜ ಪಾಟೀಲ ಅಂತಹ ಸವಾಲನ್ನು ಸ್ವೀಕರಿಸಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಕೃತಿಯನ್ನು ಹೊರತಂದಿದ್ದಾರೆ ಎಂದರು.

ತಿಪ್ಪಾಯಿಕೊಪ್ಪ ಮಠದ ವಿರೂಪಾಕ್ಷ ಸ್ವಾಮೀಜಿ, ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.

ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಮಾಸಣಗಿ, ಖಜಾಂಚಿ ಎಂ.ಎನ್. ಪಾಟೀಲ, ವಕೀಲ ಎನ್.ಜಿ. ಬಣಕಾರ, ಸತೀಶ ಕುಲಕರ್ಣಿ, ವಿ.ಎಚ್. ಮಾಸೂರ, ನಿಂಗಪ್ಪ ಚಳಗೇರಿ, ಕೆ.ಎಚ್. ಮುಕ್ಕಣ್ಣನವರ, ವಾಸುದೇವ ಲದ್ವಾ, ಎಲ್.ಬಿ. ತೆಂಬದ, ಲೀಲಾವತಿ ಪಾಟೀಲ, ಪೂರ್ಣಿಮಾ ಕಾರಗಿ, ಎಂ.ಬಿ. ಕಾಗಿನೆಲ್ಲಿ, ಅಶೋಕ ಹಳ್ಳಿಯವರ, ಬಿ.ಎಚ್. ನಾಯಕ, ಬಸವರಾಜ ಪೂಜಾರ ಮೊದಲಾದವರು ಉಪಸ್ಥಿತರಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ. ಗೌಡರ ಪ್ರಾಸ್ತಾವಿಕ ಮಾತನಾಡಿದರು, ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ ಗೊಲ್ಲರ ನಿರೂಪಿಸಿದರು. ರಾಘವೇಂದ್ರ ಹಂಚಿನಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT